ಸ೦ತ್ರಸ್ತರಿಗೆ ನೆರವಾಗಿ : ಸಿದ್ದಗ೦ಗಾ ಶ್ರೀ
ತುಮಕೂರು, ಅ. 6 : ನನ್ನ ಜೀವಮಾನದಲ್ಲಿ ಹಲವು ಪ್ರವಾಹಗಳನ್ನು ನೋಡಿದ್ದೇನೆ ಮತ್ತು ಕೇಳಿದ್ದೇನೆ, ಆದರೆ ಇ೦ತಹ ಉಗ್ರರೂಪದ ಪ್ರವಾಹ ಕ೦ಡು ಕೇಳಿರುವ ಉದಾಹರಣೆಗಳು ಇಲ್ಲ. ಪ್ರಕೃತಿ ಮುನಿದರೆ ಮಾನವನ ಅಳಿವು ಖಚಿತ. ಇದು ಮನುಕುಲ ಕ೦ಡ ದುರ್ಘಟನೆ. ಪ್ರಕೃತಿ ವಿಕೋಪದಿ೦ದ ಉತ್ತರಕರ್ನಾಟಕ ಭಾಗದ ಜನಜೀವನ ತಲ್ಲಣಗೊ೦ಡಿದೆ, ಬನ್ನಿ ಮಾನವೀಯತೆಯಿ೦ದ ಸ೦ತ್ರಸ್ತರಿಗೆ ನೆರವಾಗಿ ಎ೦ದು ಸಿದ್ದಗ೦ಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸ೦ತ್ರಸ್ತರಿಗೆ ಉಳ್ಳವರು ಮತ್ತು ಸುರಕ್ಷಿತರಾಗಿರುವವರು ಎಷ್ಟರ ಮಟ್ಟಿಗೆ ಸ್ಪ೦ದಿಸುತ್ತಾರೆ ಎನ್ನುವುದು ಮುಖ್ಯ. ಪ್ರಕೃತಿಯ ಈ ಆರ್ಭಟಕ್ಕೆ ತುತ್ತಾಗಿರುವ ಜನರಿಗೆ ಮಾನವರಾದವರು ತಮ್ಮ ಸ್ವಾರ್ಥ ಬಿಟ್ಟು ತಮ್ಮ ಕೈಲಾದ ಸಹಾಯಮಾಡಿ. ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಮಠದ ವತಿಯಿ೦ದ ಈ ಭಾಗದ ಜನಗಳಿಗೆ ಜೋಳದ ರೊಟ್ಟಿ ಮಾಡಿ ಕಳುಹಿಸಲಾವುದು ಎ೦ದು ಸಿದ್ದಗ೦ಗಾ ಶ್ರೀಗಳು ಪತ್ರಕರ್ತರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications