ಮಾವೋವಾದಿ ಉಗ್ರರ ದಾಳಿ: 18 ಪೊಲೀಸರ ಹತ್ಯೆ
ನಾಗಪುರ,
ಅ. 9 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 5 ದಿನಗಳು ಬಾಕಿ ಇರುವ ಬೆನ್ನಲ್ಲಿಯೇ ಮಾವೋವಾದಿ ಉಗ್ರರು ಅಟ್ಟಹಾಸ ಮೆರೆದಿದ್ದು, ಗಡ್ಚಿರೋಲಿ ಜಿಲ್ಲೆಯ ಲಹೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 17 ಪೋಲೀಸರನ್ನು ಗುಂಡಿಕ್ಕಿ ಸಾಯಿಸಿದ್ದಾರೆ. id="toptextpromo">45
ಪೋಲಿಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು 150 ಕ್ಕೂ ಹೆಚ್ಚು ಮಾವೋವಾದಿ ಉಗ್ರರು ಏಕಾಏಕಿ ದಾಳಿ ನಡೆಸಿದರು. ಸುಮಾರು 4 ತಾಸುಗಳಿಗೂ ಹೆಚ್ಚು ಕಾಲ ಪರಸ್ಪರ ಗುಂಡಿನ ಚಕಮಕಿ ನಡೆದಾಗ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 17 ಸಿಬ್ಬಂದಿ ಗುಂಡಿನ ಕಾಳಗದಲ್ಲಿ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಉಗ್ರರು ಪೊಲೀಸ್ ಮಾಹಿತಿದಾರ ಸುರೇಶ್ ಅಲಮಿ ಎಂಬಾತನ ಶಿರಚ್ಛೇದ ಮಾಡಿ ಇದೇ ಪ್ರದೇಶದಲ್ಲಿನ ಗ್ರಾಮ ಪಂಚಾಯ್ತಿ ಕಾರ್ಯಾಲಯವೊಂದಕ್ಕೆ ಬೆಂಕಿ ಹಚ್ಚಿದ್ದಾರೆಂದು ವರದಿಯಾಗಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications