124645ಕನ್ನಡಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg124645ಕನ್ನಡಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ/literature/articles/2009/0108-writer-girish-karnad-bags-karunanidhi-award.htmlಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ 33955http://kannada.oneindia.com/img/2009/01/08-karnad2.jpg124645ಕನ್ನಡಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ/movies/hero/2009/01/30-mammootty-to-act-in-kannada-movie-shikari.htmlಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅಭಯಸಿಂಹ ನಿರ್ದೇಶನದ ಅವರೇ ಕಥೆ, ಚಿತ್ರಕಥೆ ಹಣೆದಿರುವ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಮ್ಮೂಟಿ ಎಂಟ್ರಿ ನೀಡಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಶಿಕಾರಿ ಹೊಂದಿದೆಯಂತೆ. ಕಮರ್ಷಿಯಲ್ ಚಿತ್ರದಲ್ಲಿ ಏನೇನು ಇರಬೇಕೋ ಅವೆಲ್ಲವೂ ಇವೆ ಎನ್ನುತ್ತಾರೆ ನಿರ್ಮಾಪಕ ಎನ್.ಆರ್.ಶೆಟ್ಟಿ. 34372http://kannada.oneindia.com/img/2009/01/30-mamootty1e.jpg124645ಕನ್ನಡರು.20 ಸಾವಿರಕ್ಕೆ ವಿಪ್ರೋ ಲ್ಯಾಪ್ ಟಾಪ್ ಲಭ್ಯ/news/2009/02/25/wipro-launches-affordable-laptops.htmlಬೆಂಗಳೂರು, ಫೆ. 24 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮ ಗಮನಾರ್ಹವಾಗಿ ಕುಸಿತ ಕಂಡಿರುವ ಸಂಕಷ್ಟದ ಸ್ಥಿತಿಯಲ್ಲಿ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ನಂಬಲಾಗದಂತಹ ದರದಲ್ಲಿ ಲ್ಯಾಪ್ ಟಾಪ್ ವೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ವಿಪ್ರೋ ಲ್ಯಾಪ್ ಟಾಪ್ ಬೆಲೆ ಕೇವಲ 20 ಸಾವಿರ ರುಪಾಯಿ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.ವಿಪ್ರೋ ಕಂಪನಿ ಬಿಡುಗಡೆ 34844http://kannada.oneindia.com/img/2009/02/25-gagets.jpg124645ಕನ್ನಡಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ/news/2009/03/06/karnataka-lok-sabha-election-schedule-ec.htmlಬೆಂಗಳೂರು, ಮಾ. 6 : ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಹಾಗೂ ಎರಡನೇ ಹಂತದಲ್ಲಿ ಏಪ್ರಿಲ್ 30 ರಂದು ಮತದಾನ ನಡೆಯಲಿದೆ. ಮೊದಲ ಹಂತಮೊದಲ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಿಜಾಪುರ (ಪರಿಶಿಷ್ಟ ಜಾತಿ), ಗುಲ್ಬರ್ಗಾ 35028http://kannada.oneindia.com/img/2009/03/06-vidyashankar1e.jpgnews"> ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿ | Rajiv Gandhi Mnanv Seva Award | Child Development | Child Protection | Welfare | ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿ - Kannada Oneindia

ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿ

ಬೆಂಗಳೂರು, ಮೇ.22: ಭಾರತ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಮಕ್ಕಳ ಅಭಿವೃದ್ಧಿ , ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ 10 ವರ್ಷಕ್ಕಿಂತ ಹೆಚ್ಚಿನ ಉತ್ತಮ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು ಪ್ರತಿ ವರ್ಷ 3 ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುತ್ತದೆ.

ಪ್ರತಿ ವರ್ಷ ರಾಜೀವ್ ಗಾಂಧಿಯವರ ಜನ್ಮ ದಿನವಾದ ಆಗಸ್ಟ್ 20 ರಂದು ಈ ಪ್ರಶಸ್ತಿಯನ್ನು ಆಯ್ಕೆಯಾದ ವ್ಯಕ್ತಿಗಳ ಹೆಸರನ್ನು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರತಿ ಪ್ರಶಸ್ತಿಯು ರು.1 ಲಕ್ಷಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.

ಇದಲದೆ ಭಾರತ ಸರ್ಕಾರವು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ, ಉತ್ತಮ ಸೇವೆಯನ್ನು ಸಲ್ಲಿಸಿರುವಂತಹ ಸಮಾಜ ಸೇವಕರ ಸೇವೆಯನ್ನು ಗುರುತಿಸಿ ವೈಯಕ್ತಿಕ ಪ್ರಶಸ್ತಿಗಳನ್ನು 3 ವ್ಯಕ್ತಿಗಳಿಗೆ ಹಾಗೂ 5 ಸ್ವಯಂಸೇವಾ ಸಂಸ್ಥೆಗಳಿಗೆ ಪ್ರಶಸ್ತಿ ನೀಡುತ್ತದೆ.

ವೈಯಕ್ತಿಕ ಪ್ರಶಸ್ತಿಯು ರು.1 ಲಕ್ಷ ನಗದು ಬಹುಮಾನ ಹಾಗೂ ಸಂಘ ಸಂಸ್ಥೆಗಳ ಪ್ರಶಸ್ತಿಯು ತಲಾ ರು.3 ಲಕ್ಷಗಳ ನಗದು ಬಹುಮಾನ ಹಾಗೂ ಪ್ರಶಸ್ತಿ, ಪತ್ರವನ್ನು ಒಳಗೊಂಡಿರುತ್ತದೆ. ಆಯ್ಕೆಯಾದ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳ ಹೆಸರನ್ನು ಘೋಷಿಸಿ ಮಕ್ಕಳ ದಿನಾಚರಣೆಯೆಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕರ್ನಾಟಕ ಸರ್ಕಾರವೂ ಸಹ ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಂತಹ 2 ವ್ಯಕ್ತಿಗಳಿಗೆ ತಲಾ ರೂ 25,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ 2 ಸ್ವಯಂ ಸಂಸ್ಥೆಗಳಿಗೆ ತಲಾ ರು.1 ಲಕ್ಷ ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆ ದಿನದಂದು ಪ್ರದಾನ ಮಾಡಿ ಗೌರವಿಸುತ್ತದೆ.

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಮೇಲೆ ತಿಳಿಸಿರುವ ಎಲ್ಲಾ ಪ್ರಶಸ್ತಿಗಳಿಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನು ಆಯ್ಕೆಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ರಾಷ್ಟ್ರ ಪ್ರಶಸ್ತಿಗಾಗಿ ಸಮಿತಿಯು ಆಯ್ಕೆ ಮಾಡಿದಂತಹ ಸಂಸ್ಥೆಗಳ ಹಾಗೂ ವ್ಯಕ್ತಿಗಳ ಪೈಕಿ ಇಬ್ಬರು ವ್ಯಕ್ತಿಗಳಿಗೆ ಹಾಗೂ ಎರಡು ಸಂಸ್ಥೆಗಳೀಗೆ ನವೆಂಬರ್ 14 ರಂದು ಏರ್ಪಡಿಸಲಾಗುವ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

2009ನೇ ವರ್ಷದ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯಾ ಜಿಲ್ಲಾ ಕಚೇರಿಗಳಿಂದ ಪಡೆದು ಆಂಗ್ಲ ಭಾಷೆಯಲ್ಲಿ ತ್ರಿಪ್ರತಿಯಲ್ಲಿ ಭರ್ತಿಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಗೆ ದಿನಾಂಕ 30.5.2009 ರ ಒಳಗೆ ಪ್ರಧಾನ ಕಚೇರಿಗೆ ತಲುಪುವಂತೆ ಕಳುಹಿಸಲು ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+