ಚಿನ್ನದ ಬೆಲೆ ಇದೀಗ ಬರೋಬ್ಬರಿ 16,000 ರು.
ಮುಂಬೈ,
ಅ. 14 : ಬೆಳಕಿನ ಹಬ್ಬ ದೀಪಾವಳಿಗೆ ಚಿನ್ನ ಕೊಳ್ಳಬೇಕು ಎಂದುಕೊಂಡವರಿಗೊಂದು ಕಹಿ ಸುದ್ದಿ ಕಾದಿದೆ. ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಸದ್ಯದ ಬೆಲೆ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 16,000 ರುಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ನಾಗಾಲೋಟದಿಂದ ಸಾಗಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲೂ ಇದರ ಪರಿಣಾಮ ಬೀರಿದೆ. id="toptextpromo">ಕಳೆದ
ಸೋಮವಾರ 10 ಗ್ರಾಂ ಚಿನ್ನಕ್ಕೆ 15,930 ರುಪಾಯಿ ಆಗಿತ್ತು. ದೀಪಾವಳಿ ಹಬ್ಬ ನಿಮಿತ್ತವಾಗಿ ಚಿನ್ನ ಖರೀದಿಗೆ ಭಾರಿ ಬೇಡಿಕೆ ಬಂದಿದೆ. ಇದರಿಂದಾಗಿ ಚಿನ್ನ ಬೆಲೆ ಗಗನಕ್ಕೇರಿದೆ ಎಂದು ಚಿನಿವಾರ ಪೇಟೆ ಹೇಳಿದೆ. ಇಂದಿನ ಬೆಲೆ 10 ಗ್ರಾಂಗೆ 16,035 ರುಪಾಯಿ ಆಗಿದೆ. ಬೆಳಕಿನ ಹಬ್ಬಕ್ಕೆ ಚಿನ್ನ ಖರೀದಿಸಬೇಕು ಎನ್ನುವವರಿಗೆ ಅದರ ಬೆಲೆ ಭಯ ಮೂಡಿಸಿರುವುದಂತೂ ಸುಳ್ಳಲ್ಲ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications