• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುರ್ಕಾ ಗುಲಾಮಗಿರಿಯ ಸಂಕೇತವೇ ?

By Staff
|
ಬುರ್ಕಾ ಎಂಬುದು ಗುಲಾಮಗಿರಿಯ ಸಂಕೇತವೇ ? ಬುರ್ಕಾ ಧರಿಸುವುದು ಮುಸ್ಲಿಂ ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆಯೇ ? ಇಸ್ಲಾಂ ಧರ್ಮ ತಮ್ಮ ಮಹಿಳೆಯರಿಗೆ ಅಧಿಕಾರಯುತವಾಗಿ ಬುರ್ಕಾ ತೊಡಿಸುತ್ತದೆಯೇ ? ಸಾಕಷ್ಟು ಪ್ರಗತಿ ಸಾಧಿಸಿದ ಇಂದಿನ ತಂತ್ರಜ್ಞಾನ ಯುಗದಲ್ಲಿ ಧರ್ಮದ ಕಟ್ಟುಪಾಡುಗಳು ವಜ್ಯಾ ಅನಿಸುತ್ತಿವೆಯೇ ? ಈ ಪ್ರಶ್ನೆಗಳು ಬುರ್ಕಾ ಎಂಬ ಪರದೆಯನ್ನು ಭರಿಸುತ್ತಿರುವ ಮಹಿಳೆಯರಿಗೆ ಕಾಡುತ್ತವೆಯೇ ಇಲ್ಲವೋ ಗೊತ್ತಿಲ್ಲ. ಆದರೆ, ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರಿಗಂತೂ ತುಂಬಾ ಕಿರಿಕಿರಿಯಾಗುತ್ತಿದೆ. ಇಸ್ಲಾಮಿಕ್ ಬುರ್ಕಾಗೆ ಫ್ರಾನ್ಸ್ ನಲ್ಲಿ ಸ್ವಾಗತವಿಲ್ಲ ಎಂಬ ಫರ್ಮಾನು ಹೊರಡಿಸಿದ್ದಾರೆ. ನಿಕೋಲಸ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಪರ ವಿರೋಧ ವ್ಯಕ್ತವಾಗಿದೆ.

ಇಷ್ಟಕ್ಕೂ ಸರ್ಕೋಜಿ ಅವರ ಎತ್ತಿರುವ ಪ್ರಶ್ನೆಯನ್ನು ಬೆನ್ನಟ್ಟಿದಾಗ ಸಿಕ್ಕಿದ್ದು ಇಷ್ಟು. ಫ್ರಾನ್ಸ್ ನಲ್ಲಿ ಬುರ್ಕಾಗೆ ಸ್ವಾಗತವಿಲ್ಲ. ಏಕೆಂದರೆ ಇದೊಂದು ಧಾರ್ಮಿಕ ಚಿಹ್ನೆಯಲ್ಲ. ಬದಲಾಗಿ ಮಹಿಳಾ ಗುಲಾಮಗಿರಿ. ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸುವ ಮೂಲಕ ಸಾರ್ವಜನಿಕವಾಗಿ ತಮ್ಮನ್ನು ಪೂರ್ಣ ಮುಚ್ಚಿಕೊಳ್ಳುವುದರಿಂದ ಫ್ರಾನ್ಸ್ ನಲ್ಲಿ ಮಹಿಳಾ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಕೆಲವು ಸಂಸದರು ಪ್ರಶ್ನೆಗಳನ್ನು ಎತ್ತಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲ ಸಾಮಾಜಿಕ ಬದುಕಿನಿಂದ ದೂರವಿದ್ದು, ಕೈದಿಗಳಂತೆ ಪರದೆಯ ಹಿಂದಿರುವುದನ್ನು ಒಪ್ಪಿಕೊಳ್ಳಲಾಗದು. ನಾವು ಮುಸ್ಲಿಂ ಧರ್ಮವನ್ನು ಗೌರವಿಸಬೇಕು ಎಂದು ಫ್ರಾನ್ಸ್ ಸಂಸತ್ತಿನಲ್ಲಿ ವಿಶೇಷ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸರ್ಕೋಜಿ ಅವರ ಮಾತುಗಳು ಮುಸ್ಲಿಂ ರಾಷ್ಟ್ರಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಜಗತ್ತಿನಾದ್ಯಂತ ಇರುವ ಇಸ್ಲಾಂ ಧಾರ್ಮಿಕ ಮುಖಂಡರಿಗೆ ಸರ್ಕೋಜಿ ಅವರು ವಿಲನ್ ಆಗಿ ಕಾಣಿಸಿತೊಡಗಿದ್ದಾರೆ. ಭಾರತದ ವೆಬ್ ಸೈಟ್ ಗಳು ಸೇರಿ ವಿಶ್ವದ ಅನೇಕ ವೆಬ್ ಸೈಟ್ ಗಳಲ್ಲಿ ಸರ್ಕೋಜಿ ಅವರ ಹೇಳಿಕೆಗೆ ಪರ ವಿರೋಧ ಲೇಖನಗಳು ಪ್ರಕಟವಾಗಿವೆ. ಲೇಖನ ತುಂಬೆಲ್ಲಾ ಕೆಂಡಾಕಾರಿರುವುದು ಅನೇಕ ಅನ್ ಲೈನ್ ಗಳಲ್ಲಿ ಕಾಣಬಹುದು. ಫ್ರಾನ್ಸ್ ಸರಕಾರದ ಚಿಂತನೆಯನ್ನು ಫ್ರೆಂಚ್ ಅಧಿಕೃತ ಮುಸ್ಲಿಂ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರಕಾರ ತಳೆದಿರುವ ನಿಲುವುನಿಂದ ಯಾವುದೇ ಕಾರ್ಯ ಸಾಧನೆ ಆಗದು. ಸಂಸದೀಯ ಸಮಿತಿಯ ಮೂಲಕ ಮುಸ್ಲಿಮರನ್ನು ಧಮನ ಮಾಡುವ ತಂತ್ರವಿದು ಎಂದು ಮಂಡಳಿ ಕಿಡಿಕಾರಿದೆ.

ಆದರೆ ವಿವಾದಾತ್ಮಕ ಮುಸ್ಲಿಂ ನಾಯಕ ಹಾಗೂ ಆಕ್ಸಪರ್ಡ್ ನ ಮುಸ್ಲಿಂ ಎಜುಕೇಷನ್ ಸೆಂಟರ್ ನ ಚೇರಮನ್ ಡಾ ತಾಜ್ ಹಾರ್ಜಿ ಮಾತ್ರ ಸರ್ಕೋಜಿ ಅವರ ಬೆಂಬಲಿಕ್ಕೆ ನಿಂತಿದ್ದು, ಮುಸ್ಲಿಂ ನಾಯಕರು ಅಧಿಕಾರಯುತವಾಗಿ ಹೇರಿರುವ ಬುರ್ಕಾ ಎಂಬ ಪೀಡೆಯನ್ನು ನಿಷೇಧಿಸಿದ್ದು ಸರಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯರನ್ನು ಪೂರ್ಣವಾಗಿ ಮುಚ್ಚಿ ಅವರನ್ನು ಕತ್ತಲೆಯಲ್ಲಿ ತಳ್ಳುವುದು ಇನ್ನೆಷ್ಟು ದಿನ. ಇಂತಹ ಸಂಪ್ರದಾಯವನ್ನು ಮುಸ್ಲಿಮರು ಕೈಬಿಟ್ಟು, ತಮ್ಮ ಮಹಿಳೆಯರು ಮನುಷ್ಯರೆ, ಅವರಿಗೂ ಅವರದೆ ಆದ ಸ್ವಾತಂತ್ರವಿದೆ. ಅವರಿಷ್ಟದ ಹಾಗೆ ಜೀವಿಸಲು ಬಿಡುವದಕ್ಕೆ ಇದೊಂದು ಸಕಾಲ. ಫ್ರಾನ್ಸ್ ಸರಕಾದ ಕೈಗೊಂಡಿರುವ ದಿಟ್ಟ ನಿರ್ಧಾರ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಪುರುಷ ಎಲ್ಲ ದೌರ್ಜನ್ಯಗಳನ್ನು ಸಹಿಸಿಕೊಂಡು ಜಗತ್ತಿನಲ್ಲಿ ಜೀವಿಸುತ್ತಿರುವ ಮುಸ್ಲಿಂ ಮಹಿಳೆಯರು ಧ್ವನಿ ಎತ್ತಬೇಕು ಎಂದಿದ್ದಾರೆ. ಕುರಾನ್ ಪ್ರಕಾರ ಬರುವುದಾದರೆ, ಮಹಿಳೆ ಹಾಗೂ ಪುರುಷರು ಸಾರ್ವಜನಿಕವಾಗಿ ತಮ್ಮ ಅಷ್ಟೂ ದೇಹವನ್ನು ಮುಚ್ಚಿಕೊಳ್ಳಬೇಕು ಎಂದಿದೆ. ಆದರೆ, ಇಲ್ಲಿ ಅಗುತ್ತಿರುವುದು ಏನು ? ಪುರುಷರಾದರೆ ಸ್ವಾತಂತ್ರವಾಗಿ ತಮಗಿಷ್ಟದಂತೆ ಇರಬಹುದು. ಆದರೆ ಮಹಿಳೆಯರಿಗೆ ಮಾತ್ರ ಈ ಶಿಕ್ಷೆ ಎಂದು ಅವರ ಪ್ರಶ್ನೆಯಾಗಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎನ್ನುವುದು ಅವರ ವಾದ. ಅವರಿಗೂ ಸಮಾನತೆ, ಸ್ವಾತಂತ್ರ ಕೊಡಿ ಎನ್ನುವುದು ಅವರ ಒತ್ತಾಯವಾಗಿದೆ.

ಆದರೆ, ಆಕ್ಸಫರ್ಡ್ ನ ಆಲ್ ಮುಸ್ಲಿಂ ಸ್ಕೂಲ್ ನ ಚೇರಮನ್ ಡಾ ಹಾಜಿತ್ ರಾಮ್ಜಿ ಅವರ ಸರ್ಕೋಜಿ ಅವರು ತೆಗೆದುಕೊಂಡಿರುವ ನಿರ್ಧಾರ ಮುಸ್ಲಿಂ ಧರ್ಮಕ್ಕೆ ವಿರೋಧಿ ಕೆಲಸವಾಗಿದೆ. ಬುರ್ಕಾ ಧರಿಸುವುದು ಇಸ್ಲಾಂ ಧರ್ಮದ ಸಂಸ್ಕೃತಿ. ಸರಕಾರದ ಅನಗತ್ಯವಾಗಿ ಮುಸ್ಲಿಂ ಧರ್ಮವನ್ನು ಹತ್ತಿಕ್ಕಿವ ಮತ್ತು ಅವಮಾನ ಮಾಡುವುದಕ್ಕೆ ಈ ಕ್ರಮಕೈಗೊಂಡಿದೆ. ಮುಸ್ಲಿಮರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಸೋಮವಾರ ಸರ್ಕೋಜಿ ಬುರ್ಕಾ ನಿಷೇಧದ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದೆ ತಡ. ಅನೇಕ ಜನರು ಎದ್ದು ಕುಂತರು. ಇಂಗ್ಲಿಷ್ ನ ಯಾವುದೇ ವೆಬ್ ಸೈಟ್ ಗಳನ್ನು ಓಪನ್ ಮಾಡಿದರೂ ಇದರದೇ ಗೋಳು. ಒಬ್ಬರು ಪರ ಬರೆದರೆ, ಅದನ್ನು ವಿರೋಧಿಸಿ ಇನ್ನೊಬ್ಬ. ಹೀಗೆ ಈ ಜಗಳ ನಡೆದಿದೆ, ನಡೆಯುತ್ತಲಿದೆ. ನಿಮಗೊಂದು ಅಚ್ಚರಿಯ ಸಂಗತಿ ಎಂದರೆ, ಬುರ್ಕಾ ಪರ ಬರೆದ ಅನೇಕರಲ್ಲಿ ಮುಸ್ಲಿಂ ಮಹಿಳೆಯರು ಎನ್ನುವುದು ವಿಶೇಷ. (ನಾನು ಓದಿಕೊಂಡಿರುವ ಪ್ರಮುಖ ದಿನಗಳ ಸೈಟ್ ಗಳಲ್ಲಿ ಮಾತ್ರ)

ಸರ್ಕೋಜಿ ಅಧ್ಯಕ್ಷನಾದ ನಂತರ ಪ್ರಸಿದ್ಧ ಮಾಡೆಲ್ ಕಾರ್ಲ ಬ್ರೂನಿಯನ್ನು ವರೆಸಿದರು. ಅದಕ್ಕೂ ಮೊದಲು ಆಕೆ ತುಂಡುಡಿಗೆಯಲ್ಲಿ ರ್ಯಾಂಪ್ ಮೇಲೆ ಓಡಾಡುತ್ತಿದ್ದಳು. ಬ್ರೂನಿಯ ಅನೇಕ ಬತ್ತಲೆ, ಅರೇ ಬತ್ತಲೆ ಪೋಟೋಗಳು ಈಗಲೂ ಎಗ್ಗಿಲ್ಲದೇ ಸಿಗುತ್ತವೆ. ಇದನ್ನೇ ಆಧಾರವಾಗಿಟ್ಟುಕೊಟ್ಟು ಅನೇಕ ಮಹಿಳೆಯರು ಸರ್ಕೋಜಿ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಟಾಪ್ ಲೆಸ್ ಬ್ರೂನಿ ಹಾಗೆ ಜಗತ್ತಿನ ಎಲ್ಲ ಮಹಿಳೆಯಲ್ಲಿ ನೋಡುವ ಆಸೆ ಆತನಿಗೆ ಎಂದು ಹಿಗ್ಗಾಮುಗ್ಗಾ ತೊಳೆದು ಹಾಕಿದ್ದಾರೆ.

ಸರ್ಕೋಜಿ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆಯಲ್ಲ ಎಂದು ಅನಿಸುತ್ತದೆ. ತಕ್ಷಣ ತಪ್ಪು ತಪ್ಪು ಒಂದು ಧರ್ಮದ ಸಂಸ್ಕೃತಿ ಸಂಪ್ರದಾಯವನ್ನು ಸರಕಾರವೇ ಪ್ರಶ್ನಿಸುವುದು ಅಷ್ಟೊಂದು ಸಮಂಜಸ ಅನ್ನಿಸುತ್ತಿಲ್ಲ. ಬುರ್ಕಾಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಸುವುದನ್ನು ಬಿಟ್ಟು, ಫ್ರಾನ್ಸ್ ನಲ್ಲಿರುವ ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಬಹುದಿತ್ತು. ಅದರ ಸಾಧಕ ಭಾದಕಗಳನ್ನು ಪರಿಶೀಲನೆ ನಡೆಸಬೇಕಿತ್ತು. ಅಂತಿಮವಾಗಿ ಅಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಸರಕಾರಕ್ಕೆ ಬದ್ಧವಾಗಬೇಕಿತ್ತು. ಆದರೆ, ಫ್ರಾನ್ಸ್ ಅಧ್ಯಕ್ಷನೆಂದರೆ ಅಂದರೆ ಆತನೇನು ಸರ್ವಾಧಿಕಾರಿಯಂತೂ ಖಂಡಿತಾ ಅಲ್ಲ. ಸರಕಾರವೆಂದರೆ ಜನಪರ ಕೆಲಸ ಮಾಡಬೇಕೆ ವಿನಃ ಜನವಿರೋಧಿ ಕೆಲಸ ಮಾಡಬಾರದು. ಜನತೆಯಿಂದ ಆಯ್ಕೆಯಾಗಿರುವ ಸರಕಾರಕ್ಕೆ ನೂತನ ಮಸೂದೆ ರೂಪಿಸುವ ಎಲ್ಲ ಸ್ವಾತಂತ್ರವೂ ಇದೆ. ಆದಕ್ಕೆ ಮುಂಚೆ ತಟಗು ಚಿಂತಿಸಬೇಕಿತ್ತು. ಅಲ್ವೆ ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more