27815bjpಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg27815bjpಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg27815bjpಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg27815bjpಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg27815bjpಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg381453sushma swarajರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು/news/2009/03/13/arun-jaitley-skips-bjp-election-meeting.htmlನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ 35198http://kannada.oneindia.com/img/2009/03/13-arun-jaitley2.jpg381453sushma swarajಕುಲಕರ್ಣಿ ಹೇಳಿಕೆಗೆ ಸುಷ್ಮಾ ತೀವ್ರ ಆಕ್ಷೇಪ/news/2009/06/09/advani-distances-himself-from-kulkarnis-remark.htmlನವದೆಹಲಿ, ಜೂ. 9 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯ ಕುರಿತು ಅಡ್ವಾಣಿ ಆಪ್ತ ಸಹಾಯಕ ಸುಧೀಂದ್ರ ಕುಲಕರ್ಣಿ ಅವರು ಮಾಡಿದ್ದ ವಿಶ್ಲೇಷಣೆಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಅಡ್ವಾಣಿಗೆ ಕೂಡಾ ಇದಕ್ಕೆ ಸಹಮತ ನೀಡಿಲ್ಲ. ಅಡ್ವಾಣಿ ಅವರನ್ನು ಕೇಂದ್ರವನ್ನಾಗಿಟ್ಟುಕೊಂಡು ಮಾಡಿದ್ದ ವ್ಯಾಖ್ಯಾನಕ್ಕೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್, ಕುಲಕರ್ಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇದು ಸೂಕ್ತ ಕಾಲವಲ್ಲ. ಇಲ್ಲದೇ 37233http://kannada.oneindia.com/img/2009/06/09-sushma-swaraj1.jpg381453sushma swarajಸೋಲು ನಾಯಕರನ್ನು ಕೆಂಗೆಡಿಸಿದೆ, ಸುಷ್ಮಾ /news/2009/06/15/bjps-situation-now-volcanic-sushma-swaraj.htmlಬೋಪಾಲ್, ಜೂ. 15 : ಲೋಕಸಭೆ ಸೋಲಿನ ನಂತರ ಬಿಜೆಪಿಯಲ್ಲಿ ಅಸಮಾಧಾನದ ಬಿರುಗಾಳಿಗೆ ಪಕ್ಷ ತಲ್ಲಣಗೊಂಡಿದೆ. ಪಕ್ಷದ ಮುಖಂಡರ ಕಾರ್ಯಕ್ಷಮತೆಗೆ ಬೇಸತ್ತು ಹಿರಿಯ ಮುಖಂಡ ಯಶವಂತ್ ಸಿನ್ಹಾ ಸಂಸದ ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಎದ್ದಿರುವ ಆರೋಪ ಪ್ರತ್ಯಾರೋಪಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ 37347http://kannada.oneindia.com/img/2009/06/15-sushma-swaraj1.jpg381453sushma swarajಸುಷ್ಮಾ ಸ್ವರಾಜ್ ನನ್ನ ತಾಯಿ ಇದ್ದಹಾಗೆ : ರೆಡ್ಡಿ/news/2009/08/26/bjp-is-my-mother-party-janardhana-reddy.htmlನವದೆಹಲಿ, ಆ. 26 : ಅಮ್ಮ ಸುಷ್ಮಾ ಸ್ವರಾಜ್ ಬಿಜೆಪಿಯಲ್ಲಿ ಇರೋತಂಕ ಕಾಂಗ್ರೆಸ್ಸಿನತ್ತ ನಾವು ಸುಳಿಯವುದಿಲ್ಲ. ಬಿಜೆಪಿ ಕೂಡ ನಮಗೆ ತಾಯಿಯಂತಹ ಪಕ್ಷ. ತಾಯಿ ತೊರೆಯಲು ಸಾಧ್ಯವೇ ಎಂದು ಪ್ರವಾಸೋಧ್ಯಮ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು. ದೇಶದ ನಾನಾ ಭಾಗಗಳ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಇಂದಿನಿಂದ ಒಂದು ವಾರ ಕಾಲ ಇಲ್ಲಿನ ಪಂಚತಾರಾ ಹೋಟೆಲುಗಳಲ್ಲಿ ಕರ್ನಾಟಕದ ಭೋಜನ 38829http://kannada.oneindia.com/img/2009/08/26-janardhana-reddy2.jpg381453sushma swarajಬಿಜೆಪಿ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ/news/2009/08/30/lk-advani-to-continue-as-bjp-opposition-leader.htmlನವದೆಹಲಿ, ಆ. 30 : ಬಿರುಗಾಳಿಯ ಹೊಡೆತಕ್ಕೆ ಭಾರತೀಯ ಜನತಾ ಪಕ್ಷ ಎಂಬ ನಾವೆಯ ನಾಯಕರಾಗಿ ಸದ್ಯಕ್ಕೆ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರೇ ಮುಂದುವರಿಯಲಿದ್ದಾರೆ. ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಅರುಣ್ ಶೌರಿ ಮುಂತಾದವರು ಅಡ್ವಾಣಿ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಹಿನ್ನೆಲೆಯಲ್ಲಿ ನಾಯಕತ್ವದ ಬದಲಾವಣೆಯಾಗುತ್ತದೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದೆ.ಈ ವಿಷಯವನ್ನು ಬಿಜೆಪಿಯ ಹಿರಿಯ ನಾಯಕರಾದ ವೆಂಕಯ್ಯ 38904http://kannada.oneindia.com/img/2009/08/30-advani3.jpg236259rajnath singhಬಿಜೆಪಿಯಲ್ಲಿ ಸ್ವಜನ ಪಕ್ಷಪಾತ; ಭುಗಿಲೆದ್ದ ಅಸಮಾಧಾನ/news/2009/03/05/yeddyurappas-son-raghavendra-debut-ls-polls.htmlಬೆಂಗಳೂರು, ಮಾ.5:ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣಕ್ಕೆ ಆಸ್ಪದ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಸ್ವಜನ ಪಕ್ಷಪಾತ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡದೇ, ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದರಿಂದ ಪಕ್ಷದ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. 34992http://kannada.oneindia.com/img/2009/03/05-raghavendra1.jpg236259rajnath singhರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು/news/2009/03/13/arun-jaitley-skips-bjp-election-meeting.htmlನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ 35198http://kannada.oneindia.com/img/2009/03/13-arun-jaitley2.jpg236259rajnath singhರಾಜನಾಥ್ ನಿವಾಸಕ್ಕೆ ಜೈಟ್ಲಿ ದಿಢೀರ್ ಭೇಟಿ/news/2009/03/19/jaitley-meets-bjp-president-rajnath.htmlನವದೆಹಲಿ, ಮಾ. 19 : ಈಶಾನ್ಯ ರಾಜ್ಯಗಳ ಸಂಘಟಕರಾಗಿ ಸುಧಾಂಶು ಮಿತ್ತಲ್ ನೇಮಕದಿಂದ ಬೇಸರಗೊಂಡು ಪಕ್ಷದ ಎಲ್ಲ ಚಟುವಟಿಕೆಗಳಿಂದ ತಟಸ್ಥರಾಗಿ ಉಳಿದಿದ್ದ ಅರುಣ್ ಜೈಟ್ಲಿ ಇಂದು ದಿಢೀರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರಾದರೂ ಸ್ವಲ್ಪ ಮಟ್ಟಿಗೆ ಮತ್ತೆಗಾಗಿರುವುದು 35355http://kannada.oneindia.com/img/2009/03/19-arun-jaitley2.jpg236259rajnath singhಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ/news/2009/04/03/bjp-releases-ls-election-manifesto.htmlನವದೆಹಲಿ, ಏ. 3 : ತೀವ್ರ ಟೀಕೆ ಟಿಪ್ಪಣಿಗಳ ನಂತರ ಕೊನೆಗೂ ಭಾರತೀಯ ಜನತಾ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತದೆ ಹಳೆಯ ಆಲದ ಮರಕ್ಕೆ ಜೋತು ಬಿದ್ದಿರುವ ಬಿಜೆಪಿ, ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ಹೇಳಿದೆ. ಅಕ್ಕಿ ರಾಜಕೀಯಕ್ಕೆ ಮುಂದಾಗಿರುವ ಕೇಸರಿ ಪಡೆ, 2 ರುಪಾಯಿ ದರದಲ್ಲಿ 35704http://kannada.oneindia.com/img/2009/04/03-advani-lk2.jpg236259rajnath singhಉಗ್ರರ ಮಟ್ಟ ಹಾಕಲು ಸೇನೆ ರವಾನೆ, ಬಿಜೆಪಿ/news/2009/04/14/if-voted-to-power-bjp-will-send-troops-to-pak.htmlಗಯಾ (ಬಿಹಾರ್), ಏ. 14 : ವಿವಿಧ ರಾಜಕೀಯ ಪಕ್ಷಗಳು ಮತ ಪಡೆಯಲು ತರತರಹದ ಆಮಿಷಗಳನ್ನು ಮತದಾರರಿಗೆ ಒಡ್ಡುವುದು ಸಹಜ. ಆದರೆ, ಭಾರತೀಯ ಜನತಾ ಪಕ್ಷ ಒಂದು ಹೆಜ್ಜೆ ಮುಂದೆ ಇರಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಭಯೋತ್ಪಾದಕರ ನಿರ್ನಾಮಕ್ಕೆ ಭಾರತೀಯ ಸೈನಿಕರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಪಾಕಿಸ್ತಾನ 35929http://kannada.oneindia.com/img/2009/04/14-rajnath-singh1e.jpgnews"> ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು | BJP Crisis|Young leaders|Old hags|RSS|politicians|retirement age| ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು - Kannada Oneindia

ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು

LK Advani
ಬೆಂಗಳೂರು, ಆ. 31 : ಭಾರತೀಯ ಜನತಾಪಕ್ಷದಲ್ಲಿ ಉದ್ಭವಿಸಿರುವ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಹಳೆಯ ತಲೆಗಳು ಉರುಳಬೇಕು, ಹೊಸ ಮುಖಗಳು ಪ್ರಬುದ್ಧಮಾನಕ್ಕೆ ಬರಬೇಕೆನ್ನುವ ಮಾತು ಪ್ರಬಲವಾಗಿದೆ. ಹಳಬರೆನಿಸಿದ ಅಡ್ವಾಣಿ, ರಾಜ್ ನಾಥ್ ಸಿಂಗ್ ಮುಂತಾದವರು ನೇಪಥ್ಯಕ್ಕೆ ಸರಿಯಬೇಕು. ಆಯಕಟ್ಟಿನ ಸ್ಥಾನಗಳನ್ನು ಹೊಸಬರು ತುಂಬಬೇಕು ಎಂಬ ವಾದ ದಿನೇ ದಿನೇ ಜೋರಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಕೀತೂ ಇದ್ದಂತೆ ಗೋಚರವಾಗುತ್ತಿದೆ.

ರಾಜಕೀಯದಲ್ಲಿದ್ದವರಿಗೆ ವಯಸ್ಸಾಗುವುದೇ ಇಲ್ಲ , ವಯಸ್ಸಾದಷ್ಟೂ ಅಧಿಕಾರದ ಪ್ರಮಾಣ ಅವರಿಗೆ ಹೆಚ್ಚು ಲಭ್ಯವಾಗುತ್ತದೆ ಎಂಬ ದೇಶ ನಮ್ಮದು. ಇನ್ನು ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ಎನ್ನುವುದಿರಬೇಕು ಎಂಬ ಮಾತು ಆಗಾಗ ಮಾಧ್ಯಮಗಳಲ್ಲಿ ಕೇಳಿಬಂದರೂ ಆ ವಾದಕ್ಕೆ ಸಂವಿಧಾನದ ಬೆಂಬಲವಿಲ್ಲ. ಯಾವುದೇ ಕಾನೂನು ಕಟ್ಟಳೆಗಳಿಲ್ಲ. 70-80 ವರ್ಷ ದಾಟಿದವರು ತಮ್ಮಷ್ಟಕ್ಕೆ ತಾವೇ ನಿವೃತ್ತಿ ಪಡೆಯಬಹುದು. ಆದರೆ ಅಧಿಕಾರದಲ್ಲಿ ಸಾಯುವವರೆಗೂ ಎಂಬ ತೀರ್ಮಾನವನ್ನು ಕೆಲವರು ಕೈಗೊಂಡಿರುವುದರಿಂದ ಯುವಕರು ಮತ್ತು ಹಿರಿಯರ ನಡುವೆ ತಿಕ್ಕಾಟ ಉದ್ಭವಾಗುವುದು ಸಹಜ.

ಈ ವಿದ್ಯಮಾನ ಎಲ್ಲ ಪಕ್ಷಗಳಿಗೆ ಅನ್ವಯಿಸುವುದಾದರೂ ಸದ್ಯಕ್ಕೆ ಭಾಜಪದಲ್ಲಿ ಭುಗಿಲೆದ್ದಿರುವುದು ಸರ್ವವೇದ್ಯ. ಹಾಗೆ ನೋಡಿದರೆ ಭಾಜಪದಲ್ಲಿ ಹಿರಿಯರನ್ನು ಕೆಳಗಿಳಿಸಿ ಯುವ ಮುಂದಾಳುಗಳಿಗೆ ನಾಯಕತ್ವ ಕೊಡಬೇಕು ಎಂಬ ನೀತಿನಿಯಮವೇನೂ ಇಲ್ಲ. ಅಡ್ವಾಣಿಯವರು ಕಂದಹಾರ್ ಕಣಿವೆಯಲ್ಲಿ ಎಡವಿಬಿದ್ದರೆಂಬ ಆಪಾದನೆ, 2009ರ ಲೋಕಸಭಾ ಚುನಾವಣೆಗಳಲ್ಲಿ ಭಾರೀ ಹಿನ್ನಡೆಯಾದದ್ದಕ್ಕೆ ಅಡ್ವಾಣಿ, ರಾಜನಾಥ್ ಮುಂತಾದ ನಾಯಕರು ಹೊಣೆಹೊರಬೇಕು ಎಂಬ ಒತ್ತಡ ಬಂದದ್ದರಿಂದ ವಯಸ್ಸು, ಹಿರಿಯ ಕಿರಿಯ ಎಂಬ ಕಾರಣಗಳು ಇವತ್ತು ಎದ್ದು ಕಾಣುತ್ತಿವೆ.

ಅಂದಹಾಗೆ, ಭಾರತೀಯ ಜನತಾ ಪಕ್ಷದಲ್ಲಿ ಯಾರ‌್ಯಾರಿಗೆ ಎಷ್ಟೆಷ್ಟು ವಯಸ್ಸಾಯಿತು? ಗಮನಿಸೋಣ. ಅಡ್ವಾನಿಯವರಿಗೆ 83, ರಾಜನಾಥ ಸಿಂಗ್ ಅವರಿಗೆ 58, ಸುಷ್ಮ ಸ್ವರಾಜ್ ಅವರಿಗೆ 57, ಅರುಣ್ ಜೇಟ್ಲಿಗೆ 52, ಅನಂತ್ ಕುಮಾರ್ ಅವರಿಗೆ 50, ವೆಂಕಯ್ಯ ನಾಯ್ಡುಗೆ 60, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್, ನರೇಂದ್ರ ಮೋದಿಗೆ 59, ನಮ್ಮವರೇ ಆದ ಯಡಿಯೂರಪ್ಪ ಅವರಿಗೆ 63. ಸರಾಸರಿ 60 ಎಂದು ಇಟ್ಟುಕೊಳ್ಳಬಹುದು.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಹೊಸ ನೀರು ಹರಿಯುವ ಸಾಧ್ಯತೆಯೆಂತೂ ಸ್ಪಷ್ಟವಾಗಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನುಭವಿಸಿ ಭಾರಿ ಪೆಟ್ಟುನ್ನಂತೂ ತಿಂದು ಚಿತ್ರಾನ್ನಾವಾಗಿದೆ. ಏಟು ತಿಂದು ಗ್ಯಾರೇಜ್ ಕಂಡಿರುವ ಬಿಜೆಪಿ ರಿಪೇರಿ ಮಾಡುವ ಕೆಲಸ ಹೊಸಬರು ಮಾಡಬೇಕಾಗಿದೆ. ಆದರೆ, ಸದ್ಯಕ್ಕೆ ಪಕ್ಷದ ಸಾರಥಿ ಆಗುವ ಮಂದಿಯಲ್ಲಿ ಪಕ್ಷ ಸಂಘಟಿಸುವ ಮತ್ತೆ ಅಧಿಕಾರಕ್ಕೆ ತರುವಂಥ ಸಾಮರ್ಥ್ಯವಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ಧಿ ಲಾಲ್ ಕೃಷ್ಣ ಅಡ್ವಾಣಿ ಐದು ದಶಕಗಳ ಪ್ರಚಂಡ ರಾಜಕಾರಣ ಮಾಡಿದವರು.

ಬಿಜೆಪಿ ಎಂಬ ಚಿಕ್ಕ ಪಕ್ಷವನ್ನು ಆಲದ ಮರದಂತಿರುವ ಕಾಂಗ್ರೆಸ್ ಗೆ ಸರಿಸಮಾನಾಗಿ ಬೆಳೆಸಿದರು. ಇಂತಹ ಧೀಮಂತ ನಾಯಕನ ರಾಜಕೀಯದ ಜೀವನ ದುರಂತದಲ್ಲಿ ಅಂತ್ಯ ಕಂಡಿದ್ದು ಖೇದಕರ ಸಂಗತಿ. ಭಾರತದ ರಾಜಕೀಯ ಅಂದಾಕ್ಷಣ ನೆಹರು, ಇಂದಿರಾಗಾಂಧಿ, ವಾಜಪೇಯಿ, ಅಡ್ವಾಣಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಅವರು ಕೊನೆಗಾಲದಲ್ಲಿ ಪಕ್ಷದ ನಡೆಸಿಕೊಂಡ ರೀತಿ ಸಂಕಟ ಬರುವಂತಿದೆ. ಹೀಗೆ ತಮ್ಮದೆ ಸಹದ್ಯೋಗಿಗಳಿಂದ ಅವಮಾನಕ್ಕೀಡಾಗಿ ಹುದ್ದೆ ತ್ಯಜಿಸುತ್ತಿರುವುದು ಅವರ ರಾಜಕೀಯ ಶತ್ರುಗಳಲ್ಲಿ ಕೂಡಾ ಅಯ್ಯೋ ಛೇ ಹೀಗಾಗಬಾರದಿತ್ತು ಮನಸ್ಸೊಳಗೆ ಅಂದುಕೊಂಡಿರಲಿಕ್ಕೂ ಸಾಕು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+