ಮಹಿಳೆಯರನ್ನು ಚುಡಾಯಿಸಿದರೆ ಹುಷಾರ್

ಹೈದರಾಬಾದ್, ಮೇ. 8 : ಮಹಿಳೆಯರನ್ನು ಚುಡಾಯಿಸಿ ಸಿಕ್ಕಬಿದ್ದ ಟೆಕಿಯೊಬ್ಬ ಮಾಡಿದ ತಪ್ಪಿಗಾಗಿ ಒಂದು ತಿಂಗಳು ಕಾಲ ಸರಕಾರಿ ಆಸ್ಪತ್ರೆಯಲ್ಲಿ ಕಸಗೂಡಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಡೆಲ್ ಕಂಪ್ಯೂಟರ್ಸ್ ನಲ್ಲಿ ಕೆಲಸ ಮಾಡುತ್ತಿರುವ 21 ವರ್ಷದ ದಿನೇಶ್ ಕುಮಾರ್ ಎನ್ನುವ ಟೆಕಿ ಇಬ್ಬರು ಮಹಿಳೆಯರನ್ನು ಚುಡಾಯಿಸಿದ್ದಕ್ಕಾಗಿ ಆಂಧ್ರ ಪ್ರದೇಶ ಹೈಕೋರ್ಟ್ ಅತನಿಗೆ ನೀಡಿರುವ ಶಿಕ್ಷೆ, ಒಂದು ತಿಂಗಳವರೆಗೆ ದಿನಕ್ಕೆ ಒಂದು ಘಂಟೆಗಳ ಕಾಲ ಹೈದರಾಬಾದಿನಲ್ಲಿರುವ ಸರಕಾರಿ ಆಸ್ಪತ್ರೆಯ ಕಸ ಗುಡಿಸುವ ಶಿಕ್ಷೆ ನೀಡಿದೆ !!

ಮಾರ್ಚ್ 21 ರಂದು ದಿನೇಶ್ ತನ್ನ ಸ್ನೇಹಿತನ ಜೊತೆ ಸೇರಿ ಇಬ್ಬರು ಮಹಿಳೆಯರನ್ನು ಚುಡಾಯಿಸಿ ಅವರ ಚೂಡಿದಾರದ ದುಪ್ಪಟ್ಟವನ್ನು ಎಳೆದಾಡಿದ. ಘಟನೆಯಿಂದ ತೀವ್ರ ನೊಂದ ಮಹಿಳೆಯರು ಸ್ಥಳೀಯರು ಸಹಾಯದಿಂದ ದಿನೇಶ್ ಮತ್ತು ಆತನ ಸ್ನೇಹಿತರಿಗೆ ಅಲ್ಲೇ ಸರಿಯಾದ ಗೂಸಾ ಕೊಟ್ಟರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಹಿಳೆಯ ಸಂಬಂಧಿಕರೊಬ್ಬರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದಿನೇಶ್ ನನ್ನು ಅವನ ಮನೆಯಿಂದ ಬಂಧಿಸಿ ಐಪಿಸಿ ಸೆಕ್ಷನ್ 354 ಮತ್ತು 506 ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡರು.

ನಿರೀಕ್ಷಣಾ ಜಾಮೀನಿಗಾಗಿ ದಿನೇಶ್ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಚಂದ್ರಕುಮಾರ್, ಒಂದು ತಿಂಗಳ ಕಾಲ ಹೈದರಾಬಾದ್ ನಲ್ಲಿರುವ ಮಹಾತ್ಮಾ ಗಾಂಧಿ ಸರಕಾರಿ ಆಸ್ಪತ್ರೆಯಲ್ಲಿ ಒಂದು ಗಂಟೆ ಕಸ ಗುಡಿಸಬೇಕೆಂದು ಅಪರೂಪದ ಆದೇಶ ನೀಡಿದರು. ಅಷ್ಟೇ ಅಲ್ಲದೆ ಇವನ ದೈನಂದಿನ ಹಾಜರಾತಿ ಬಗ್ಗೆ ಕೂಡ ದಾಖಲೆ ಬರೆದಿಟ್ಟುಕೊಳ್ಳಲು ಆಸ್ಪತ್ರೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಯಾವ ಸಮಯದಲ್ಲಿ ಬಂದು ಒಂದು ಗಂಟೆ ಕಸಗೂಡಿಸಬೇಕು ಎನ್ನುವುದು ಟೆಕಿಯ ವಿವೇಟನೆ ಬಿಟ್ಟಿದ್ದಾರೆ.

(ಏಜನ್ಸೀಸ್)

ರ‌್ಯಾಗಿಂಗ್ ತಡೆಯಲು ಸುಪ್ರಿಂಕೋರ್ಟ್ ಆದೇಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+