ಬಿರುಗಾಳಿಯಲ್ಲಿ ಸಿಲುಕಿರುವ ಬಿಜೆಪಿ

ಶಿಮ್ಲಾದಲ್ಲಿ ಇಂದು ಬಿಜೆಪಿಯ ಚಿಂತನಾ ಬೈಠಕ್ ಆರಂಭಿಸಿದ್ದು, ಮಂಗಳವಾರ ಆರ್ಎಸ್ಎಸ್ ಪ್ರಮುಖ ಮೋಹನ್ ಭಾಗ್ವಾತ್ ಅವರು ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಪಕ್ಷದಲ್ಲಿ ಈದ ಕಂಡುಬರುತ್ತಿರುವ ಆತಂರಿಕ ಜಗಳ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯುಂಟು ಮಾಡಬಲ್ಲದು. ತನ್ನ ಸಂಘಟನೆ ಶಿಸ್ತನ್ನು ಕುಂಠಿತಗೊಳಿಸಬಲ್ಲದು ಎಂದು ಭಾಗ್ವತ್ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದಿನ ನಾಯಕರಲ್ಲಿ ಅರುಣ್ ಜೈಟ್ಲಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಆಯ್ಕೆ ಮಾಡಿಕೊಳ್ಳಬಹುದು ಎಂದು ಪ್ರಶ್ನೆಗೆ ಪಕ್ಷದಲ್ಲಿ ಪ್ರತಿಭಾನ್ವಿತರಿಗೆ ಕೊರತೆ ಇಲ್ಲ ಎಂದು ಭಾಗ್ವತ್ ಜಾರಿಕೊಂಡರು. ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಗೆ, ಹಿರಿಯ ನಾಯಕ ಜಸ್ವಂತ್ ಸಿಂಗ್ ಗಾಯದ ಮೇಲೆ ಬರೆ ಎಳೆದಿದ್ದಾರೆ. ಪಾಕಿಸ್ತಾನದ ರಾಷ್ಟ್ರಪಿತ ಮೊಹ್ಮದ್ ಅಲಿ ಜಿನ್ನಾ ಅವರನ್ನು ಅವರ ಬರೆದಿರುವ ಪುಸ್ತಕದಲ್ಲಿ ಶ್ಲಾಘನೆ ಮಾಡಿರುವುದು ಬಿಜೆಪಿಯಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ.
(ಏಜನ್ಸೀಸ್)












Click it and Unblock the Notifications