ಪಟಾಕಿ ಗೋದಾಮಿಗೆ ಬೆಂಕಿ: 32 ಮಂದಿ ಸಾವು

ದೀಪಾವಳಿ ಪ್ರಯುಕ್ತ ಪಟಾಕಿ ಕೊಳ್ಳಲು ಇಲ್ಲಿಗೆ ಭಾರಿ ಸಂಖ್ಯೆಯ ಜನ ಆಗಮಿಸಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸುವ ವೇಳೆಗೆ 32ಜನ ಸುಟ್ಟು ಕರಕಲಾಗಿದ್ದರು. ಮೃತಪಟ್ಟವರಲ್ಲಿ ಅಂಗಡಿಯ ಸಿಬ್ಬಂದಿಯೂ ಸೇರಿದ್ದಾರೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ವಿವರ ನೀಡಿದ್ದಾರೆ.
ಪಟಾಕಿ ಅಂಗಡಿ ಮಾಲೀಕಜೈಶಂಕರ್ ಮತ್ತು ಪಟಾಕಿ ವ್ಯಾಪಾರ ನಡೆಸುತ್ತಿದ್ದ ಆನಂದಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿಯಲ್ಲಿ ಆಂಧ್ರದ ಹನ್ನೆರಡು ಮಂದಿ ಮತ್ತು ತಮಿಳು ನಾಡಿನ ನಾಲ್ಕು ಮಂದಿ ಕೆಲಸ ಮಾಡುತ್ತಿದ್ದರು. ಈ ದುರ್ಘಟನೆಯಲ್ಲಿ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿ ಒಮ್ಮೆಲೆ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ದಾರುಣ ಸ್ಥಿತಿ ನೆಲೆಗೊಂಡಿದೆ.
(ಏನೆನ್ಸೀಸ್)












Click it and Unblock the Notifications