ಪಿಬಿ ಶ್ರೀನಿವಾಸ್ ಗೆ ಬಿಡಿಎ ನಿವೇಶನ ನೀಡಿದ ಸಿಎಂ

ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಮುಖ್ಯಮಂತ್ರಿ ಯಡಿಯೂರಪ್ಪ, ಶ್ರೀನಿವಾಸ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಅನನ್ಯ ಸೇವೆ ಗುರುತಿಸಿ ಬಿಡಿಎ ನಿವೇಶನ ನೀಡಲಾಗಿದೆ. ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಗಾನ ಮಾಧುರ್ಯಕ್ಕೆ ಮಾರುಹೋಗದವರೆ ಇಲ್ಲ. ಇಂಥ ಶ್ರೇಷ್ಠ ಗಾಯಕನಿಗೆ ಸರಕಾರದ ವತಿಯಿಂದ ನಿವೇಶನ ನೀಡುವುದು ಸಂತಸ ಸಂಗತಿ ಎಂದರು.
ಕನ್ನಡವಾಗಲಿ ಪ್ರೀತಿಯ ಹಾಲು
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರಕಾರದ ವತಿಯಿಂದ ಬಿಡಿಎ ನಿವೇಶನದ ಹಕ್ಕಪತ್ರ ಸ್ವೀಕರಿಸಿದ ಪಿ ಬಿ ಶ್ರೀನಿವಾಸ ಅವರು, ಕನ್ನಡ, ಕನ್ನಡತನ, ಭಾಷೆ, ನೆಲ, ಜಲ, ಜನರ ಬಗ್ಗೆ ಸ್ವರಚಿತ ಕವನವನ್ನು ಮುಖ್ಯಮಂತ್ರಿಗಳ ಎದುರು ತಮ್ಮ ಚಿನ್ನದ ಕಂಠದ ಮೂಲಕ ಹಾಡಿದರು. ಸರಕಾರ ತಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಶ್ರೀನಿವಾಸ ಹರ್ಷ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications