ಕೆಎಂಎಫ್ ಲೆಕ್ಕ ಪರಿಶೀಲನೆಗೆ ಕೋರ್ಟ್ ಅನುಮತಿ

High Court dismiss KMF s plea
ಬೆಂಗಳೂರು, ಮೇ. 7 : ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಎಚ್ ಡಿ ರೇವಣ್ಣ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಲೆಕ್ಕಪತ್ರ ಮರು ಪರಿಶೀಲನೆ ವಿವಾದಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿ ಲೆಕ್ಕಪತ್ರ ಮರುಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿದೆ. ಇದರಿಂದ ಕೆಎಂಎಫ್ ವಿವಾದ ಕುರಿತಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ರೇವಣ್ಣ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.

ಸರ್ಕಾರ ನೀಡಿರುವ ಲೆಕ್ಕಪತ್ರ ಮರುಪರಿಶೀಲನೆ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಕೆಎಂಎಫ್ ಅಧ್ಯಕ್ಷ ರೇವಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರಕಾರದ ಕ್ರಮ ಸರಿಯೆಂದು ಕೆಎಂಎಫ್ ಅರ್ಜಿಯನ್ನು ವಜಾಗೊಳಿಸಿತು.

ಕೆಎಂಎಫ್ ಏಕಾಏಕಿ ನಂದಿನಿ ಹಾಲಿನ ದರ ಏರಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ರೇವಣ್ಣ ನಡುವೆ ಜಟಾಪಟಿ ಆರಂಭವಾಗಿತ್ತು. ಹಾಲಿನ ದರ ಏರಿಸುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಒಂದು ಹಂತದಲ್ಲಿ ಕೆಎಂಎಫ್ ಸಂಸ್ಥೆಯನ್ನು ಸರಕಾರ ಸೂಪರ್ ಸೀಡ್ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಕೆಎಂಎಫ್ ಲೆಕ್ಕ ಪರಿಶೀಲನೆಯಲ್ಲಿ ರಾಜಕೀಯ?
ಪ್ರತಿಷ್ಠೆ ಪ್ರಶ್ನೆಯಾದ ಹಾಲಿನ ದರ ಏರಿಕೆ
ನಂದಿನಿ ಹಾಲಿನ ಜಗಳ ಕೋರ್ಟ್ ಹಾಲ್ ತನಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+