ಅ.4 ಕ್ಕೆ ಕೋಲಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ನಗರದ ಎಪಿಎಂಸಿ ಯಾರ್ಡ್ ನ ಮುಂಭಾಗದ ವೈಕುಂಠ ಆವರಣದಲ್ಲಿ ಸಂಜೆ 4 ರಿಂದ 8.30 ರವರೆಗೆ ಕಲ್ಯಾಣೋತ್ಸವ ಜರುಗಲಿದೆ. ಸುಮಾರು 40 ಲಕ್ಷ ರು ವೆಚ್ಚದಲ್ಲಿ 10 ಎಕರೆ ಜಾಗದಲ್ಲಿ 100 X 200 ಅಡಿ ವೇದಿಕೆ ನಿರ್ಮಾಣವಾಗುತ್ತಿದೆ. ಕಳೆದ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಭರ್ಜರಿ ಯಶಸ್ಸು ಕಂಡಿತ್ತು.
ಸುಮಾರು50 ಸಾವಿರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಆಸ್ತಿಕರಿಗೆ ಯಾವುದೇ ತೊಂದರೆ ಆಗದಿರಲೆಂದು ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳು ವಿಶೇಷ ವ್ಯವಸ್ಥೆ ಮಾಡಲಿವೆ.ತಿರುಪತಿಯಿಂದ ಲಡ್ಡು ತರಿಸಲಾಗುತ್ತಿದ್ದು, ಭಾರಿ ಬೇಡಿಕೆ ಬಂದಿದೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಟಿಟಿಡಿ ಮುಖ್ಯಸ್ಥ ಡಿಕೆ ಆದಿಕೇಶವಲು, ಕಾರ್ಯಕಾರಿ ಅಧಿಕಾರಿ ಕೃಷ್ಣರಾವ್, ಪಿವಿಎಸ್ ರಾಮಕೃಷ್ಣ,ಡಾ. ವಿಜಯ ರಾಘವಾಚಾರ್ಲು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಮುಖ್ಯಸ್ಥ ಪಲ್ಲವಿ ಮಣಿ ಹೇಳಿದರು.
(ಏಜೆನ್ಸೀಸ್)











Click it and Unblock the Notifications