ದುರ್ಗಿ ಗುಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಶಿವಮೊಗ್ಗ,ಸೆ. 18 : ನಗರದ ದುರ್ಗಿ ಗುಡಿಯಲ್ಲಿ ನಿನ್ನೆ ಮಧ್ಯರಾತ್ರಿ ಸಮಯದಲ್ಲಿ ಕಳ್ಳರು ಕೆಲವು ಅಂಗಡಿಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ದುರ್ಗಿಗುಡಿಯ ಶನಿಮಹಾತ್ಮ ದೇವಸ್ಥಾನದ ಬಳಿಯಿರುವ ಎಸ್.ಎಲ್.ವಿ.ಮೊಬೈಲ್ ಅಂಗಡಿ, ಭರತ್ ಕಮ್ಯೂನಿಕೇಷನ್ ಹಾಗೂ ತ್ರಿಲೋಕ್ ಬಟ್ಟೆ ಅಂಗಡಿಯ ಬಾಗಿಲನ್ನು ಕಳ್ಳರು ಮುರಿದಿರುವ ಘಟನೆ ನಡೆದಿದೆ. ಆದರೆ, ತ್ರಿಲೋಕ್ ಬಟ್ಟೆ ಅಂಗಡಿಯಲ್ಲಿ 2000 ರೂ. ನಗದನ್ನು ದೋಚಿರುವ ಕಳ್ಳರು, ಇನ್ನುಳಿದ ಅಂಗಡಿಗಳಲ್ಲಿ ಏನನ್ನೂ ಅಪಹರಿಸಲಾಗದೆ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಕಳ್ಳತನ ನಡೆಸಿರುವ ಘಟನೆಗಳು ನಡೆದಿದ್ದು, ನಗರದಲ್ಲಿ ಒಂದು ವ್ಯವಸ್ಥಿತ ತಂಡವೇ ಈ ಕೃತ್ಯದಲ್ಲಿ ತೊಡಗಿರಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂಬ ಸಂಶಯ ವ್ಯಕ್ತವಾಗತೊಡಗಿದೆ.












Click it and Unblock the Notifications