ನೇತಾಜಿ ಕುಟುಂಬ ಆಸ್ಟ್ರಿಯಾದಲ್ಲಿ ವಾಸ

Maya and Anita Bose
ಶಿರಸಿ, ಸೆ.23: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಕುಟುಂಬ ಆಸ್ಟ್ರಿಯಾದಲ್ಲಿ ವಾಸಿಸುತ್ತಿರುವ ಬಗ್ಗೆ ವಿವರ ಲಭ್ಯವಾಗಿದ್ದು, ಜನವರಿಯಲ್ಲಿ ಅವರನ್ನು ಇಲ್ಲಿಗೆ ಆಹ್ವಾನಿಸಿ ಸಮಾರಂಭ ಆಯೋಜಿಸಲಾಗುವುದು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರತ್ಯೇಕ ಸೈನ್ಯ ಕಟ್ಟಿ ಹೋರಾಡಿದ ಬೋಸ್ ಅವರ ಕುಟುಂಬ ಎಲ್ಲಿದೆ, ಏನಾಗಿದೆ ಎಂಬ ಕುತೂಹಲ ದಿಂದ 3 ವರ್ಷದಿಂದ ಈಚೆಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಿದ್ದೇನೆ. ಪತ್ತೆದಾರಿ ರೀತಿಯಲ್ಲಿ ಕಾರ್ಯ ಮಾಡಿದ ನಂತರ ಇದೀಗ ಕುಟುಂಬದ ಸಂಪರ್ಕ ಸಾಧ್ಯವಾಗಿದೆ ಎಂದರು. ಪತ್ತೆ ಹಚ್ಚಿದ್ದು ಹೀಗೆ ನೇತಾಜಿ ಅವರ ಮರಣದ ಸತ್ಯಾಸತ್ಯತೆಯ ತನಿಖೆ ನಡೆ ಸಲು ಕೇಂದ್ರದಿಂದ ನೇಮಕ ಗೊಂಡಿದ್ದ ಮುಖರ್ಜಿ ಆಯೋಗ ವರದಿಯ ಮೂರು ಸಂಪುಟಗಳಲ್ಲಿಯೂ ನೇತಾಜಿ ಕುಟುಂಬ ದವರ ಬಗ್ಗೆ ಉಲ್ಲೇಖವಿಲ್ಲ.

ವಿದೇಶಾಂಗ ಮತ್ತು ಗೃಹ ಸಚಿವಾಲಯದಲ್ಲಿಯೂ ಸ್ಪಷ್ಟ ಮಾಹಿತಿ ಇರಲಿಲ್ಲ. ನಂತರ ಈ ಬಗ್ಗೆ ಹಿರಿಯರ ಜತೆ ಚರ್ಚಿಸಿ ಅವರ ಕುಟುಂಬದವರು ಎಲ್ಲಿದ್ದಾರೆ ಎಂಬ ಬಗ್ಗೆ ಹುಡುಕಾಟ ಪ್ರಾರಂಭಿಸಿದೆ. ನೇತಾಜಿ ಅವರು ಜರ್ಮನಿ, ಆಸ್ಟ್ರಿಯಾ ಜತೆ ನಿಕಟ ಸಂಪರ್ಕ ಹೊಂದಿದ್ದರು. 1936-37ರಲ್ಲಿ ಆಸ್ಟ್ರಿಯಾದಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿಯಿದೆ. ಕೆಲ ದಿನಗಳ ಹಿಂದೆ ವಿದೇಶ ಪ್ರವಾಸದಲ್ಲಿದ್ದಾಗ ಆಸ್ಟ್ರಿಯಾದಲ್ಲಿ ರಾಯಭಾರಿ ಕಚೇರಿಯಲ್ಲಿ ವಿಚಾರಿಸಿದೆ. ಅಲ್ಲಿನ ಭಾರತೀಯ ಕುಟುಂಬಗಳ ಯಾದಿಯಲ್ಲಿ ಬೋಸ್ ಕುಟುಂಬದ ಮಾಹಿತಿ ಇರಲಿಲ್ಲ. ನಂತರ ಅಲ್ಲಿ ಯೋಗ ತರಬೇತಿ ನೀಡುತ್ತಿರುವ ಸ್ವಾಮೀಜಿಯೊಬ್ಬರನ್ನು ಸಂಪರ್ಕಿಸಿದಾಗ, ಈ ಹಿಂದೆ ಇಂಡಿಯನ್ ನ್ಯಾಷನಲ್ ಆರ್ಮಿ ಪ್ರಧಾನ ಕಚೇರಿ ಸಹಾಯಕರಾಗಿದ್ದ ಕೆ.ಕೆ.ಶಾಂಡಿಲ್ಯ(86) ಅವರ ಭೇಟಿ ಸಾಧ್ಯವಾಯಿತು.

ಕೌಶಲ್ ಎನ್ನುವವರ ಮೂಲಕ ಆಸ್ಟ್ರಿಯಾದಲ್ಲಿರುವ ಬೋಸ್ ಹೌಸ್ ಮತ್ತು ಅಲ್ಲಿ ನೇತಾಜಿಯವರ ಮಗಳು ಅನಿತಾ ಬೋಸ್ ವಾಸಿಸುತ್ತಿದ್ದುದು ತಿಳಿದು ಬಂತು. ಅಲ್ಲದೇ, ಅನಿತಾ ಬೋಸ್ ಅವರ ಮಗಳು ಮಾಯಾ ಫೋಫ್ ಜರ್ಮನಿ ಯಲ್ಲಿ ಇದ್ದಾರೆಂದು ಗೊತ್ತಾಯಿತು. ಇಷ್ಟೆಲ್ಲ ಮಾಹಿತಿ ಲಭ್ಯವಾಗುವ ವೇಳೆಗೆ ಆಸ್ಟ್ರಿಯಾದಿಂದ ಮರಳುವ ಸಮಯವಾಗಿದ್ದರಿಂದ ಅವರನ್ನೆಲ್ಲ ಮುಖತಃ ಭೇಟಿಯಾಗಲು ಸಾಧ್ಯವಾಗಲಿಲ್ಲ. ಜನವರಿ 23ರಂದು ನೇತಾಜಿಯವರ ಜನ್ಮದಿನಾಚರಣೆ ಸಮಾರಂಭಕ್ಕೆ ಅನಿತಾ ಮತ್ತು ಮಾಯಾ ಅವರನ್ನು ಆಹ್ವಾನಿಸಿ ದೊಡ್ಡ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಅವರನ್ನು ಸಂಪರ್ಕಿಸಿದಾಗ, ಭಾರತದಲ್ಲಿ ಈವರೆಗೆ ತಮ್ಮನ್ನು ಗೌರವ ದಿಂದ ನಡೆಸಿಕೊಂಡಿಲ್ಲ ಎಂದಿದ್ದು ಕಾರ್ಯಕ್ರಮಕ್ಕೆ ಬರುವುದಕ್ಕೆ ಒಪ್ಪಿದ್ದಾರೆ ಎಂದು ಹೇಳಿದರು.

(ಸ್ನೇಹ ಸೇತು: ವಿಜಯಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+