ಕಳ್ಳಭಟ್ಟಿ ದುರಂತ, ಪ್ರಮುಖ ಆರೋಪಿ ಸೆರೆ
ಅಹಮದಾಬಾದ್, ಜು. 17 : 130 ಜನರ ಸಾವಿಗೆ ಕಾರಣವಾದ ಗುಜರಾತ್ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿ ವಿನೋದ್ ಚೌಹಾನ್ ಅಲಿಯಾಸ್ ಡಗ್ರಿ ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಬರೋಡ ನಗರದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ವಿನೋದ್ ತನ್ನ ಹಳ್ಳಿಯಾದ ಖೇಡ್ ಜಿಲ್ಲೆಯ ಮಹೇಮಬಾದ್ ನಲ್ಲಿ ನಕಲಿ ಮಧ್ಯ ತಯಾರಿಸುತ್ತಿದ್ದ. ಪೋಲೀಸರ ಪ್ರಕಾರ ಈತ 1100 ಲೀಟರ್ ನಷ್ಟು ನಕಲಿ ಮಧ್ಯವನ್ನು ಜುಲೈ ಮೊದಲ ವಾರದಲ್ಲಿ ನಗರಕ್ಕೆ ಸರಬರಾಜು ಮಾಡಿದ್ದ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
(ಏಜನ್ಸೀಸ್)












Click it and Unblock the Notifications