ಸಂಬಳ ಹೆಚ್ಚು ಪಡೆಯಲು ಸಿದ್ಧರಾಗಿ

ಮರ್ಸರ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗ ನಡೆಸಿರುವ ಒಂದು ಸಮೀಕ್ಷೆ ಪ್ರಕಾರ ಬರುವ ವರ್ಷದಲ್ಲಿ ನೌಕರರ ಸಂಬಳ ಸರಾಸರಿ 10 ಕ್ಕೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ನೌಕರರನ್ನು ವಜಾಗೊಳಿಸುವುದು, ವೆಚ್ಚ ಕಡಿಮೆ ಮಾಡುವ ಚಾಳಿಗೆ ಸ್ಪಲ್ವ ಬ್ರೇಕ್ ಬೀಳಲಿದ್ದು ಕಂಪನಿಗಳು ಮತ್ತೆ ಕೆಲಸಗಾರರನ್ನು ನೇಮಿಸಿಕೊಳ್ಳುವ ಹಾದಿಯಲ್ಲಿ ಹೆಜ್ಜೆ ಇಡುತ್ತಿವೆ. ನಿಮ್ಮ ಕಚೇರಿಯ ಕಾಫಿ ಮೆಷೀನ್ 24x7 ಕೆಲಸ ಮಾಡುವ ದಿನಗಳು ದೂರವಿಲ್ಲ ಎಂದೇ ಹೇಳಬಹುದು!
ಭಾರತೀಯ ಉದ್ಯಮ ವಲಯಗಳ ಅಂದಾಜಿನ ಪ್ರಕಾರ 2008 ರಲ್ಲಿ ನೌಕರರ ಸಂಬಳಗಳು ಶೇ. 8 ರಿಂದ 9 ರಷ್ಟು ಹೆಚ್ಚಾದವು. 2007ರಲ್ಲಿ ಇದು ಶೇ. 13 ರಷ್ಟಿತ್ತು. ಪ್ರಸಕ್ತ ವರ್ಷದಲ್ಲಿ ಅಂದರೆ 2009 ರಲ್ಲಿ ಸಂಬಳ ಏರಿಕೆಯ ಪ್ರಮಾಣ ಸುಮಾರು 8 ರಷ್ಟಿದೆ.
(ಏಜೆನ್ಸೀಸ್)












Click it and Unblock the Notifications