ವರ್ತೂರು ಪ್ರಕಾಶ್, ನಟಿ ಶ್ರುತಿ ಔಟ್
ಬೆಂಗಳೂರು,
ಜೂ. 16 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಹಲವು ಬಾರಿ ಬಹಿರಂಗ ಹೇಳಿಕೆ ನೀಡಿ ಮುಜುಗರ ಮಾಡಿದ್ದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ ಅವರನ್ನು ಕೊಳಚೆ ನಿರ್ಮೂಲನೆ ಮಂಡಳಿಯಿಂದ ಕೈಬಿಡಲಾಗಿದೆ. ಅಲ್ಲದೇ, ಇತ್ತೀಚೆಗೆ ಪತಿ ನಿರ್ದೇಶಕ ಮಹೇಂದರ್ ಅವರಿಗೆ ವಿಚ್ಛೇದನ ನೀಡಿ ಸುದ್ದಿ ಮಾಡಿದ್ದ ನಟಿ ಶ್ರುತಿ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸ್ಥಾನದಿಂದ ತೆಗೆದು ಹಾಕಲಾಗಿದೆ. id="toptextpromo">ಶ್ರುತಿ
ಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯದರ್ಶಿ ಡಾ ಡಿ ಎಸ್ ಅಶ್ವತ್ಥ್ ಅವರನ್ನು ನೇಮಿಸಲಾಗಿದೆ. ಇದು ಡಿ ಎಸ್ ಆಶ್ವತ್ಥ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೆ ಅವರಿಗೆ ಹೆಚ್ಚುವರಿಯಾಗಿ ಕೊಳಚೆ ನಿರ್ಮೂಲನಾ ಮಂಡಳಿ ಹೊಣೆಯನ್ನು ನೀಡಲಾಗಿದೆ. ಶ್ರುತಿ ವರ್ತನೆಯಿಂದ ಪಕ್ಷಕ್ಕೆ ತೀವ್ರವಾದ ಹಾನಿಯುಂಟಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications