39681ಕೋಲಾರವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು /literature/sammelana/chitradurga/2009/0204-writer-l-basavaraju-kannada-sahitya-sammelana.htmlಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತಮಹೋತ್ಸವ ಚಿತ್ರದುರ್ಗದಲ್ಲಿ ಜರಗುತ್ತಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಸಂಶೋಧಕ, ವಿದ್ವಾಂಸ ಡಾ. ಎಲ್ ಬಸವರಾಜು ಅವರ ಕಿರು ಪರಿಚಯ.ಕರ್ನಾಟಕದಲ್ಲಿ ಸಂಸ್ಕೃತಿ, ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ. ಆರ್ ನರಸಿಂಹಾಚಾರ್ , ತಿತಾ ಶರ್ಮ, ತೀನಂಶ್ರೀ, ಡಿಎಲ್ ನರಸಿಂಹಾಚಾರ್ಯ, ಆ ನೇ ಉಪಾಧ್ಯೆ ,ಡಾ. ಆರ್ ಸಿ 34460http://kannada.oneindia.com/img/2009/02/04-l-basavaraju2.jpg39681ಕೋಲಾರಕೋಲಾರದಲ್ಲಿ ಗುಲಾಬಿ ಟಾಕೀಸ್ ಘಮಲು/movies/headlines/2009/04/0410-gulabi-talkies-movie-show-terehalli-kolar.htmlಕೋಲಾರ ತಾಲೂಕಿನ ತೇರಹಳ್ಳಿಯಲ್ಲಿ ಗುಲಾಬಿ ಟಾಕೀಸ್ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತೆಲುಗು ಭಾಷೆಯ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುವ ಕೋಲಾರದಲ್ಲಿ 'ಗುಲಾಬಿ ಟಾಕೀಸ್' ವಿಶೇಷ ಪ್ರದರ್ಶನ ಕಂಡಿದ್ದು ವಿಶೇಷವಾಗಿತ್ತು. ಶಿವಗಂಗೆಯ ಆದಾಮಿ ಕಲಾಕೇಂದ್ರ ಈ ವಿಶೇಷ ಪ್ರದರ್ಶನವನ್ನು ಏರ್ಪಸಿತ್ತು. ಈ ಸಂದರ್ಭದಲ್ಲಿ ಗುಲಾಬಿ ಟಾಕೀಸ್ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ಮಾಪಕ ಬಸಂತಕುಮಾರ್ ಪಾಟೀಲ್, 35865http://kannada.oneindia.com/img/2009/04/10-girish-kasaravalli-kolar1.jpg39681ಕೋಲಾರನಾನು ಪಿಎಂ ಹುದ್ದೆಯ ಅಭ್ಯರ್ಥಿಯಲ್ಲ, ಎಚ್ಡಿಕೆ/news/2009/04/13/jds-to-perform-better-in-the-coming-elections-hdk.htmlಕೋಲಾರ, ಏ. 13 : ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಿದೆ. ಚುನಾವಣೆಯ ನಂತರ ತೃತೀಯರಂಗ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಲಿದ್ದು, ಮುಂದಿನ ಪ್ರಧಾನಮಂತ್ರಿ ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಕೋಲಾರ ಜಿಲ್ಲೆಯ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ 35914http://kannada.oneindia.com/img/2009/04/13-hd-kumaraswamy2e.jpg39681ಕೋಲಾರಎರಡನೇ ಕಂತಿನ ಸಚಿವ ಸಂಪುಟದ ಮೇಲೆ ಖರ್ಗೆ ಕಣ್ಣು/news/2009/05/23/kharge-muniyappa-hopes-on-second-list.htmlಬೆಂಗಳೂರು, ಮೇ.23: ಯುಪಿಎ ಸರಕಾರದ ಸಚಿವ ಸಂಪುಟದ ಮೊದಲ ಕಂತಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ಎಂ ವೀರಪ್ಪ ಮೊಯಿಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ ಸಚಿವ ಸ್ಥಾನನದ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ಧರ್ಮಸಿಂಗ್ ಅವರಿಗೆ ನಿರಾಸೆಯಾಗಿದೆ. ಹಾಗಾಗಿ ಎರಡನೇ ಕಂತಿನ 36838http://kannada.oneindia.com/img/2009/05/23-kharge2.jpg39681ಕೋಲಾರಸರಕಾರದಿಂದ ಬಡಭಕ್ತರಿಗೆ ವಿಶೇಷ ರಿಯಾಯ್ತಿ /news/2009/05/27/govt-to-offer-subsidized-pilgrimage-tours.htmlಬೆಂಗಳೂರು, ಮೇ. 27 : ರಾಜ್ಯದ ಭಕ್ತರಿಗೆ ತಿಮ್ಮಪ್ಪನ ಲಾಡು, ಶಿವರಾತ್ರಿ ದಿನ ಗಂಗಾಜಲ ಹಂಚಿದ ನಂತರ ಮುಜರಾಯಿ ಸಚಿವ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಬಡಭಕ್ತರ (ಬಿಪಿಎಲ್) ಕಡೆಗೆ ಗಮನ ಹರಿಸಿದ್ದಾರೆ. ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಹೋಗಿ ಬರುವ ಬಡ ರೋಗಿಗಳಿಗೆ ಪ್ರಯಾಣ ಮತ್ತು ವಸತಿ ಸೌಕರ್ಯದಲ್ಲಿ ರಿಯಾಯಿತಿ ನೀಡಲು ಚಿಂತನೆ ನಡೆಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ 36916http://kannada.oneindia.com/img/2009/05/27-krishnaiah-shetty2e.jpgnews"> ರೆಡಿಮೇಡ್ ಗಾರ್ಮೆಂಟ್ಸ್ ಉದ್ಯಮಕ್ಕೆ ಭಾರಿ ಬೇಡಿಕೆ | R‍eady made Garments|Kolar| Suvarna Vastra Neeti | Handlooms and Textile Dept| ರೆಡಿಮೇಡ್ ಗಾರ್ಮೆಂಟ್ಸ್ ಉದ್ಯಮಕ್ಕೆ ಭಾರಿ ಬೇಡಿಕೆ - Kannada Oneindia

ರೆಡಿಮೇಡ್ ಗಾರ್ಮೆಂಟ್ಸ್ ಉದ್ಯಮಕ್ಕೆ ಭಾರಿ ಬೇಡಿಕೆ

ಕೋಲಾರ, ಜೂನ್ 3: ಸುವರ್ಣ ವಸ್ತ್ರ ನೀತಿಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಿದ್ಧ ಉಡುಪು ತಯಾರಿಕೆ ತರಬೇತಿ ಪಡೆದುಕೊಳ್ಳಲು ಉತ್ತಮ ಅವಕಾಶಗಳು ಲಭ್ಯವಾಗಿದ್ದು, ಇದರ ಪ್ರಯೋಜನೆ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀನಿವಾಸನ್ ಕರೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಸುವರ್ಣ ವಸ್ತ್ರ ನೀತಿಯಡಿ ತರಬೇತಿ ಪಡೆದ 70 ಅಭ್ಯರ್ಥಿಗಳಿಗೆ ನಗರದ ಅಪಾರೆಲ್ ತರಬೇತಿ ಮತ್ತು ವಿನ್ಯಾಸ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ತಲಾ 2 ಸಾವಿರ ರೂ.ಗಳ ಶಿಷ್ಯವೇತನದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರದ ಸುವರ್ಣ ವಸ್ತ್ರ ನೀತಿಯಡಿ ಬಂಡವಾಳ ಹೂಡಿಕೆಗೆ ರಾಜ್ಯಕ್ಕೆ 10 ಸಾವಿರ ಕೋಟಿ ರೂ.ಗಳು ಮಂಜೂರಾಗಿದ್ದು, ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ಶೇ.40 ರಷ್ಟು ಮೀಸಲಾತಿಯಿದ್ದು, ಗ್ರಾಮಾಂತರ ಪ್ರದೇಶದವರು ಸ್ಥಳೀಯವಾಗಿ ತರಬೇತಿ ಪಡೆದುಕೊಂಡು, ಸರ್ಕಾರದ ಸಹಾಯಧನ ಪಡೆದು ತಮ್ಮ ಗ್ರಾಮಗಳಲ್ಲಿಯೇ ತರಬೇತಿ ನೀಡುವ ಘಟಕಗಳನ್ನು ಪ್ರಾರಂಭಿಸಿ ನಿರುದ್ಯೋಗ ನಿವಾರಣೆ ಮಾಡಬಹುದಾಗಿದೆ ಎಂದು ಶ್ರೀನಿವಾಸನ್ ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ದಿನೇಶ್‌ಕೃಷ್ಣ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿ ಸುವರ್ಣ ವಸ್ತ್ರ ನೀತಿಯನ್ನು 2008 ರಲ್ಲಿ ಘೋಷಿಸಿದ್ದು, ಕೋಲಾರ ಜಿಲ್ಲೆಯಲ್ಲಿ 2008-09 ನೇ ಸಾಲಿಗೆ 268ಜನರಿಗೆ ತರಬೇತಿ ನೀಡಲು 28 ಲಕ್ಷ ರೂ.ಗಳು ಮಂಜೂರಾಗಿದೆ ಎಂದರು. ಕಳೆದ ಸಾಲಿಗೆ ಒಟ್ಟು 188 ಅಭ್ಯರ್ಥಿಗಳಿಗೆ ಎ.ಟಿ.ಡಿ.ಸಿ ಮೂಲಕ ತರಬೇತಿ ನೀಡಲಾಗುತ್ತಿದ್ದು, 70 ಜನರ ತರಬೇತಿ ಮುಗಿದಿದೆ.

118 ಮಂದಿಯ ತರಬೇತಿ ನಡೆಯುತ್ತಿದೆ ಎಂದರಲ್ಲದೆ, ಪ್ರಸಕ್ತ ಸಾಲಿಗೆ 500 ಜನರಿಗೆ ತರಬೇತಿ ನೀಡುವ ಗುರಿಯಿದೆ ಎಂದು ವಿವರಿಸಿದರು. ಕೆ.ಜಿ.ಎಫ್‌ನಲ್ಲಿ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಪ್ರಾರಂಭಿಸಲು ಇಂಡಿಯನ್ ಇಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ 30 ಲಕ್ಷ ರೂ.ಗಳ ಹಂಚಿಕೆ ಮಾಡಲಾvದೆಯಲ್ಲದೆ ಮುಳಬಾಗಲಿನ ವೈಷ್ಣವಿ ಗಾರ್ಮೆಂಟ್ಸ್‌ನಲ್ಲಿಯೂ ಸಹ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಯೋಜನೆಯಡಿಯಲ್ಲಿ ಜವಳಿ ಕ್ಷೇತ್ರದ ಏಳಿಗೆಗೆ ಒತ್ತು ನೀಡಿದ್ದು, ಅದರಲ್ಲಿಯೂ ಸಿದ್ಧ ಉಡುಪು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜವಳಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಗೆ ತರಬೇತಿಗಳನ್ನು ನೀಡಲಾಗುತ್ತಿದೆ ಎಂದ ಅವರು, ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಜವಳಿ ಉದ್ದಿಮೆಯನ್ನು ಇತರೆ ಭಾಗಗಳಿಗೆ ಹರಡಲು ಅನುಕೂಲಗಳನ್ನು ಕಲ್ಪಿಸಲಾಗಿದೆ.

ತಾಂತ್ರಿಕ ಉನ್ನತೀಕರಣ ಮತ್ತು ಸಾಮರ್ಥ್ಯ ವರ್ಧನೆಗೆ ಯೋಜನೆಯಡಿ ಅವಕಾಶಗಳಿವೆ ಎಂದರು. ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಸಹ ಆದ್ಯತೆ ನೀಡಲಾಗಿದೆ ಎಂದರಲ್ಲದೆ, ಸಿದ್ಧ ಉಡುಪು, ಕೈಮಗ್ಗ, ವಿದ್ಯುತ್ ಮಗ್ಗ, ಸ್ಪಿನ್ನಿಂಗ್, ನಿಟ್ಟಿಂಗ್, ತಾಂತ್ರಿಕ ಜವಳಿ ಹಾಗೂ ಜವಳಿ ಯಂತ್ರೋಪಕರಣ ತಯಾರಿಕೆಗಳನ್ನು ಅಭಿವೃದ್ಧಿ ಪಡೆಸುವ ಗುರಿ ಇದೆ ಎಂದು ತಿಳಿಸಿದರು. ಯೋಜನೆಯಡಿ ಸಾಲ ಆಧಾರಿತ ಬಂಡವಾಳ ಹೂಡಿಕೆಗೆ ಗರಿಷ್ಠ 25 ಲಕ್ಷ ರೂ.ಗಳ ರಿಯಾಯಿತಿ, ಪ್ರವೇಶ ಶುಲ್ಕ ಹಾಗೂ ನೋಂದಣಿ ಶುಲ್ಕ ರಿಯಾಯಿತಿ, ಪರಿಶಿಷ್ಠ ಜಾತಿ, ವರ್ಗ, ಮಹಿಳೆ, ಅಲ್ಪಸಂಖ್ಯಾತರಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+