ಶಂಕಿತ ಡೆಂಗೆ ಜ್ವರಕ್ಕೆ ಜೆಸಿನಗರದ ಬಾಲಕ ಬಲಿ
ಬೆಂಗಳೂರು, ಜೂ. 7: ಶಂಕಿತ ಡೆಂಗೆ ಜ್ವರಕ್ಕೆ ಜೆ.ಸಿ.ನಗರದ 10 ವರ್ಷದ ಬಾಲಕ ಪ್ರಜ್ವಲ್ ಶನಿವಾರ ಬಲಿಯಾಗಿದ್ದಾನೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಪ್ರಜ್ವಲ್ ನನ್ನು ಶುಕ್ರವಾರ ರಾತ್ರಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಮೃತ ನಾಗಿದ್ದಾನೆ. ಒಂದು ವಾರದಿಂದ ಜ್ವರದಿಂದ ನರಳುತ್ತಿದ್ದ. ಪ್ರಜ್ವಲ್‌ಗೆ ಈ ಮೊದಲು ಬೇರೆ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲಾಗಿತ್ತು.
ಎಲ್ಲಿಯೂ ಜ್ವರ ವಾಸಿಯಾಗದೇ ರಾಮಯ್ಯ ಆಸ್ಪತ್ರಗೆ ಕರೆತರಲಾಗಿತ್ತು. ಆದರೆ, ರೋಗ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಸಿಗುವ ಮೊದಲೇ ಆತ ಕೊನೆಯುಸಿರೆಳೆದಿದ್ದಾನೆ. ಸುಮಾ ಹಾಗೂ ಪ್ರಶಾಂತ್ ದಂಪತಿಯ ಪುತ್ರ ಪ್ರಜ್ವಲ್ 4 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಈ ಹಂತದಲ್ಲಿ ಡೆಂಗೆ ಜ್ವರದಿಂದಲೇ ಆತ ಮೃತನಾಗಿದ್ದಾನೆ ಎನ್ನಲು ಸಾಧ್ಯವಿಲ್ಲ. ಬೇರೆ ಆಸ್ಪತ್ರೆಯಿಂದ ಬಂದು ಕೆಲವೇ ಗಂಟೆಗಳಲ್ಲೇ ಈ ದುರಂತ ಸಂಭವಿಸಿದೆ.
ರಕ್ತದ ಮಾದರಿಯನ್ನು ಪಾಲಿಕೆ ಆರೋಗ್ಯ ಇಲಾಖೆಗೆ ತಲುಪಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ. ವೈರಲ್ ಜ್ವರವಿತ್ತು. ಯಾವ ವೈರಸ್ ಎಂಬುದು ಪರೀಕ್ಷೆಯಿಂದಲೇ ತಿಳಿಯಲಿದೆ. ಆರಂಭದಿಂದಲೇ ಆತನಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಲಿಲ್ಲ'ಎಂದು ರಾಮಯ್ಯ ಆಸ್ಪತ್ರೆ ನಿರ್ದೇಶಕ ಡಾ. ನರೇಶ್ ಶೆಟ್ಟಿ ತಿಳಿಸಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ಎಲ್. ಟಿ.ಗಾಯತ್ರಿ,ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ
ಇದರ ಖಚಿತವಾಗಿ ಹೇಳಬಹುದು.ನಗರದಲ್ಲಿ ಅಲ್ಲಲ್ಲಿ ಡೆಂಗೆ ಜ್ವರ ಹರಡಿದೆಯಾದರೂ, ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ, ಚೇತರಿಸಿಕೊಳ್ಳಲು ಸಾಧ್ಯ'ಎಂದು ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications