ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಣುಕು ಸುದ್ದಿ: ಮುತಾಲಿಕ್, ಹವಾಮಾನ, ಕೊಹ್ಲಿ,

By Staff
|
Google Oneindia Kannada News

ಡೇ' ಸಂಸ್ಕೃತಿ ಬೇಡ : ಮುತಾಲಿಕ್
ಮಂಗಳೂರು: ಫ್ರೆಂಡ್‌ಶಿಪ್ ಇರಲಿ, ಡೇ ಸಂಸ್ಕೃತಿ ಬೇಡ.ಕಾನೂನಿನ ಚೌಕಟ್ಟಿನಲ್ಲಿ ಫ್ರೆಂಡ್‌ಶಿಪ್ ಡೇ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ ಎಂದು ಶ್ರೀರಾಮಸೇನೆ ಮಾರ್ಗದರ್ಶಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಂಬಲಿಗರ ಜತೆ ಮೆರವಣಿಗೆ ಮೂಲಕ ಶನಿವಾರ ಸಂಜೆ ಮಂಗಳೂರು ಪ್ರವೇಶಿಸಿದ ಪ್ರಮೋದ್ ಮುತಾಲಿಕ್, ಪತ್ರಕರ್ತರೊಂದಿಗೆ ಮಾತನಾಡಿ, ರಕ್ಷಾ ಬಂಧನ ಆಚರಿಸಿ ಆದರೆ, ಗೆಳೆತನ ಹೆಸರಲ್ಲಿ ದಿನ ಆಚರಿಸುವುದಕ್ಕೆ ಬೆಂಬಲ ವಿಲ್ಲ ಎಂದರು.
********
ಮುಂದಿನ 2 ದಿನಕ್ಕೆ ಮಳೆ ಮುನ್ಸೂಚನೆ
ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಬಳ್ಳಾರಿಯಂಥ ಜಿಲ್ಲೆಗಳಲ್ಲಿ 20ರಿಂದ 30 ಮಿಲಿ ಮೀಟರ್‌ವರೆಗೆ ಮಳೆಯಾಗುವ ಸಂಭವವಿದೆ. ಹಾಗೆಯೇ ಕರಾವಳಿ ಹಾಗೂ ಮಲೆನಾಡಿನಲ್ಲಿಯೂ 100ರಿಂದ 150 ಮಿಮೀ. ವರೆಗೆ ಮಳೆ ಬೀಳಬಹುದು ಎಂದು ಬೆಂಗಳೂರು ಕೃಷಿ ವಿವಿ ಹವಾಮಾನ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ರಾಜೇಗೌಡ ಹೇಳಿದರು.
**********
ವಿರಾಟ್ ಶತಕ: ಭಾರತಕ್ಕೆ ಸರಣಿ
ಬ್ರಿಸ್ಬೇನ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸಿಡಿಸಿದ ಭರ್ಜರಿ ಶತಕ(1020ದ ನೆರವಿನಿಂದ ಭಾರತ ತಂಡ 17 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸದೆಬಡಿದು ಉದಯೋ ನ್ಮುಖರ ಏಕದಿನ ಸರಣಿ ಗೆದ್ದುಕೊಂಡಿದೆ. ಶನಿವಾರ ಅಲನ್ ಬಾರ್ಡರ್ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 283 ರನ್ ಗಳಿಸಿತು. ಸವಾಲಿನ ಮೊತ್ತ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ ಸುದೀಪ್ ತ್ಯಾಗಿ(72 ಕ್ಕೆ 4) ದಾಳಿಗೆ ಸಿಲುಕಿ 46.2 ಓವರ್‌ಗಳಲ್ಲಿ 266 ರನ್‌ಗಳಿಗೆ ಪತನಗೊಂಡಿತು.
****
ಸೆಪ್ಟೆಂಬರ್ ನಲ್ಲಿ ನಗರಕ್ಕೆ 3 ಜಿ
3ಜಿ ತಂತ್ರಜ್ಞಾನ ಉಳ್ಳ ಮೊಬೈಲ್ ಸೇವೆ ಸೆಪ್ಟೆಂಬರ್ ವೇಳೆಗೆ ಬೆಂಗಳೂರಿನ ಜನತೆಗೆ ಲಭ್ಯವಾಗಲಿದೆ . ಬ್ರೌಸಿಂಗ್, ಚಾಟಿಂಗ್ ಮುಂತಾದ ಅತ್ಯಾಧುನಿಕ ಇಂಟರ್ ನೆಟ್ ಸೌಲಭ್ಯಗಳನ್ನು ಬಿಎಸ್ ನ್ನೆಲ್ ಒದಗಿಸಲಿದೆ ಎಂದು ದೂರಸಂಪರ್ಕ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಸುದ್ದಿಗಾರರಿಗೆ ತಿಳಿಸಿದರು.ಇದಲ್ಲದೆ ಆ.31ರೊಳಗೆ ರಾಜ್ಯದ 58 ಅಂಚೆ ಕಚೇರಿಗಳು ಆಧುನೀಕರಣಗೊಳ್ಳಲಿದೆ ಎಂದರು,

(ಎಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X