ಕೊಳ್ಳೇಗಾಲ ಬಿಜೆಪಿಯ ನಂಜುಂಡಸ್ವಾಮಿ ಮುನ್ನಡೆ

ಚಿತ್ತಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ 609 ಮತಗಳಿಂದ ಬಿಜೆಪಿಯ ವಾಲ್ಮೀಕಿ ನಾಯಕ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ನ ಕೆ ರಾಜು 2856 ಮತಗಳಿಂದ ಕಾಂಗ್ರೆಸ್ ನ ಸಿ ಎಂ ಲಿಂಗಪ್ಪ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಮೂರನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ ಸಾಧಿಸಿದೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ನ ಎಂ ಅಶ್ವಥ್ 882 ಮತಗಳಿಂದ ಬಿಜೆಪಿಯ ಸಿಪಿ ಯೋಗೇಶ್ವರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಗೋವಿಂದರಾಜ ನಗರಗದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಎರಡನೇ ಸುತ್ತ್ತಿನ ಮತ ಎಣಿಕೆ ಕಾರ್ಯದಲ್ಲಿ ಪ್ರಿಯಾ ಕೃಷ್ಣ ಅವರು 979 ಮತಗಳಿಂದ ವಿ ಸೋಮಣ್ಣ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಪ್ರಿಯಾಕೃಷ್ಣ ಅವರು 225 ಮತಗಳ ಮುನ್ನಡೆ ಸಾಧಿಸಿದ್ದರು.
ಗೋವಿಂದರಾಜ ನಗರ ಕ್ಷೇತ್ರದ ಒಂದು ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಮತಯಂತ್ರಕ್ಕೆ ಸೀಲ್ ಸರಿಯಾಗಿ ಮಾಡಿರಲಿಲ್ಲ. ಹಾಗಾಗಿ ಗೋವಿಂದರಾಜ ನಗರದಲ್ಲಿ ಮತಎಣಿಕೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಇದನ್ನು ಹೊರತು ಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications