ರಂಜಾನ್ ಪ್ರಯುಕ್ತ ಮುಸ್ಲಿಂರಿಗೆ ಒಬಾಮಾ ಸಂದೇಶ

ಮುಸ್ಲಿಂ ರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ರಂಜಾನ್ ತಿಂಗಳು ಪ್ರಾರಂಭವಾದಂದಿನಿಂದಲೇ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ವಿಶ್ವದಾದ್ಯಂತ ಇರುವ ಮುಸ್ಲಿಂ ಬಾಂಧವರು ಅತ್ಯಂತ ಶಾಂತಿ, ಸೌಹಾರ್ದತೆಯಿಂದ ವಿಶ್ವದ ಉನ್ನತಿಗಾಗಿ ಸಹಬಾಳ್ವೆ ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ.
ಶಾಂತಿ, ಸಹಬಾಳ್ವೆ, ಆಧ್ಯಾತ್ಮ ವರ್ಧನೆ ಮತ್ತು ದೈವದಲ್ಲಿ ನಂಬುಗೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮುಸ್ಲಿಂ ಕ್ಯಾಲೆಂಡರ್ ಪ್ರಕಾರ ಒಂಬತ್ತನೇ ತಿಂಗಳಲ್ಲಿ ಬರುವ ರಂಜಾನ್ ತಿಂಗಳಂದು ರೋಜಾವನ್ನು ಮುಸ್ಲಿಂ ಬಾಂಧವರು ಆಚರಿಸುತ್ತಾರೆ. ಈ ಒಂದು ತಿಂಗಳಲ್ಲಿ ಪ್ರತಿದಿನ ಕಟ್ಟುನಿಟ್ಟಿನ ಉಪವಾಸ ಆಚರಿಸಿತ್ತಾರೆ. ಭ್ರಾತೃತ್ವ ವೃದ್ಧಿ ಮತ್ತು ಉಳ್ಳವರು ಇಲ್ಲದವರಿಗಾಗಿ ದಾನಧರ್ಮಗಳನ್ನೂ ಮಾಡುತ್ತಾರೆ.
ರಂಜಾನ್ ದಿನ ಬಂಧು ಮಿತ್ರರೊಂದಿಗೆ ಸೇರಿ ಮೃಷ್ಟಾನ್ನ ಭೋಜನ ಊಟ ಮಾಡಿ, ಮಸೀದಿಗಳಿಗೆ ಭೇಟಿ ನೀಡಿ ಸ್ನೇಹಿತರಿಗೆ, ಬಂಧುಗಳಿಗೆ ಶುಭಾಶಯ ಕೋರುತ್ತಾರೆ. ಅಂದು ಮನಸೋ ಇಚ್ಛೆ ಬಡವಬಲ್ಲಿದರಿಗೆ ದಾನ ಧರ್ಮ ಮಾಡುತ್ತಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications