ಮುಜರಾಯಿ ಮಂತ್ರಿ ಸೋಮಣ್ಣ ಕೊನೆಗೂ ರಾಜೀನಾಮೆ

ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಸೋಮಣ್ಣ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆಪರೇಷನ್ ಕಮಲದ ಮೂಲದ ಬಿಜೆಪಿ ಸೇರ್ಪಡೆಗೊಂಡಿದ್ದ ಸೋಮಣ್ಣ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರು. ಮುಜರಾಯಿ ಇಲಾಖೆಗೆ ಸಚಿವರಾಗಿದ್ದ ಎನ್ ಎಸ್ ಕೃಷ್ಣಯ್ಯಶೆಟ್ಟಿ ಅವರ ರಾಜೀನಾಮೆ ಪಡೆದುಕೊಂಡಿದ್ದ ಯಡಿಯೂರಪ್ಪ, ಆ ಸ್ಥಾನವನ್ನು ಸೋಮಣ್ಣ ಅವರಿಗೆ ನೀಡಿದ್ದರು.
ಗೋವಿಂದರಾಜನಗರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಮಣ್ಣ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ವಿರುದ್ಧ ಸೋಲನುಭವಿಸಿ ಮುಖಭಂಗಕ್ಕೆ ಈಡಾಗಿದ್ದರು. ಗೋವಿಂದರಾಜನಗರದಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications