ವಿಶ್ವ ಮಧ್ವ ಮಹಾಪರಿಷತ್ ಶಾಕಾಂಬರಿನಗರ
ಬೆಂಗಳೂರು, ಜು. 2 : ವಿಶ್ವ ಮಧ್ವ ಮಹಾಪರಿಷತ್ತಿನ ಶಾಕಾಂಬರಿ ನಗರ ಉಪಘಟಕದ ಉದ್ಘಾಟನೆ ಇದೇ ಜುಲೈ 4ರ ಶನಿವಾರ ಆಷಾಢ ಶುದ್ಧ ದ್ವಾದಶಿಯಂದು ನೆರವೇರಲಿದೆ. ಉತ್ತರಾಧಿಮಠದ ಪೀಠಾಧಿಪತಿಗಳಾದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಘಟಕದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಆಸಕ್ತ ಬಂಧುಗಳು ಪರಿಷತ್ತಿನ ಘಟಕದ ಆರಂಭೋತ್ಸವಕ್ಕೆ ಆಗಮಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ವಿಶ್ವ ಮಧ್ವ ಮಹಾಪರಿಷತ್ ಬೆಂಗಳೂರು ಹಾಗೂ ಕೋಲಾರ ಜಿಲ್ಲಾ ಘಟಕದ ವ್ಯವಸ್ಥಾಪಕರು ಕೋರಿದ್ದಾರೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶಾಕಾಂಬರಿನಗರ, ಕನಕಪುರ ರಸ್ತೆ, ಬೆಂಗಳೂರು. ಉದ್ಘಾಟನಾ ಸಮಯ : ಮಧ್ಯಾಹ್ನ 1.30.
ಹೆಚ್ಚಿನ ವಿವರಗಳಿಗೆ : ವಿಶ್ವ ಮಧ್ವ ಮಹಾಪರಿಷತ್, ನಂ. 10, ಗುರುರಾಜ ಬಡಾವಣೆ, ಕೊತ್ತನೂರು ರಸ್ತೆ, ಕೋಣನಕುಂಟೆ ಅಂಚೆ, ಬೆಂಗಳೂರು- 560062. ದೂರವಾಣಿ ; 2632 2716, ಮೊಬೈಲ್- 93416 66527. ಇಮೇಲ್ : [email protected]
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications