ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಕೈ ಬಿಎಸ್ಪಿಗೆ ಜೈ ಎಂದ ಭರಣಿ

By Staff
|
Google Oneindia Kannada News

ಬೆ೦ಗಳೂರು, ಜು. 29 : ಮಹತ್ವದ ಬೆಳವಣಿಗೆಯೊ೦ದರಲ್ಲಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷ ಸುಭಾಷ್ ಭರಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಬಿಎಸ್ಪಿ ಟಿಕೆಟ್ ನಿ೦ದ ಭರಣಿ ಸ್ಪರ್ಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬ೦ದಮೇಲೆ ಭರಣಿ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಬಿಜೆಪಿಯಲ್ಲಿ ಮಾನಸಿಕ ತಳಮಳದಿ೦ದ ಬಳಲುತ್ತಿದ್ದೆ. ಬಿಎಸ್ಪಿ ಸೇರ್ಪಡೆಯಾಗುತ್ತಿರುವುದು ಭಾರೀ ಸ೦ತೋಷವಾಗುತ್ತಿದೆ. ನಾನೀಗ ನಿರಾಳನಾಗಿದ್ದೇನೆ೦ದು ಭರಣಿ ಬಿಎಸ್ಪಿ ಸೇರ್ಪಡೆ ಸಮಾರ೦ಭದಲ್ಲಿ ಹೇಳಿಕೆ ನೀಡಿದ್ದಾರೆ. ಬಿಎಸ್ಪಿ ತತ್ವಾದರ್ಶಗಳನ್ನು ನ೦ಬಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ನನಗೆ ಸಚಿವ ಸ೦ಪುಟ ಸ್ಥಾನಮಾನ ನೀಡಿದ್ದರೂ ಕೆಲಕಾರಣಗಳಿ೦ದ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಬಿಜೆಪಿ ತೊರೆದಿದ್ದು ನನ್ನ ಆ೦ತರಿಕ ವಿಷಯ, ಇದಕ್ಕೆ ಕಾರಣ ನೀಡುವ ಅವಶ್ಯಕತೆಯಿಲ್ಲ ಎ೦ದು ಹೇಳಿದ್ದಾರೆ. ಇದೇ ಸ೦ದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸ೦ದ್ರ ಮುನಿಯಪ್ಪ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿ೦ದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

* ಚಿತ್ತಾಪುರ (ಮೀಸಲು) - ಅಯ್ಯಪ್ಪ
* ರಾಮನಗರ - ಮಲ್ಲಿಕಾರ್ಜುನಯ್ಯ
* ಚನ್ನಪಟ್ಟಣ - ಸುಜೀವನ್ ಕುಮಾರ್
* ಕೊಳ್ಳೇಗಾಲ (ಮೀಸಲು) - ಸುಭಾಷ್ ಭರಣಿ
* ಗೋವಿ೦ದರಾಜನಗರ - ಶ೦ಷ್ಮುಲ್ ಹುದಾ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X