ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಒಳನಾಡಿನಲ್ಲಿ ಭಾರೀಮಳೆ ನಿರೀಕ್ಷೆ

By Staff
|
Google Oneindia Kannada News

Monsoon rain deficit shrinks after late rain surge
ಬೆಂಗಳೂರು, ನವದೆಹಲಿ, ಸೆ. 7 : ತಡೆದ ಮಳೆ ಜಡಿದು ಹೊಡೆಯಿತು ಎನ್ನುವ ಹಾಗೆ ಕಳೆದ ಕೆಲ ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಮಳೆ ಸೆಪ್ಟೆಂಬರ್ ತಿಂಗಳ ಆರಂಭದಿಂದ ಚೇತರಿಸಿಕೊಂಡಿದ್ದು, ರಾಜ್ಯದ ಮಲೆನಾಡು, ಕರಾವಳಿ ಹಾಗೂ ಉತ್ತರ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಬುಧವಾರದವರೆಗೂ ಉತ್ತಮ ಮಳೆ ಬೀಳುವ ನಿರೀಕ್ಷೆಯಿದೆ. ಜೊತೆಗೆ ರಾಜ್ಯದ ಬಹುತೇಕ ಪ್ರದೇಶಗಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಕೆಲ ಪ್ರದೇಶಗಳನ್ನು ಹೊರತುಪಡಿಸಿ ಈವರೆಗೂ ಕರ್ನಾಟಕದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಕ್ಕಮಟ್ಟಿಗೆ ಮಳೆ ಸುರಿಯಲಿದ್ದು, ಈ ವಾರ ರೈತರಿಗೆ ಅನುಕೂಲಕರವಾಗಿದೆ. ಗಂಟೆಗೆ 45-55 ಕಿಮೀ ಗಾಳಿ ಬೀಸುವ ಸಂಭವವಿರುವ ಹಿನ್ನೆಲೆಯಲ್ಲಿ ತೀರ ಪ್ರದೇಶದಲ್ಲಿ ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಸಹ ಇಲಾಖೆ ತಿಳಿಸಿದೆ. ಈವರೆಗೂ ಮಡಿಕೇರಿ 6 ಸೆಂಮೀ, ಆಗುಂಬೆ, ಶೃಂಗೇರಿಯಲ್ಲಿ 5 ಸೆಂ ಮೀ, ಭಾಗಮಂಡಲ, ಮಡಾಪೂರ್, ಸೋಮವಾರಪೇಟೆಯಲ್ಲಿ 4 ಸೆಂ ಮೀ, ಮೂಲ್ಕಿ, ಕೊಲ್ಲೂರು, ಸಿದ್ದಾಪುರ, ಕಾರವಾರ, ಜಯಪುರ, ಕೊಪ್ಪದಲ್ಲಿ 3 ಸೆಂ ಮೀ, ಧರ್ಮಸ್ಥಳ, ಕೋಟಾ, ಕಾರ್ಕಳ, ಶಿರಾಲಿ, ವಿರಾಜ್ ಪೇಟೆ, ಹಾರಂಗಿ, ಲಿಂಗನಮಕ್ಕಿ, ಬಾಳೆಹೊನ್ನೂರು, ಸಕಲೇಶಪುರದಲ್ಲಿ 2 ಸೆಂ ಮೀ ಮಾತ್ರ ಮಳೆಯಾಗಿದೆ.

ದೇಶಾದ್ಯಂತ ಮುಂಗಾರು ಮಳೆ ಕೊರತೆ ಕಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ತಿಂಗಳು ದೇಶದಾದ್ಯಂತ ಈ ತಿಂಗಳು ಉತ್ತಮ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಹಜ ಮಳೆಗಿಂತ ಶೇ. 4 ರಷ್ಟು ವರ್ಷಧಾರೆ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಮುಂದಿನ ವಾರ ದೇಶದ ವಿವಿಧ ಭಾಗಗಳಲ್ಲಿ ಮುಂಗಾರುಮಳೆಯ ಆರ್ಭಟ ಹೆಚ್ಚಾಗಲಿದ್ದು, ದೇಶದ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯಲಿದೆ. ಮುಖ್ಯವಾಗಿ ಮುಂದಿನ ಪಶ್ಚಿಮ ಬಂಗಾಳ, ಛತ್ತೀಸ್ ಗಢ್ ಹಾಗೂ ಮಧ್ಯಪ್ರದೇಶದಲ್ಲಿ ತೀವ್ರ ಮಳೆಯಾಗಲಿದೆ. ಆನಂತರ ದಿನಗಳಲ್ಲಿ ಇದರ ವ್ಯಾಪ್ತಿ ಹೆಚ್ಚಾಗಲಿದ್ದು, ದೆಹಲಿ, ಹರಿಯಾಣ, ಪಂಜಾಬ ಮತ್ತು ರಾಜಸ್ತಾನಗಳಲ್ಲಿ ಮುಂದುವರೆಯಲಿದೆ. ಈ ತಿಂಗಳು ಮುಂಗಾರು ತೀವ್ರ ಪ್ರಮಾಣದಲ್ಲಿ ಆಗುವುದರಿಂದ ಕೆಲವಡೆ ಪ್ರವಾಹ ಸೇರಿದಂತೆ ಅನಾವೃಷ್ಟಿ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಸಹಜ ಮಳೆ ಶೇ. 21 ರಷ್ಟಾಗಿದೆ. ಕಳೆದ ಎರಡು ವಾರಗಳಿಂದ ಸುಧಾರಿಸಿಕೊಂಡಿದ್ದು, ಅಗಸ್ಟ್ ಆರಂಭದಲ್ಲಿ ಶೇ. 25ರಷ್ಟು ಮಳೆ ಬಿದ್ದಿದೆ. ಮಳೆ ಕೊರತೆ ಅನುಭವಿಸುತ್ತಿರುವ ಪ್ರದೇಶಗಳಲ್ಲಿ ದೇಶದ ವಿವಿದ 34 ಹವಾಮಾನ ಕೇಂದ್ರಗಳ ಪ್ರಕಾರ ಸಹಜ ಮಳೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಅಂದರೆ ಶೇ. 20 ರಿಂದ ಶೇ. 59ರ ವರೆಗೂ ಮಳೆ ಆಗಿದೆ ಎಂದು ತಿಳಿಸಿದೆ.

ದಕ್ಷಿಣ ಮತ್ತು ಮಧ್ಯ ಭಾರತದ ಮುಂಗಾರು ಮಳೆ ಕೊರತೆ ಅನುಭವಿಸುತ್ತಿದ್ದು, ಇದೀಗ ಈ ಪ್ರದೇಶಗಳಲ್ಲಿ ಸುಧಾರಿಸಿದ್ದು, ಶೇ. 15ರಷ್ಟಿದ್ದ ಮುಂಗಾರು ಈ ದಿನಗಳಲ್ಲಿ ಶೇ. 20 ಕ್ಕೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೀಳಲಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಭಾರಿ ಬೀಳಲಿದ್ದು, ಮುಖ್ಯವಾಗಿ ದೇಶದ ವಾಯುವ್ಯ ಭಾಗದಲ್ಲಿ ವರುಣ ಮುನಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X