ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ 1ರಿಂದ ಲೋಡ್ ಶೆಡ್ಡಿಂಗ್ ಜಾರಿ

By Staff
|
Google Oneindia Kannada News

KS Eshwarappa
ಬೆಂಗಳೂರು, ಜು. 30 : ಉತ್ತಮ ಮಳೆಯಾಗಿ ಅಷ್ಟೂ ಜಲಾಶಯಗಳು ಭರ್ತಿಯಾಗಿದ್ದರೂ ರಾಜ್ಯದಲ್ಲಿ ಅಧಿಕೃತವಾಗಿ ಆಗಸ್ಟ್ 1 ರಿಂದ ಲೋಡ್ ಶೆಡ್ಡಿಂಗ್ ಆರಂಭವಾಗಲಿದೆ ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಬೆಂಗಳೂರಿಗೆ ಇರುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಗಳಲ್ಲಿ 14 ಗಂಟೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗುವುದು. ನಗರ ಪ್ರದೇಶಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ತಲಾ ಗಂಟೆ ವಿದ್ಯುತ್ ಕಡಿತವಾಗಲಿದೆ ಎಂದರು.

ರಾಜ್ಯದಲ್ಲಿ ಬಳಸುವ ಒಟ್ಟು ವಿದ್ಯುತ್ ನಲ್ಲಿ ಶೇ. 40ರಷ್ಟು ಜಲ ವಿದ್ಯುತ್ ನಿಂದಲೂ ಮತ್ತು ಉಳಿದ ಶೇ. 60 ರಷ್ಟು ಶಾಖೋತ್ಪನ್ನ ಸ್ಥಾವರ ಹಾಗೂ ಕೇಂದ್ರೀಯ ಗ್ರೀಡ್ ನಿಂದಲೂ ಪಡೆಯಲಾಗುತ್ತಿದೆ. ಆದರೆ, ಕೇಂದ್ರದ ಗ್ರೀಡ್ ರಾಜ್ಯಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಶಾಖೋತ್ಪನ್ನ ಘಟಕಗಳ ಪೈಕಿ ಬಳ್ಳಾರಿಯಂತಹ ಘಟಕಗಳು ಹಳೆಯದಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಪನ್ಮೂಲಗಳ ಬಳಕೆಯ ಅಗತ್ಯವಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಿಯಮಿತವಾಗಿ ಲೋಡ್ ಶೆಡ್ಡಿಂಗ್ ಆರಂಭಿಸಲಾಗುವುದು. ಆದ್ದರಿಂದ ಭವಿಷ್ಯದಲ್ಲಿ ತೀವ್ರ ವಿದ್ಯುತ್ ಆಭಾವ ಉಂಟಾಗದಂತೆ ತಡೆಯುವ ಪ್ರಯತ್ನ ಎಂದು ಅವರು ವಿವರಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X