277524nandan nilekaniಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg277524nandan nilekaniಗುರುತಿನ ಚೀಟಿ ಯೋಜನೆ ನಿಲೇಕಣಿ ನೇತೃತ್ವ ?/news/2009/06/23/nandan-nilekani-may-get-charge-of-national-id-card.htmlನವದೆಹಲಿ, ಜೂ. 23 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಇನ್ ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಅವರನ್ನು ಕೇಂದ್ರ ಸರಕಾರ ಅವರನ್ನು ಮಹತ್ವಾಕಾಂಕ್ಷೆಯ ಯೋಜನೆಯಾದ ರಾಷ್ಟ್ರೀಯ ಗುರುತಿನ ವಿತರಣೆ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ದೇಶದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡುವ ಕೇಂದ್ರ ಸರಕಾರದ ಯೋಜನೆಗೆ ಪ್ರಧಾನಮಂತ್ರಿ ಅವರು ನಂದನ್ ನಿಲೇಕಣಿ ಅವರನ್ನು ನೇಮಿಸಿ 37521http://kannada.oneindia.com/img/2009/06/23-nilekani4.jpg277524nandan nilekaniಇನ್ಫೋಸಿಸ್ ಆಡಳಿತ ಮಂಡಳಿಗೆ ನಿಲೇಕಣಿ ರಾಜೀನಾಮೆ /news/2009/06/25/nilekani-to-step-down-as-infosys-board-member.htmlಬೆಂಗಳೂರು, ಜೂ. 25 : ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ ಯೋಜನೆಗೆ ಚೇರಮನ್ ರಾಗಿ ನೇಮಕಗೊಂಡಿರುವ ನಂದನ್ ನಿಲೇಕಣಿ ಅವರು ಇನ್ಫೋಸಿಸ್ ಸಹಸಂಸ್ಥಾಪಕ ಹುದ್ದೆ ಹಾಗೂ ಅಡಳಿತ ಮಂಡಳಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಕೇಂದ್ರದ ಸರಕಾರ ಗುರುತಿನ ಚೀಟಿ ವಿತರಣೆ ಯೋಜನೆಗೆ ನಿಲೇಕಣಿಯವರನ್ನು ಚೇರಮನ್ ರಾಗಿ ಅಧಿಕೃತ ಆದೇಶ ಹೊರಡಿಸಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ 37576http://kannada.oneindia.com/img/2009/06/25-nilekani6.jpg277524nandan nilekaniಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ/news/2009/07/09/infosys-farewell-to-nandan-nilekani.htmlಬೆಂಗಳೂರು,ಜು. 9 : 28 ವರ್ಷಗಳ ಹಿಂದೆ ಎನ್ಆರ್ ನಾರಾಯಣ ಮೂರ್ತಿ ಮತ್ತು ಐವರು ಸ್ನೇಹಿತರ ಜೊತೆ ಸೇರಿ ಇಂದು ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಭಾರತ ದೇಶಕ್ಕೆ ಅರ್ಪಿಸಿದ ನಂದನ್ ನಿಲೇಕಣಿ ಅವರನ್ನು ಇನ್ಫೋಸಿಸ್ ಸಂಸ್ಥೆಯೇ ಇಂದು ದೇಶದ ಸೇವೆಗಾಗಿ ಅರ್ಪಿಸುತ್ತಿದೆ.ವಿಶ್ವದ ಅಗ್ರಮಾನ್ಯ ಹತ್ತು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯನ್ನು 37896http://kannada.oneindia.com/img/2009/07/09-nilekani6.jpg277524nandan nilekaniನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg124740infosysಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg124740infosysಇನ್ನೆರಡು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಮಾಯ/news/2009/02/25/india-to-overcome-recession-in-two-years-infy-ceo.htmlಮೈಸೂರು, ಫೆ. 25 : ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಎಲ್ಲ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಭಾರತ ದೇಶ ಈ ಗಂಭೀರ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ಮುಂದಿನ ಎರಡು ವರ್ಷ ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಇದರ ಕರಿನೆರಳಿನಿಂದ ಹೊರಬರಲಿದೆ ಎಂದು ಇಸ್ ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದರು. 34866http://kannada.oneindia.com/img/2009/02/25-kris-gopalakrishnan1.jpg124740infosysಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg124740infosysರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg124740infosysತರಬೇತಿ,ಸಾಮರ್ಥ್ಯದಿಂದ ಉತ್ತಮ ಆಡಳಿತ: ಅಮಿತಾ/news/2009/03/11/training-capacity-building-needed-for-governance.htmlಮೈಸೂರು, ಮಾ. 11 : ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಉತ್ತಮ ಆಡಳಿತಕ್ಕೆ ಅನಿವಾರ್ಯವೆಂದು ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ. ಅಮಿತಾ ಪ್ರಸಾದ್‌ ಹೇಳಿದರು. ನೇಪಾಳ್ ದೇಶದ ಆಡಳಿತ ಸುಧಾರಣಾ ಆಯೋಗದ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ 35159http://kannada.oneindia.com/img/2009/03/11-amita-prasad-nepal-delegate.jpg136020softwareಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg136020softwareಯಮಲೋಕದ ಸಿಇಓ ಯಮಣ್ಣನ ಪೀಕಲಾಟ/column/humor/2008/0912-yamaloka-software-company.htmlಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ 873http://kannada.oneindia.com/img/2009/07/21-yama1e.jpg136020softwareಇನ್ಫಿಯಲ್ಲಿ ನೇಮಕಾತಿಯಿಲ್ಲ ವೇತನ ಹೆಚ್ಚಳವೂ ಇಲ್ಲ/news/2009/04/15/infosys-no-wage-hike-no-appointments.htmlಬೆಂಗಳೂರು, ಏ. 15 : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ತುಸು ಹಿನ್ನೆಡೆಯಾಗಿರುವ ಬೆನ್ನ ಹಿಂದೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.ಆರ್ಥಿಕ ಸಂಕಷ್ಟದ ಬಿಸಿ ಇನ್ನೂ ಆರುವ ಲಕ್ಷಣ ಗೋಚರಿಸದ ಕಾರಣ ಇನ್ಫೋಸಿಸ್ ಕಂಪನಿ 2009-10ರ ಹಣಕಾಸು ವರ್ಷದಲ್ಲಿ ತನ್ನ ನೌಕರರಿಗೆ ವೇತನ 35980http://kannada.oneindia.com/img/2009/04/15-mohandas-pai2.jpg136020softwareಪ್ರತಿಭಾ ಪಲಾಯನದಿಂದ ಲಾಭವೋ ನಷ್ಟವೋ?/literature/my-karnataka/2009/0425-brain-drain-swarnagowri-venkatesh.htmlಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ 36214http://kannada.oneindia.com/img/2009/04/25-swarnagowri-venkatesh1.jpg136020softwareಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpgnews"> ಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ | Nandan Nilekhani | Farewell | Infosians | UIA - ಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ - Kannada Oneindia

ಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ

Nandan Nilekani bids adeau to Infosys
ಬೆಂಗಳೂರು,ಜು. 9 : 28 ವರ್ಷಗಳ ಹಿಂದೆ ಎನ್ಆರ್ ನಾರಾಯಣ ಮೂರ್ತಿ ಮತ್ತು ಐವರು ಸ್ನೇಹಿತರ ಜೊತೆ ಸೇರಿ ಇಂದು ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಭಾರತ ದೇಶಕ್ಕೆ ಅರ್ಪಿಸಿದ ನಂದನ್ ನಿಲೇಕಣಿ ಅವರನ್ನು ಇನ್ಫೋಸಿಸ್ ಸಂಸ್ಥೆಯೇ ಇಂದು ದೇಶದ ಸೇವೆಗಾಗಿ ಅರ್ಪಿಸುತ್ತಿದೆ.

ವಿಶ್ವದ ಅಗ್ರಮಾನ್ಯ ಹತ್ತು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯನ್ನು ಈ ಮಟ್ಟಕ್ಕೆ ತರುವುದಕ್ಕೆನಿಲೇಕಣಿ ಅವರ ಬುದ್ಧಿಮತ್ತೆ ಮತ್ತು ಪರಿಶ್ರಮದ ಕಾಣಿಕೆ ಅಪಾರ. 1981ರಲ್ಲಿ ಸಂಸ್ಥೆ ಸ್ಥಾಪಿಸಿದಂದಿನಿಂದ ಸಾಮಾನ್ಯ ನೌಕರನಾಗಿ, ಮುಖ್ಯ ನಿರ್ವಹಣಾಧಿಕಾರಿಯಾಗಿ, ಮ್ಯಾನೇಜಿಂಗ್ ಡೈರೆಕ್ಟರಾಗಿ ನಂತರ ಸಹ-ಅಧ್ಯಕ್ಷರಾಗಿ ವಿವಿಧ ಮಜಲುಗಳನ್ನು ನಿಲೇಕಣಿ ಕಂಡಿದ್ದಾರೆ. ಅತೀ ಶ್ರೀಮಂತ ಸಿಇಓಗಳಲ್ಲಿ ನಂದನ್ ಒಬ್ಬರಾಗಿದ್ದರೂ ಅತ್ಯಂತ ಸರಳ ಜೀವಿ. ಸದಾ ಹಸನ್ಮುಖಿ. ತರಬೇತಿಯಲ್ಲಿರುವ ಸಿಬ್ಬಂದಿಯಿಂದ ಹಿಡಿದು ಹಿರಿಯ ಉದ್ಯೋಗಿಗಳವರೆಗೂ ಅವರು ಯಾವುದೇ ಸಮಯದಲ್ಲಿ ಲಭ್ಯರಿದ್ದರು ಮತ್ತು ಸಹಾಯ, ಮಾರ್ಗದರ್ಶನ ಮಾಡಲು ಯಾವತ್ತೂ ಸಿದ್ಧರಿದ್ದರು.

ನಿಲೇಕಣಿ ಅವರ ಅಣತಿಯಂತೆ ಜುಲೈ 9ರ ಗುರುವಾರ ಸಂಜೆ ಬೀಳ್ಕೊಡುಗೆ ಸಮಾರಂಭ ಕೂಡ ಅತ್ಯಂತ ನಿರಾಡಂಬರವಾಗಿ ನಡೆಯಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೇಂದ್ರ ಕಚೇರಿಯ ಆಂಪಿ ಥಿಯೇಟರ್ ನಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಇನ್ಫೋಸಿಸ್ ನ ಎಲ್ಲ ಉದ್ಯೋಗಿಗಳಿಗೆ ಆಹ್ವಾನ ನೀಡಲಾಗಿದೆ. ಈ ಆತ್ಮೀಯ ಸಮಾರಂಭದಲ್ಲಿ ಇನ್ಫೋಸಿಸ್ ಕಟ್ಟಿದ ಎಲ್ಲ ಗಣ್ಯರು ಭಾಗವಹಿಸಲಿದ್ದಾರೆ.

ಕಂಪನಿಯ ನಿರ್ದೇಶಕರು ಮತ್ತು ನಿಲೇಕಣಿ ಅವರೊಡನೆ ಒಡನಾಡಿದ ಕೆಲ ಕಿರಿಯ ಉದ್ಯೋಗಿಗಳು ನಿಲೇಕಣಿ ಜೊತೆ ಪಡೆದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ನಿಲೇಕಣಿ ಕೂಡ ಉದ್ಯೋಗಿಗಳನ್ನು ಉದ್ದೇಶಿಸಿ ಕೊನೆಗೆ ಮಾತನಾಡಲಿದ್ದಾರೆ. ಭಾರತದ ಗುರುತು ಚೀಟಿ ಪ್ರಾಧಿಕಾರದ ಚುಕ್ಕಾಣಿ ಹಿಡಿಯಲು ಇನ್ಫೋಸಿಸ್ ತೊರೆಯುತ್ತಿರುವ ನಿಲೇಕಣಿ ಕಳೆದ ಒಂದು ವಾರದಿಂದ ಕಂಪನಿಯ ಉದ್ಯೋಗಿಗಳಿಗೆ ಕಚೇರಿಯ ದ್ವಾರವನ್ನು ಮುಕ್ತವಾಗಿಟ್ಟಿದ್ದರು.

ಸಂಸ್ಥೆ ಸ್ಥಾಪಿಸಿದಂದಿನಿಂದ ಇಂದಿನವರೆಗೆ ನಡೆದ ಎಲ್ಲ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯಲ್ಲಿ ನಿಲೇಕಣಿ ಭಾಗವಹಿಸಿದ್ದಾರೆ. ಆದರೆ, ನಾಳೆ ನಡೆಯಲಿರುವ ತ್ರೈಮಾಸಿಕ ಫಲಿತಾಂಶ ಪ್ರಕಟಣಾ ಸಭೆಯನ್ನು ನಿಲೇಕಣಿ ಪ್ರಥಮ ಬಾರಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ನಿಲೇಕಣಿ ಅತ್ಯಂತ ಮೃದು ಸ್ವಭಾವದವರಾಗಿದ್ದರೂ ಸಂದರ್ಭಕ್ಕೆ ತಕ್ಕಂತೆ ಅತೀ ಕಠಿಣ ಕ್ರಮ, ನಿರ್ಣಯ ಕೈಗೊಳ್ಳುವುದಕ್ಕೆ ಎಂದೂ ಹಿಂದೆ ನೋಡುತ್ತಿರಲಿಲ್ಲ ಎಂಬುದು ಕಂಪನಿಯ ಹಿರಿಯ ಉದ್ಯೋಗಿಯೊಬ್ಬರ ಉವಾಚ.

ಜಾಗತಿಕ ಮಾಹಿತಿ ತಂತ್ರಜ್ಞಾನ ಪಥದಲ್ಲಿ ನಿಲೇಕಣಿ ಇಲ್ಲದೆಯೆ ಮುನ್ನುಗ್ಗುವ ಎಲ್ಲ ಸಾಮರ್ಥ್ಯ ಇನ್ ಫೊಸಿಸ್ ಕಂಪನಿಗೆ ಇದ್ದರೂ ಸಹ ಒಂದು ಬಗೆಯ ಮೌನ ಕಂಪನಿಯನ್ನು ಕಾಡಲಿದೆ. ಆದರೂ, ನೂರಾರು ಕೋಟಿ ಪ್ರಜೆಗಳ ಈ ರಾಷ್ಟ್ರದಲ್ಲಿ ಪ್ರತಿಯೊಬ್ಬನಿಗೂ ಗುರುತು ಚೀಟಿ ಕೊಡುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ದೆಹಲಿಯತ್ತ ಮುಖಮಾಡಿರುವ ನಿಲೇಕಣಿ ಅವರ ಬಗ್ಗೆ ಇನ್ಫೋಸಿಯಾನ್ಸ್ ಸಮುದಾಯಕ್ಕೆ ಹೆಮ್ಮೆ. ಹಾಗೆ ನೋಡಿದರೆ ಇಡೀ ಇನ್ಫೋಸಿಸ್ ಬಳಗಕ್ಕೆ ನಂದನ್ ಅವರನ್ನು ದೇಶ ಸೇವೆಗೆ ಸಮರ್ಪಿಸುತ್ತಿರುವ ಧನ್ಯತಾಭಾವ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+