ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣೀಗೇರಿ : ಸಾಲದ ಸುಳಿಯಲ್ಲಿ ಕೃಷಿ ವಿಜ್ಞಾನಿ

By Staff
|
Google Oneindia Kannada News

ಹುಬ್ಬಳ್ಳಿ, ಜು. 9 : ರಾಷ್ಟ್ರಪತಿ ಡಾ ಅಬ್ದುಲ್ ಕಲಾ ಅವರಿಂದ ರಾಷ್ಟ್ರೀಯ ಕೃಷಿ ವಿಜ್ಞಾನಿ ಎಂಬ ಪ್ರಶಸ್ತಿ ಪಡೆದುಕೊಂಡಿದ್ದ ಕೃಷಿ ವಿಜ್ಞಾನಿ ಅಬ್ದುಲ್ ಖಾದರ್ ರೈತರಿಗೆ ಉಪಯೋಗವಾಗುವಂತ ಪ್ರಯೋಗ ಮಾಡಿದ ಅವರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದು ಕರುಣಾಜನಕ ಸ್ಥಿತಿಯಲ್ಲಿದ್ದಾರೆ.

ಗದಗ ಜಿಲ್ಲೆಯ ಅಣ್ಣಿಗೇರಿ ಹೋಬಳಿಯವರಾದ ಅಬ್ದುಲ್ ಖಾದರ್ ಅವರು ಪದವೀಧರರಾಗಿಲ್ಲದಿದ್ದರೂ ಅಸಾಮಾನ್ಯ ಪ್ರತಿಭಾವಂತರು. ತಮ್ಮ ಜಾಣ್ಮೆಯಿಂದಲೇ ಅವರು ಕೃಷಿ ಕ್ಷೇತ್ರದಲ್ಲಿ ಉತ್ತಮ ಕೃಷಿ ಮಾಡಿದ್ದರು. ಬಿತ್ತನೆಗೆ ಸಂಬಂಧಿಸಿದಂತೆ ನೂತನ ಮಷೀನ್ ತಯಾರಿಸಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಕೃಷಿ ವಿಜ್ಞಾನಿ ಪ್ರಶಸ್ತಿಯ ಗೌರವವಕ್ಕೂ ಪಾತ್ರರಾದರು.

ಹೀಗೆ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಖಾದರ್ ಅವರು, ಅದಕ್ಕೆ ಬೇಕಿರುವ ಅಗತ್ಯತೆಗಳ ಸಲುವಾಗಿ ಸಾಲದ ಮೋರೆಗೆ ಹೋದರು. ಇದೀಗ ಅವರ ಸಾಲದ ಮೊತ್ತ 16 ಲಕ್ಷಕ್ಕೆ ಏರಿದೆ. ಉಪಜೀವನಕ್ಕೆ ಇರುವ ಜಮೀನು ಮನೆಯಲ್ಲಿ ಸಾಲ ಕೊಟ್ಟ ಬ್ಯಾಂಕ್ ಗಳು ಹರಾಜು ಹಾಕಲು ಮುಂದಾಗಿವೆ. ಕೈಯಲ್ಲಿ ಕಾಸಿಲ್ಲಿದ ಖಾದರ್ ಅವರು ಮಂದೇನು ಎಂಬ ದೊಡ್ಡ ಚಿಂತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಮೀನು. ಮನೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡರೆ ಕುಟುಂಬ ಬೀದಿಗೆ ಬರಲಿದೆ ಎಂದ ಖಾದರ್ ಅವರ ಕಣ್ಣಿರು ತಗೆಯುತ್ತಾರೆ.

ಈ ಸಾಲ ನಿನ್ನೆ ಮೊನ್ನೆಯದಲ್ಲ. ಕಳೆದ ಅನೇಕ ವರ್ಷಗಳಿಂದ ಮಾಡಿರುವ ಸಾಲ ಇದಾಗಿದೆ. ಸ್ವಂತಕ್ಕಾಗಿ ನಾನು ಈ ಸಾಲ ಮಾಡಿಕೊಂಡಿಲ್ಲ. ರೈತರಿಗೆ ಉಪಯೋಗವಾಗಲಿ ಎಂಬ ಕಾರಣದಿಂದ ಈ ಸಾಲ ಮಾಡಿರುವೆ. ಆದ್ದರಿಂದ ಸರಕಾರ ನನ್ನ ಹಾಗೂ ಕುಟುಂಬವನ್ನು ಸಾಲದಿಂದ ಮುಕ್ತ ಮಾಡಬೇಕು ಎಂದು ಬೇಡಿಕೊಳ್ಳುತ್ತಿದ್ದಾನೆ. ಧರಂಸಿಂಗ್, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದಾಗ ಈ ಬಗ್ಗೆ ಅವರ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಯಡಿಯೂರಪ್ಪ ಅವರು ನನಗೆ ಸಹಾಯ ಮಾಡಬೇಕು. ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಲು ಸೂಚನೆ ನೀಡಬೇಕು ಎಂದು ಅವರು ಅಂಗಲಾಚುತ್ತಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X