ಕ್ಯೊಸೆರಾ ಖರೀದಿಸಿದ ಮೈಂಡ್ ಟ್ರೀ

ಸುಮಾರು 6 ಮಿಲಿಯನ್ ಡಾಲರ್(ಸುಮಾರು 28,81,15,246ರು)ಹಣ ತೆತ್ತು ಕ್ಯೊಸೆರಾ ಸಂಶೋಧನಾ ಕೇಂದ್ರವನ್ನು ಮೈಂಡ್ ಟ್ರೀ ತನ್ನದಾಗಿಸಿಕೊಂಡಿದೆ. ಖರೀದಿಯ ಉಳಿದ ಮೊತ್ತ, ಮುಂಬರುವ ಆರ್ಧಿಕ ವರ್ಷದ ಆದಾಯ-ವ್ಯಯದ ಲೆಕ್ಕಾಚಾರದ ಮೇಲೆ ನಿಂತಿದೆ ಎಂದು ಮೈಂಡ್ ಟ್ರೀ ವಕ್ತಾರರು ಹೇಳಿದ್ದಾರೆ.
ಭಾರತದ ಕ್ಯೂಸೆರಾ ಕೇಂದ್ರ ದಲ್ಲಿ ಸುಮಾರು 600 ಜನ ಕೆಲಸಗಾರರಿದ್ದು, ನಿಸ್ತಂತು ಕ್ಷೇತ್ರದ ಅಭಿವೃದ್ಧಿ, ತಂತ್ರಾಂಶ ಸೇವೆ ನೀಡುವಲ್ಲಿ ನಿರತರಾಗಿದ್ದಾರೆ. ಹೊಸ ಬಗೆಯ ನಿಸ್ತಂತು ಉಪಕರಣ ವಿನ್ಯಾಸ ಹಾಗೂ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಾಗುವುದು. ಈ ಒಪ್ಪಂದ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಹಾಯ ಕವಾಗಲಿದೆ ಎಂದು ಮೈಂಡ್ ಟ್ರೀ ಪ್ರಾಡೆಕ್ಟ್ ವಲಯದ ಸಿಇಒ ಜಾನಕಿರಾಮ್ ಹೇಳಿದ್ದಾರೆ.
(ಏಜೆನ್ಸೀಸ್)












Click it and Unblock the Notifications