ಕ್ಯಾನ್ಸರ್ ನಿಂದ ಬಳಲುತ್ತಿರುವ ಎಂಪಿ ಪ್ರಕಾಶ್
ಬೆಂಗಳೂರು,
ಸೆ. 14 : ಜಂಟಲ್ ಮನ್ ರಾಜಕಾರಣಿ ಎಂದೇ ಖ್ಯಾತಿ ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಎಂಪಿ ಪ್ರಕಾಶ್ ಅವರು ಕರುಳಿಗೆ ಸಂಬಂಧಿತ ಕ್ಯಾನ್ಸರ್ ನಿಂದ ಬಳುತ್ತಿರುವ ಸಂಗತಿ ಇತ್ತೀಚೆಗೆ ನಡೆಸಿದ ಪರೀಕ್ಷೆ ಮೂಲಕ ತಿಳಿದು ಬಂದಿದೆ. ಈಗಾಗಲೇ ಅವರು ಕಿಮೋಥೇರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇಂದು(ಸೋಮವಾರ) ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. id="toptextpromo">ದೇಶದ
ಪ್ರಸಿದ್ಧ ಕ್ಯಾನ್ಸರ್ ರೋಗದ ತಜ್ಞ ಡಾ ಶೇಖರ್ ಪಾಟೀಲ್ ಅವರು ಪ್ರಕಾಶ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆರಂಭದಲ್ಲಿ ಕರುಳಿನ ಕ್ಯಾನ್ಸರ್ ಎಂದು ತಿಳಿದ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಆದರೆ, ಸಣ್ಣಕರುಳಿನಲ್ಲಿ ಚಿಕ್ಕ ಚಿಕ್ಕ ಹುಣ್ಣುಗಳಾಗುತ್ತಿದ್ದರಿಂದ ಕಿಮೋಥೇರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಸೋಮವಾರ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದು ಸುತ್ತಿನ ಸಂಪೂರ್ಣ ಪರೀಕ್ಷೆ ನಡೆಸಿ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆ ಮಾಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು. ಸದ್ಯ ಬೆಂಗಳೂರಿನಲ್ಲಿರುವ ಅವರ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications