ಜುಲೈ 31 : ನೂತನ ಹೊಸದಿಗಂತ ಬಿಡುಗಡೆ
ಬೆಂಗಳೂರು, ಜು. 24 : ಹೊಸದಿಗಂತ ಪತ್ರಿಕೆಯ ಹೊಸ ವಿನ್ಯಾಸದ ಅನಾವರಣ ಕಾರ್ಯಕ್ರಮವನ್ನು ನಗರದ ಬನಶಂಕರಿಯಲ್ಲಿರುವ ಪಿಇಎಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜುಲೈ 31 ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪತ್ರಿಕೆಯ ಹೊಸ ವಿನ್ಯಾಸದ ಅನಾವರಣವನ್ನು ಮಾಡುವರು. ರಾಮಕೃಷ್ಣಮಠದ ಹರ್ಷಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಖ್ಯಾತ ಉದ್ಯಮಿ ದಯಾನಂದ ಪೈ ಅಧ್ಯಕ್ಷತೆ ಹಾಗೂ ಗೀತರಚನೆಕಾರ ಡಾ ದೊಡ್ಡರಂಗೇಗೌಡ ಈ ಪೇಪರ್ ಅನಾವರಣ ಮಾಡುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಸದಸ್ಯ ಮೈ ಚ ಜಯದೇವ ಉಪಸ್ಥಿತರಿರುವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications