ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

ಅವರು ಬುಧವಾರ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಪೊಲೀಸರ ಮೇಲಿದ್ದು, ಸಮವಸ್ತ್ರ ಧರಿಸಿದ ಮೇಲೆ ಸಾವಿಗಂಜದೆ, ಸಮಾಜ ರಕ್ಷಣೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು. ದೇಶದ ಹೊರಗಿನ ಶತ್ರುಗಳನ್ನು ಎದುರಿಸಲು ಸೈನಿಕರಿದ್ದಂತೆ ಆಂತರಿಕ ಶತ್ರುಗಳನ್ನು ನಿಗ್ರಹಿಸುವ ಸಾಹಸದ ಜವಾಬ್ದಾರಿ ಪೊಲೀಸ್‌ರ ಮೇಲಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇಲ್ಲದಿರುವುದು, ಕರ್ತವ್ಯ ನಿರ್ವಹಣೆ ಕಷ್ಠಕರವಾಗುತ್ತಿದೆ ಎಂದು ವಿಷಾದಿಸಿದರು. ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಎಲ್ಲಾ ರೀತಿಯ ಕಲೆಯನ್ನು ಪೊಲೀಸರು ರೂಢಿಸಿಕೊಂಡು ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಮೃತ ಪೊಲೀಸರ ಸ್ಮರಣೆ ಮಾಡಿದ ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್ ಅವರು ಮಾತನಾಡಿ, ದೇಶದ ರಕ್ಷಣೆ ವಿಚಾರ ಬಂದಾಗ ಪೊಲೀಸರು ಎಂತಹುದೆ ತ್ಯಾಗಕ್ಕೂ ಹಿಂಜರಿಯುವುದಿಲ್ಲ. ಆದರೆ ಪ್ರಾಣದ ಹಂಗುತೊರೆದು ಸಮಾಜ ರಕ್ಷಣೆ ಮಾಡಿದರೂ ಅವರಿಗೆ ಮಾನ್ಯತೆ ಸಿಗದಿರುವುದು ವಿಷಾದನೀಯವೆಂದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ, ಹೆಚ್ಚುವರಿ ರಕ್ಷಣಾಧಿಕಾರಿ ಕೆ.ಶ್ರೀಕಂಠ ಸೇರಿದಂತೆ ಹಲವಾರು ಗಣ್ಯರು ಮೃತ ಪೊಲೀಸರನ್ನು ಸ್ಮರಿಸಿ, ಹೂಗುಚ್ಫವಿಟ್ಟು ಗೌರವ ಸಲ್ಲಿಸಿದರು. ನಗರದ ಹಲವಾರು ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications