ಬೇಡಿಕೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿಗಳ ಧರಣಿ

ವೇತನ ಪರಿಷ್ಕರಣೆ, ಪಿಂಚಣಿ ಮತ್ತು ವಿವಿಧ ಬ್ಯಾಂಕುಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬೇಡಿಕೆಯೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಈ ಬೇಡಿಕೆಗಳ ಪೂರೈಸುವ ಒತ್ತಾಯಕ್ಕಾಗಿ ಜೂನ್ 11ರಂದು ಸಂಜೆ 5.30ಕ್ಕೆ ಶಿವಪ್ಪನಾಯಕ ಪ್ರತಿಮೆ ಮುಂಭಾಗದಲ್ಲಿ ಸಾಮೂಹಿಕ ಮೆರವಣಿಗೆ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಲಾಗುವುದು. ಜೂನ್ 12ರಂದು ಬೆಳಿಗ್ಗೆ 10.30ಕ್ಕೆ ಸರ್.ಎಂ.ವಿ. ರಸ್ತೆಯಲ್ಲಿರುವ ಎಸ್.ಬಿ.ಐ. ಮುಖ್ಯ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಯುನೈಟೆಡ್ ಫೋರಂ ಆಫ್ ಯೂನಿಯನ್ ತಿಳಿಸಿದೆ.
ಧರಣಿ ಸತ್ಯಾಗ್ರಹದಲ್ಲಿ ಯೂನಿಯನ್‌ನ ಸಂಚಾಲಕ ವಿನೋದ್‌ಪೈ, ಎಐಬಿಇಎ ಹಿರಣ್ಣಯ್ಯ, ಎಐಬಿಒಸಿ ಲೋಕೇಶ್ವರನ್, ಎನ್‌ಸಿಬಿಇ ಪ್ರಾಣೇಶ್, ಎಐಬಿಒಎನ ಗೋಕುಲ್ ರಾಜ್ ಎಒಬಿಡಬ್ಲ್ಯೂ ಭಾಸ್ಕರ್ ಶೆಟ್ಟಿ, ಎನ್‌ಒಬಿಒ ಹೆಚ್.ಈರಣ್ಣ ಮತ್ತಿತರರು ಪಾಲ್ಗೊಂಡಿದ್ದರು.











Click it and Unblock the Notifications