ತಿಮ್ಮಪ್ಪನ ಗರ್ಭಗುಡಿಗೆ ಚಿನ್ನದ ಹೊದಿಕೆ ಏಕೆ ?

Lord Venkateshwara
ಚೆನ್ನೈ, ಅ. 12 : ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ಗರ್ಭಗುಡಿಯ ಹೊರಗೋಡೆಗೆ ಚಿನ್ನ ಹೊಂದಿಸುವ ಕೆಲಸವನ್ನು ತಕ್ಷಣ ಕೈಬಿಡಬೇಕೆಂದು ವಿಶ್ವ ಹಿಂದೂ ಪರಿಷತ್ ದೇವಾಲಯದ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದೆ.

ಪ್ರಮುಖ ದೇವಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಹೊದಿಕೆ ಹಾಕುವ ಗೀಳು ಹುಟ್ಟಿಕೊಂಡಿದೆ. ಇದಕ್ಕೆ ಧಾರ್ಮಿಕ ಪಾವಿತ್ರ್ಯವಿಲ್ಲ. ಬರೀ ರಾಜಕಾರಣಿಗಳ ಅಭಿಲಾಷೆಗಾಗಿ ಈ ಕೆಲಸ ನಡೆಯುತ್ತಿದೆ ಎಂದು ವಿಎಚ್ ಪಿ ಕಾರ್ಯಾಧ್ಯಕ್ಷ ವೇದಾಂತಂ ಹೇಳಿಕೆ ನೀಡಿದ್ದಾರೆ.

ಚಿನ್ನ ಹೊಂದಿಸುವುದರಿಂದ ಗೋಡೆಗಳಲ್ಲಿನ ಶಾಸನ ಮತ್ತು ಚಿತ್ರಗಳಿಗೆ ಧಕ್ಕೆ ಉಂಟಾಗುತ್ತದೆ. ಈ ಶಾಸನಗಳು ನಮ್ಮ ಸಂಪ್ರದಾಯದ ಮತ್ತು ಇತಿಹಾಸದ ಬೆಲೆ ಕಟ್ಟಲಾಗದ ಸಂಪತ್ತುಗಳು. ಚಿನ್ನದ ಹೊದಿಕೆಬೇಕೆಂದು ಯಾರೂ ಬೇಡಿಕೆ ಇಟ್ಟಿಲ್ಲ ಎಂದು ಟಿಟಿಡಿ ಅಧ್ಯಕ್ಷ ಆದಿಕೇಶವಲು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಬ್ರಹ್ಮೋತ್ಸವದ ಸಂದರ್ಭದಲ್ಲಿ 150 ಕೋಟಿ ರುಪಾಯಿ ವೆಚ್ಚದಲ್ಲಿ ಚಿನ್ನ ಹೊಂದಿಸುವ ಪ್ರಥಮ ಯೋಜನೆಯನ್ನು ದಿವಂಗತ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ ಉದ್ಘಾಟಿಸಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+