237857vs acharyaಮಂಪರು ತಜ್ಞೆ ಡಾ ಮಾಲಿನಿ ಸೇವೆಯಿಂದ ವಜಾ /news/2009/02/26/cfsl-assistant-director-dr-malini-sacked.htmlಬೆಂಗಳೂರು, ಫೆ. 26 : ಕೊನೆಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ (ಎಫ್ಎಸ್ ಎಲ್) ಡಾ ಎಸ್ ಮಾಲಿನಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಛಾಪಾ ಕಾಗದ ಹಗರಣ, ಐಐಎಸ್ಸಿ ದಾಳಿ ಪ್ರಕರಣ, ಹೈದರಾಬಾದ್ ಬಾಂಬ್ ದಾಳಿ ಪ್ರಕರಣಗಳು ಸೇರಿದಂತೆ ನೂರಾರು ಪಾತಕಿಗಳ ನಿದ್ರೆ ಕೆಡಿಸಿದ ಖ್ಯಾತಿ ಸಂಪಾದಿಸಿದ್ದ ಡಾ. ಮಾಲಿನಿ ಶೈಕ್ಷಣಿಕ ದಾಖಲೆ 34869http://kannada.oneindia.com/img/2009/02/26-dr-malini-cfsl1.jpg237857vs acharyaಈ ಯುಗದ ರಾಜಕಾರಣಿಗಳ ಇ ಪ್ರಚಾರ ತಂತ್ರ/news/2009/03/31/karnataka-tech-savvy-politicians-e-campaigning.htmlಬೆಂಗಳೂರು,ಮಾ. 31: ತಂತ್ರಜ್ಞಾನ ಬಳಸಿ ಮತದಾರರನ್ನು ಸೆಳೆಯುವ ತಂತ್ರದಲ್ಲಿ ಬಿಜೆಪಿ ಎಲ್ಲ ಪಕ್ಷಕ್ಕಿಂತ ಮುಂದಿದ್ದು, ಈಗ ಜೆಡಿಎಸ್ ಕೂಡ ತನ್ನ ವೆಬ್ ಸೈಟ್ , ಎಸ್ಸೆಂಎಸ್ ಸಂದೇಶಗಳ ಮೂಲಕ ಇ- ಪ್ರಚಾರ ಆರಂಭಿಸಿದೆ.ನಗರವಾಸಿಗಳು, ತಂತ್ರಜ್ಞರು, ಯುವ ಜನತೆಯನ್ನು ಗುರಿಯಾಗಿರಿಸಿಕೊಂಡು ಈ ರೀತಿಯ ಪ್ರಚಾರಕ್ಕೆ ಜೆಡಿಎಸ್ ಮುಂದಾಗಿದೆ. ಬೆಂಗಳೂರಿನಲ್ಲಿ ಅಂದಾಜಿನಂತೆ ಶೇ. 80ರಷ್ಟು ಜನ ಇಂಟರ್ 35611http://kannada.oneindia.com/img/2009/03/31-kumaraswami8.jpg237857vs acharyaಎಲ್ಟಿಟಿಇ ಉಗ್ರರು ನುಸುಳುವಿಕೆ ಶಂಕೆ : ಕಟ್ಟೆಚ್ಚರ/news/2009/05/20/bengaluru-on-alert-possible-infiltration-of-ltte.htmlಬೆಂಗಳೂರು, ಮೇ, 20 : ಶ್ರೀಲಂಕಾದ ಸೇನೆ ಉಗ್ರ ವಿ ಪ್ರಭಾಕರನ್ ಅವರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಎಲ್ ಟಿಟಿಇ ಉಗ್ರರನ್ನು ರಾಜ್ಯದೊಳಗೆ ನುಸುಳದಂತೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು 36783http://kannada.oneindia.com/img/2009/05/20-acharya-vs1.jpg237857vs acharyaಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ/news/2009/07/05/jittery-mysore-shuts-down-curpew-extendend-acharya.htmlಮೈಸೂರು, ಜು. 5 : ಮೈಸೂರಿನಲ್ಲಿ ಗಲಭೆಗೆ ಸಂಬಂಧಿಸಿ ಅಪರಾಧಿಗಳು ಯಾರೇ ಇರಲಿ, ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಡಾ.ವಿ ಎಸ್ ಆಚಾರ್ಯ ಇಂದಿಲ್ಲಿ ಹೇಳಿದ್ದಾರೆ.ಮೈಸೂರು ನಗರದ ಗಲಭೆಗಳಲ್ಲಿ ಗಾಯಗೊಂಡವರು ಹಾಗೂ ಸಂತ್ರಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಗಲಭೆಗಳ ಬಗ್ಗೆ ಪೋಲೀಸ್ ಇಲಾಖೆ ತನಿಖೆ 37783http://kannada.oneindia.com/img/2009/07/05-vs-acharya2.jpg237857vs acharyaಬಯೋಟೆಕ್ ನೀತಿ ಜಾರಿಗೆ ಸಂಪುಟ ಅಸ್ತು /news/2009/07/07/karnataka-cabinet-approves-biotechnology-policy.htmlಬೆಂಗಳೂರು, ಜು. 7 : ವಿಜಾಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಮೂರು ವರ್ಷಗಳಲ್ಲಿ 30 ಕೋಟಿ ರೂ. ಮಂಜೂರಾತಿ ನೀಡಿದ್ದು, ಆಯವ್ಯಯದಲ್ಲಿ ಪ್ರಸಕ್ತ ವರ್ಷಕ್ಕಾಗಿ 14 ಕೋಟಿ ರೂ.ಗಳನ್ನು 200 ಎಕರೆ ಭೂಮಿ ಜಾಗ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗ್ರಾಮಲೆಕ್ಕಿಗರ ಹುದ್ದೆಗೆ ಪಿ.ಯು.ಸಿ. 37828http://kannada.oneindia.com/img/2009/07/07-vs-acharya1e.jpg111443mysoreಹದಿನೆಂಟೂ ಸಮಸ್ತರ ಅರಕಲಗೂಡು ದಸರಾ/festivals/dasara/2008/1007-arakalgud-dasara-communal-harmony.htmlಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿರುವ ಈ ನವರಾತ್ರಿ ಉತ್ಸವ ಅರಕಲಗೂಡಿನ ಹೆಮ್ಮೆ. 18 ಕೋಮಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಅರಕಲಗೂಡು ದಸರಾ ರಾಜ್ಯದಲ್ಲೇ ವಿನೂತನ,ವಿಶಿಷ್ಠ ಮತ್ತು ಅನುಕರಣೀಯ. 442http://kannada.oneindia.com/img/2009/09/17-arakalgud-dasara1.jpg111443mysoreಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg111443mysoreನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg111443mysoreಸಡಗರದ ದ್ಯೋತಕ ಈ ದಸರಾ/festivals/dasara/stories/2006/260906bhalle.htmlವಿಜಯದಶಮಿ ಬಂತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ದಸರಾ ಮೆರವಣಿಗೆ, ಸರಸ್ವತಿ ಪೂಜೆ, ಆಯುಧಪೂಜೆ, ಬೊಂಬೆ ಹಬ್ಬ ಸೇರಿದಂತೆ ವಿವಿಧ ಆಚರಣೆಗಳು ನೀಡುವ ಖುಷಿಯನ್ನು ಮರೆಯುವುದಾದರೂ ಹೇಗೆ?ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌ಕರ್ನಾಟಕ ರಾಜ್ಯದ ನಾಡಹಬ್ಬ ಈ ದಸರಾ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ಮೈಸೂರು ಅರಮನೆಯೇ ಅಲ್ಲದೆ ಇಡೀ ನಗರ, ಜಗಜಗಿಸುವ ದೀಪಗಳಿಂದ ಅಲಂಕೃತವಾಗಿ 6633http://kannada.oneindia.com/img/2009/09/17-srinath-bhalle3.jpg111443mysoreವಿಶ್ವೇಶ್ವರಯ್ಯ: ಮೇರು ವಾಸ್ತುಶಿಲ್ಪಿ , ಶಿಸ್ತಿನ ಸಿಪಾಯಿ/literature/people/2003/150903sirmv.htmlಅದು ವಿಶ್ವೇಶ್ವರಯ್ಯನವರ ಆಪ್ತೇಷ್ಟರು, ಬಂಧುಗಳೆಲ್ಲ ಸೇರಿದ್ದ ಸಣ್ಣ ಸಂತೋಷ ಕೂಟ. ವಿಶ್ವೇಶ್ವರಯ್ಯ ಅವರಿಗೆ ದಿವಾನ್‌ ಪದವಿ ಸಿಕ್ಕಿತ್ತು. ಆ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಮೊದಲು ತಮ್ಮ ಬಂಧು ಬಳಗವನ್ನೆಲ್ಲ ಕರೆದು ಸಣ್ಣ ಭೋಜನ ಕೂಟವೇರ್ಪಡಿಸಿದ್ದರು. ಆ ಕೂಟ ದಿವಾನರಾದ ಖುಷಿಯನ್ನು ಹಂಚಿಕೊಳ್ಳುವುದಕ್ಕಲ್ಲ ; ಕರ್ತವ್ಯದ ಜವಾಬ್ದಾರಿ ಭಾರವನ್ನು ಬಂಧುಗಳಿಗೆ ಮನದಟ್ಟು ಮಾಡಿಸುವುದಕ್ಕಾಗಿ. ದಿವಾನ ಪದವಿಯಲ್ಲಿರುವ ತಮ್ಮನ್ನು ಯಾವುದೇ ಶಿಫಾರಸುಗಳಿಗೆ 8959http://kannada.oneindia.com/img/2009/09/15-sirmv1.jpg532051communal clashesಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ/news/2009/07/05/jittery-mysore-shuts-down-curpew-extendend-acharya.htmlಮೈಸೂರು, ಜು. 5 : ಮೈಸೂರಿನಲ್ಲಿ ಗಲಭೆಗೆ ಸಂಬಂಧಿಸಿ ಅಪರಾಧಿಗಳು ಯಾರೇ ಇರಲಿ, ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಡಾ.ವಿ ಎಸ್ ಆಚಾರ್ಯ ಇಂದಿಲ್ಲಿ ಹೇಳಿದ್ದಾರೆ.ಮೈಸೂರು ನಗರದ ಗಲಭೆಗಳಲ್ಲಿ ಗಾಯಗೊಂಡವರು ಹಾಗೂ ಸಂತ್ರಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಗಲಭೆಗಳ ಬಗ್ಗೆ ಪೋಲೀಸ್ ಇಲಾಖೆ ತನಿಖೆ 37783http://kannada.oneindia.com/img/2009/07/05-vs-acharya2.jpg532051communal clashesಮೈಸೂರು ಗಲಭೆ : ಪಿಎಫ್ ಡಿ ಸಂಘಟನೆ ನಿಷೇಧ /news/2009/07/10/kfd-pfd-organisation-likely-to-ban.htmlಮೈಸೂರು, ಜು. 10 : ಕೋಮುಸೌಹಾರ್ದ ಹಾಳು ಮಾಡುತ್ತಿರುವ ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಚರ್ಚಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ತಿಳಿಸಿದ್ದಾರೆ. ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಯುವಮೂರ್ಚಾ ಅಧ್ಯಕ್ಷ ವಿ ಗಿರಿಧರ್ ಅವರ ಆರೋಗ್ಯ ವಿಚಾರಿಸಿದ ನಂತರ ಮಾದ್ಯಮ 37902http://kannada.oneindia.com/img/2009/07/10-sadananda-gowda1.jpg532051communal clashesಮೈಸೂರು ಗಲಭೆ ಷಡ್ಯಂತ್ರ : ಯಡಿಯೂರಪ್ಪ/news/2009/07/10/yeddyurappa-reacts-on-mysuru-incident.htmlಬೆಂಗಳೂರು, ಜು. 10 : ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಯೊಂದು ವ್ಯವಸ್ಥಿತ ಸಂಚು. ಸರಕಾರಕ್ಕೆ ಮಸಿ ಬಳಿಯಲು ಕಾಣದ ಕೈಗಳು ಈ ಘಟನೆಯಲ್ಲಿ ಭಾರಿ ಷಡ್ಯಂತ್ರ ರೂಪಿಸಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ಮಾತನಾಡಿದರು. ರಾಜ್ಯದ ಕೋಮುಸೌಹಾರ್ದತೆ ಹಾಗೂ ಶಾಂತಿ ಕದಡಲು ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರಿನಲ್ಲಿ ಗಲಭೆಗೆ ಪ್ರಚೋದನೆ 37911http://kannada.oneindia.com/img/2009/07/10-yeddyurappa-new2.jpg532051communal clashesಮೈಸೂರು ಗಲಭೆ : ಸಂಘಪರಿವಾರದ ಕೈವಾಡ /news/2009/07/12/jds-to-expose-bjp-govts-failure-in-mysore-riots.htmlಬೆಂಗಳೂರು, ಜು. 12 : ಮೈಸೂರು ಗಲಭೆಗೆ ಬಿಜೆಪಿ ಅಂಗ ಸಂಸ್ಥೆಗಳು ನಡೆಸಿದ ಷಡ್ಯಂತ್ರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ಎಸ್ಎಸ್ ನೇತೃತ್ವದ ಸಂಘ ಪರಿವಾರಗಳು ಮೈಸೂರಿನ ಶಾಂತಿಗೆ ಭಂಗ ತಂದಿವೆ ಎಂದು ತರಾಟೆಗೆ ತೆಗೆದುಕೊಂಡರು. 37933http://kannada.oneindia.com/img/2009/07/12-kumaraswami2.jpg532051communal clashesಬಿಜೆಪಿಗೆ ಉಳಿಗಾಲವಿಲ್ಲ : ಮುತಾಲಿಕ್/news/2009/07/29/pramod-mutalik-released-from-bellary-jail.htmlಮೈಸೂರು, ಜು, 29 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬಳ್ಳಾರಿ ಜೈಲಿನಲ್ಲಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಮೈಸೂರಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಎಂ ಕಾಮ್ಟೆ ಅವರು ಮುತಾಲಿಕ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ 10 ಸಾವಿರ ಭದ್ರತಾ ಠೇವಣಿ ಇಟ್ಟಕೊಂಡು ಮುತಾಲಿಕ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. 38301http://kannada.oneindia.com/img/2009/07/29-pramod-mutalik2.jpgnews"> ಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ | VS Acharya | Mysore | Communal Clashes | Kyathamaranahalli | BJP | ಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ - Kannada Oneindia

ಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ

V S Acharya
ಮೈಸೂರು, ಜು. 5 : ಮೈಸೂರಿನಲ್ಲಿ ಗಲಭೆಗೆ ಸಂಬಂಧಿಸಿ ಅಪರಾಧಿಗಳು ಯಾರೇ ಇರಲಿ, ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಡಾ.ವಿ ಎಸ್ ಆಚಾರ್ಯ ಇಂದಿಲ್ಲಿ ಹೇಳಿದ್ದಾರೆ.

ಮೈಸೂರು ನಗರದ ಗಲಭೆಗಳಲ್ಲಿ ಗಾಯಗೊಂಡವರು ಹಾಗೂ ಸಂತ್ರಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಗಲಭೆಗಳ ಬಗ್ಗೆ ಪೋಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ನ್ಯಾಯಾಂಗ ತನಿಖೆಯು ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದ ಅವರು ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲೀಸ್ ಹಾಗೂ ಜಿಲ್ಲಾಡಳಿತದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಲ್ಕು ವಿವಿಧ ಆಸ್ಪತ್ರೆಗಳಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ತಾವು ಅವರೆಲ್ಲರನ್ನೂ ಭೇಟಿ ಮಾಡಿದ್ದಾಗಿ ಹೇಳಿದ ಅವರು ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು , ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಗಲಭೆಗಳಿಗೆ ಸಂಬಂಧಿಸಿ ಈಗಾಗಲೇ 43 ಜನರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದವರನ್ನು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವರು ಹೇಳಿದರು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು , ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಇಂತಹ ಗಲಭೆಗಳು ಸಂಭವಿಸಬಾರದಿತ್ತು ಎಂದು ವಿಷಾಧಿಸಿದ ಅವರು ಜನರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯ ಪೋಲೀಸ್ ಮಹಾನಿರ್ದೇಶಕರು, ಮೈಸೂರು ನಗರ ಪೋಲೀಸ್ ಆಯುಕ್ತರು, ಮೈಸೂರು ಜಿಲ್ಲಾಧಿಕಾರಿಗಳು, ಸಚಿವರ ಜತೆಗೆ ಇದ್ದರು.

ಉದಯಗಿರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ
ಮೈಸೂರು ನಗರದ ಉದಯಗಿರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕ್ಯಾತಮಾರನಹಳ್ಳಿಯಲ್ಲಿ ಕೋಮು ಗಲಭೆ ನಡೆದು ಪ್ರಕ್ಷುಬ್ದ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಜುಲೈ 8ರ ವರೆಗೆ ವಿಸ್ತರರಿಸಲಾಗಿದೆ ಮೈಸೂರು ನಗರ ಪೋಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಸುನೀಲ್ ಅಗರವಾಲ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ಫ್ಯೂ ಜಾರಿಯಲ್ಲಿರುವ ಅವಧಿ ಹಾಗೂ ಪ್ರದೇಶದಲ್ಲಿ ಯಾರೊಬ್ಬರು ತನ್ನ ವಾಸದ ಮನೆಯಿಂದ ಹೊರ ಬರುವುದನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು, ಶಸ್ತ್ರ , ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟುಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವುದನ್ನು ನಿಷೇಧಿಸಿದೆ.

ಯಾವುದೇ ವಿನಾಶಕಾರಿ ದಾಹಕ ವಸ್ತು ಇಲ್ಲವೇ ಸ್ಪೋಟಕ ವಸ್ತು ಒಯ್ಯುವುದನ್ನು, ಕಲ್ಲು ಅಥವಾ ಎಸೆಯುವ ವಸ್ತು ಅಥವಾ ಅಂತಹ ವಸ್ತುಗಳನ್ನು ಎಸೆಯುವ ಅಥವಾ ಚಲಿಸುವ ಅಸ್ತ್ರಗಳನ್ನು ಅಥವಾ ಸಾಧನಗಳನ್ನು ಒಯ್ಯುವುದನ್ನು ಸಂಗ್ರಹಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿ ನಿಷೇಧಿತ ಮಾರಕಾಸ್ತ್ರ , ಸ್ಫೋಟಕ ವಸ್ತುಗಳನ್ನು ವಿನಾಶಕಾರಿ ವಸ್ತುಗಳನ್ನು , ಬಂದೂಕುಗಳನ್ನು ಹೊಂದಿದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೋಲೀಸ್ ಅಧಿಕಾರಿಗಳಿಗೆ ಅಧಿಕಾರವಿದ್ದು, ಮತ್ತು ಅಂತಹ ವ್ಯಕ್ತಿಯ ಬಳಿ ಇರುವ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+