ಸಲಿಂಗ ರತಿ ಸಕ್ರಮ ಇಲ್ಲ: ಕಾನೂನು ಸಚಿವ ಮೊಯ್ಲಿ

ಈ ಕುರಿತು ಸ್ಪಷ್ಟೀಕರಣ ನೀಡಿದ ಮೋಯ್ಲಿ ಅವರು, ಸಲಿಂಗರತಿಯನ್ನು ಸಕ್ರಮ ಗೊಳಿಸಲಾಗುವುದು ಎಂದು ನಾನು ಎಂದೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಐಪಿಸಿಸೆಕ್ಷನ್ 377 ರ ವಿಧಿಗಳನ್ನು ಇನ್ನೂ ಪರಿಶೀಲಿಸಿಲ್ಲ. ಸಚಿವ ಸಂಪುಟದ ಒಬ್ಬ ಸಚಿವ ಕಾಯ್ದೆಯನ್ನು ಬದಲಿಸುವ ಅಥವಾ ಬದಲಿಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಮೊಯ್ಲಿ ಪ್ರಶ್ನಿಸಿದರು.
ಸಚಿವ ಸಂಪುಟ ಸಭೆಯ ನಂತರ ತೀರ್ಮಾನ ಕೈಗೊಳ್ಳಬಹುದಾಗಿದೆ. ಅಲ್ಲದೆ ಈ ಬಗ್ಗೆ ತುರ್ತಾಗಿ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇಲ್ಲ. ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯ ಸಂಗ್ರಹಿಸಿದ ಮೇಲಷ್ಟೇ ಮುಂದುವರೆಯಲಾಗುವುದು ಎಂದು ಮೊಯ್ಲಿ ಹೇಳಿದರು. ಸಲಿಂಗ ರತಿ ಸಕ್ರಮಕ್ಕೆ ಇಸ್ಲಾಂನಲ್ಲಿ ವಿರೋಧವಿದ್ದು, ಸರ್ಕಾರದ ಕ್ರಮ ಸರಿಯಿಲ್ಲಎಂದು ಮುಸ್ಲಿಂ ಧಾರ್ಮಿಕ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
(ಏಜೆನ್ಸೀಸ್)












Click it and Unblock the Notifications