ಹುಬ್ಬಳ್ಳಿ : ಪ್ರೀತಿಸಿದವಳನ್ನು ಕೊಂದ ಯುವಕ

ಮೇಘಾ ಸಾವಂತ್ (18) ಮೃತಪಟ್ಟಿರುವ ನತದೃಷ್ಟೆ. ಪಾಲಿಟೆಕ್ನಿಕ್ ವಿದ್ಯಾರ್ಥಿನಿಯಾಗಿದ್ದ ಮೇಘಾ, ಪ್ರವೀಣ ಶಿರ್ಲಾಪುರ್ ಎಂಬ ಯುವಕನೊಂದಿಗೆ ಲವ್ ಇತ್ತಂತೆ. ಅದು ಅನೇಕ ದಿನಗಳ ಕಾಲ ನಡೆದೂ ಇತ್ತು. ಆದರೆ, ಇತ್ತೀಚೆಗೆ ಮೇಘಾ, ಪ್ರವೀಣನನ್ನು ಅವೈಡ್ ಮಾಡಿ ಬೇರೊಬ್ಬ ಗೆಳೆಯನೊಂದಿಗೆ ಪ್ರೀತಿ ಪ್ರೇಮದ ಸಲ್ಲಾಪಗಳನ್ನು ಶುರು ಹಚ್ಚಿಕೊಂಡಿದ್ದಳಂತೆ. ಈ ವಿಷಯವೇ ಪ್ರವೀಣನ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.
ಇಂದು ಬೆಳ್ಳಂಬೆಳಗ್ಗೆ ಅಯೋಧ್ಯಾ ಹೋಟೆಲ್ ನಲ್ಲಿ ಈ ಇಬ್ಬರು ಪ್ರೇಮಿಗಳು ಸೇರಿದ್ದಾರೆ. ಟೀ ಕಾಫಿ ಕುಡಿದಿದ್ದರೂ ಇಲ್ಲವೋ ಗೊತ್ತಿಲ್ಲ. ಮೇಘಾಳನ್ನು ನೆಲಕ್ಕೆ ಹಾಕಿದ ಪ್ರವೀಣ ತಾನೇ ತಂದಿದ್ದ ಚಾಕುವಿನಿಂದ ಆಕೆಯ ಕುತ್ತಿಗೆಯನ್ನು ಕೊಯ್ದಿದಿದ್ದಾನೆ. ತೀವ್ರವಾದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೇಘಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮೇಘ ಮೃತಪಟ್ಟಿರುವುದು ಖಾತ್ರಿಯಾಗುತ್ತಿದ್ದಂತೆಯೇ ಪ್ರವೀಣ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಹೋಟೆಲ್ ನಲ್ಲಿದ್ದ ಜನ ಬಂದು ನೋಡುವಷ್ಟರಲ್ಲಿ ಮೇಘಾಳ ಜೀವ ಹಾರಿಹೋಗಿದೆ. ಪ್ರವೀಣನನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications