ಆಡ್ವಾಣಿಗೆ ಪೇಜಾವರಶ್ರೀಗಳ ಉಪದೇಶ

ವಿಜಯದಶಮಿಯ ದಿನವಾದ ಸೋಮವಾರ (ಸೆ 28) ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಶ್ರೀಗಳನ್ನು ಬರಮಾಡಿಕೊಂಡ ಆಡ್ವಾಣಿ, ರಾಜಕೀಯದಿಂದ ದೂರವಿರುವ ಇಂಗಿತ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಆದರೆ ನಿಮ್ಮಂತ ಹಿರಿಯ ರಾಜಕೀಯ ಮುತ್ಸದ್ದಿಗಳ ಅವಶ್ಯಕತೆ ಬಿಜೆಪಿಗೆ ಅವಶ್ಯಕವಾಗಿರುವುದರಿಂದ ಆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶ್ರೀಗಳು ಸೂಚಿಸಿದ್ದಾರೆನ್ನಲಾಗಿದೆ.
ಆಡ್ವಾಣಿ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಇತ್ತೀಚಿಗೆ ಮಹತ್ವದ ಚರ್ಚೆಯಾಗುತ್ತಿರುವುದು ಇದು ಮೂರನೇ ಬಾರಿ. ಲೋಕಸಭೆಯ ಚುನಾವಣೆಯ ನಂತರ ಆಡ್ವಾಣಿ ಪದತ್ಯಾಗಕ್ಕೆ ಮುಂದಾಗಿದ್ದರು. ನಂತರ ಆರ್ ಎಸ್ ಎಸ್ ಮುಖಂಡರು ಬಿಜೆಪಿಗೆ ಯುವ ನಾಯಕತ್ವದ ಅಗತ್ಯವಿದೆ ಎಂದು ಸಂದೇಶ ರವಾನಿಸಿದ್ದಾಗ ಮತ್ತು ಈಗ ಖುದ್ದು ಅವರೇ ನಿವೃತ್ತಿಯ ಸೊಲ್ಲೆತ್ತಿದ್ದಾರೆ.
(ಏಜನ್ಸೀಸ್)












Click it and Unblock the Notifications