ಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುವರ್ಣಭೂಮಿ'ಯಲ್ಲಿ ನೀವು ಇಳಿಯುತ್ತಿದ್ದಂತೆಯೇ ಅಲ್ಲೂ ಕೈಮುಗಿದು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ. ನೀವು ಅಂಗಡಿ-ಮಳಿಗೆ ಪ್ರವೇಶಿಸುವಾಗಲೂ ಕೈಮುಗಿದು ಸ್ವಾಗತ, ನಿರ್ಗಮಿಸುವಾಗಲೂ ಅಂಥದ್ದೇ ಸ್ವಾಗತ. ನೀವು ಏನನ್ನು ಖರೀದಿಸದಿದ್ದರೂ ಅವರ ಮುಖದಲ್ಲಿ ಬೇಸರವಿಲ್ಲ ಅಥವಾ ಇಲ್ಲಿ ನಾವು ಕಾಣುವ ಹಾಗೆ ಮುಖಸಿಂಡರಿಸಿಕೊಂಡು ಶಪಿಸುವುದಿಲ್ಲ.
ಥೈಲ್ಯಾಂಡ್ ದೇಶದ ಬಗ್ಗೆ ಯಾವುದೇ ಪ್ರವಾಸಿಗರಿಗೇ ಆಗಲೀ ಮೆಚ್ಚುಗೆ ಬರದಿರಲು ಕಾರಣಗಳೇ ಇಲ್ಲ. ಇಲ್ಲಿ ಬಹುಮುಖ್ಯವಾಗಿ ಗಮನ ಸೆಳೆಯುವ ಅಂಶವೆಂದರೆ ಸ್ವಚ್ಚತೆ. ಅಲ್ಲಿರುವ ರಸ್ತೆಗಳು, ಹೆದ್ದಾರಿಗಳು ನಮ್ಮ ಮನೆಯ ಪಡಸಾಲೆಗಿಂತಲೂ ನೀಟಾಗಿರುತ್ತವೆ ಅಂದರೆ ಉತ್ಪ್ರೇಕ್ಷೆ ಅಂದುಕೊಳ್ಳುವಿರಿ, ಆದರೆ ಖಂಡಿತಕ್ಕೂ ಅಲ್ಲಿನ ರಸ್ತೆಗಳು ಅಂಥಮೆಚ್ಚುಗೆಗೆ ಅರ್ಹವಾಗಿವೆ.
ನಮ್ಮ ರಾಜ್ಯದ ಅಥವಾ ಜಿಲ್ಲೆಯ ಯಾವುದೇ ನಗರದಲ್ಲೇ ಆಗಲಿ ವಾಹನಗಳು ಬ್ಲಾಕ್ ಆಗುವುದು, ರಸ್ತೆ ಸಂಚಾರ ಅಸ್ತವ್ಯಸ್ತವಾಗುದು ಸರ್ವೇಸಾಮಾನ್ಯ. ಆ ದೇಶದ ಹೆದ್ದಾರಿಗಳಲ್ಲೂ ಕೂಡಾ ಬ್ಲಾಕ್ ಆಗುವ ಪ್ರಮೇಯವೇ ಇಲ್ಲ, ಯಾಕೆಂದರೆ ಹೆದ್ದಾರಿ ಎಲ್ಲೂ ಒಂದನ್ನೊಂದು ಸಂಧಿಸುವಾಗಲೂ ಮತ್ತೊಂದು ವಾಹನ ನಿಂತು ಹೋಗಬೇಕಾಗಿಲ್ಲ. ಅಂಥ ಇಂಜಿನಿಯರಿಂಗ್ ಪರಿಣತಿ ಆ ಹೆದ್ದಾರಿ ನಿರ್ಮಾಣದಲ್ಲಿ ಕೆಲಸ ಮಾಡಿವೆ, ಆದ್ದರಿಂದಲೇ ಅಲ್ಲಿನ ಹೆದ್ದಾರಿಗಳೂ ಕೂಡಾ ಇತರ ದೇಶಗಳಿಗೆ ಮಾದರಿ ಎನ್ನಬಹುದು.
ನಾವು ಎಲ್ಲೆಂದರಲ್ಲಿ ಉಗುಳಬಹುದು ಇಲ್ಲಿ. ಯಾಕೆಂದರೆ ನಮ್ಮದು ಸ್ವತಂತ್ರದೇಶ ಮತ್ತು ನಾವೂ ಸ್ವತಂತ್ರರು, ನಾವು ಉಗುಳುವುದನ್ನು ಯಾರೂ ಇಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಥೈಲ್ಯಾಂಡ್ ದೇಶದ ರಸ್ತೆಯಲ್ಲೂ ನೀವು ಉಗುಳುವಂತಿಲ್ಲ. ನಮ್ಮೂರಲ್ಲಿ ನಿಮ್ಮ ಮೂಗಿನ ಸಿಂಬಳವನ್ನು ರಸ್ತೆಗೆ ಎಸೆದು ಅಥವಾ ನೀವು ಪ್ರಯಾಣಿಸುವ ವಾಹನದ ಹೊರಕವಚಕ್ಕೆ ಒರೆಸಿ ಕರವಸ್ತ್ರದಿಂದ ಕೈಒರೆಸಿಕೊಂಡು ಸುಮ್ಮನಾಗಬಹುದು. ಆದರೆ ಅಲ್ಲಿ ಉಗುಳುವಂತಿಲ್ಲ ಅಥವಾ ಪ್ರಯಾಣಿಸುವ ವಾಹದ ಹೊರಕವಚಕ್ಕೆ ಒರೆಸಿ ಏನೂಗೊತ್ತಿಲ್ಲದವರಂತೆ ನಟಿಸುವಂತಿಲ್ಲ, ಒಂದುವೇಳೆ ಭಾರತದಂತೆಯೇ ಅಲ್ಲೂ ಮಾಡಿದರೆ ಎಚ್ಚರಿಕೆ ಪಕ್ಕದಲ್ಲಿದ್ದವರಿಂದಲೇ ಬರುತ್ತದೆ. ಆದ್ದರಿಂದಲೇ ಅಲ್ಲಿನ ರಸ್ತೆಗಳಲ್ಲಿ ಯಾರೂ ಉಗುಳುವಿಲ್ಲ, ಅದಕ್ಕೇ ಅಲ್ಲಿನ ರಸ್ತೆಗಳು ಅಷ್ಟು ನೀಟಾಗಿವೆ.
ರಸ್ತೆಗಳ ಮೇಲೆ ಅಥವಾ ರಸ್ತೆ ಅಕ್ಕಪಕ್ಕದಲ್ಲಿ ಕಾಗದ, ತ್ಯಾಜ್ಯವನ್ನು ಎಸೆಯುವಂತಿಲ್ಲ. ನಿಮ್ಮ ಕೈಯಲ್ಲಿ ಕಾಗದ, ಪ್ಲಾಸ್ಟಿಕ್ ಇದ್ದರೆ ತ್ಯಾಜ್ಯ ಎಸೆಯಲೆಂದೇ ಅಲ್ಲಲ್ಲಿ ಇಟ್ಟಿರುವ ಕಸದತೊಟ್ಟಿಯನ್ನು ಬಳಕೆ ಮಾಡಬೇಕು. ರಸ್ತೆಗೆ ತ್ಯಾಜ್ಯ ಎಸೆದರೆ ನಿಮ್ಮನ್ನು ಪೊಲೀಸರು ಮೊದಲು ಸ್ವಾಗತಿಸಿ, ನಂತರ ನೀವು ಮಾಡಿದ ತಪ್ಪಿಗೆ ದಂಡಕಟ್ಟಿಸುತ್ತಾರೆ. ನಿಜಕ್ಕೂ ಇಂಥವೆಲ್ಲಾ ಸಂಗತಿಗಳು ನಮಗೆ ಚಿಕ್ಕದಾಗಿ ಕಾಣುತ್ತವೆ, ಆದರೆ ಥೈಲ್ಯಾಂಡ್ ದೇಶ ಸುತ್ತಾಡಿದರೆ ಇಂಥ ಅನೇಕ ಸಂಗತಿಗಳು ಗಮನ ಸೆಳೆಯುತ್ತವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications