ಬ್ರಹ್ಮೋತ್ಸವದಲ್ಲಿ ತಿರುಪತಿ ಆದಾಯ ಕಮ್ಮಿ !!

Tirumala Brahmotsavam fetches Rs 12.07 crore
ತಿರುಮಲ, ಅ. 1 : ಮಂಗಳವಾರ (ಸೆ 29) ಸಂಪನ್ನಗೊಂಡ ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವದ ವೇಳೆ ತಿರುಪತಿ ತಿರುಮಲ ದೇವಾಲಯ ಒಟ್ಟು 12.07 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯದಲ್ಲಿ ಮೂರು ಕೋಟಿ ರೂಪಾಯಿ ಕಮ್ಮಿಯಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣರಾವ್ ತಿಳಿಸಿದ್ದಾರೆ.

ಈ ಉತ್ಸವದ ವೇಳೆ ಸುಮಾರು ಏಳು ಲಕ್ಷ ಜನ ದೇವರ ದರ್ಶನ ಪಡೆದಿದ್ದರು. ಈ ಬಾರಿಯ ಬ್ರಹ್ಮೋತ್ಸವದ ವೇಳೆ ಹುಂಡಿಯಿಂದ 10.77 ಕೋಟಿ, ಲಡ್ಡು ಪ್ರಸಾದ ಮಾರಾಟದಿಂದ 1.16 ಕೋಟಿ ಮತ್ತು ದರ್ಶನ ಟಿಕೆಟ್ ನಿಂದ 14 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಕೃಷ್ಣರಾವ್ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲ ಉಂಟಾಗಿರುವ ಆರ್ಥಿಕ ಕುಸಿತ ತಿಮ್ಮಪ್ಪನ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಸಾಧ್ಯವಾದ ಮಟ್ಟಿಗೆ ಹಣ ಉಳಿಸುವ ನಿಟ್ಟಿನಲ್ಲಿ ಜನರು ಚಿಂತನೆ ನಡೆಸುತ್ತಿದ್ದಾರೆ. ಆರ್ಥಿಕ ಕುಸಿತ ಅಂತ್ಯ ಕಾಣಲಿ. ತಿಮ್ಮಪ್ಪನ ದರುಶನಕ್ಕೆ ನಂತರ ಹೋದರಾಯಿತು ಎನ್ನುವುದು ಅನೇಕ ಭಕ್ತರ ಅನಿಸಿಕೆಯಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+