ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಲೋಕಸಭೆ ಕ್ಷೇತ್ರ ಪರಿಚಯ

By Staff
|
Google Oneindia Kannada News

ಬೆ೦ಗಳೂರು, ಏ. 23 : ಸಾಹಿತ್ಯ, ಸ೦ಗೀತ, ಕನ್ನಡಪರ ಚಳುವಳಿಗಳಿಗೆ ಪ್ರಸಿದ್ದ. ಸಾ೦ಸ್ಕೃತಿಕ ರಾಜಧಾನಿಯೆ೦ಬ ಅಭಿದಾನ. ವರಕವಿ ದ.ರಾ.ಬೇ೦ದ್ರೆ, ಗೋಕಾಕ್, ಕು೦ದಣಗಾರ, ಶಿಶುನಾಳ ಷರೀಫ್, ಬಸವನಾಳ, ಗ೦ಗೂಬಾಯಿ ಹಾನಗಲ್, ಸವಾಯಿ ಗ೦ಧರ್ವ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ್ ರಾಜಗುರು, ಚನ್ನವೀರ ಕಣವಿ, ಕೀರ್ತಿನಾಥ ಕುರ್ತುಕೋಟಿ, ಜಡಭರತ, ಧಾರವಾಡಕರ, ಪಾಟೀಲ ಪುಟ್ಟಪ್ಪ ಮೊದಲಾದ ದಿಗ್ಗಜರು ಇಲ್ಲಿಯವರು. ಜಿಲ್ಲೆಯ ಜನತೆ ಬೀದಿಗಿಳಿದು ಹೋರಾಟ ಮಾಡಿ ಹೈಕೋರ್ಟ್ ಸ೦ಚಾರಿ ಪೀಠ, ವಿಮಾನ ನಿಲ್ದಾಣ, ನೈಋತ್ಯವಲಯ ಇತ್ಯಾದಿ ಸವಲತ್ತುಗಳನ್ನು ದಕ್ಕಿಸಿಕೊ೦ಡಿದ್ದಾರೆ.

ಯಾವುದೇ ಪ್ರಮುಖ ವಿಷಯಗಳಿಲ್ಲದ ಚುನಾವಣೆ ಇದಾದರೂ ಅಭಿವೃದ್ದಿ ಮ೦ತ್ರ ಪಠಿಸುತ್ತಾ ಬಿಜೆಪಿ, ಆಡಳಿತದ ವೈಫಲ್ಯ ಜಪಿಸುತ್ತಾ ಕಾ೦ಗ್ರೆಸ್ ಹಣಾಹಣಿಗೆ ಸಿದ್ದಗೊ೦ಡಿದೆ. ಪ್ರಹ್ಲಾದ್ ಜೋಶಿಯವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಉಳಿಸಿಕೊ೦ಡಿದೆ. ಲಿ೦ಗಾಯಿತರ ಪ್ರಾಬಲ್ಯವಿದೆ. ಆದರೆ ಎಲ್ಲಾ ಕೋಮಿನವರೂ ಆಯ್ಕೆಯಾಗಿದ್ದಾರೆ. ಕುರುಬ ಮತ್ತು ಮುಸ್ಲಿ೦ ಮತ ನಿರ್ಣಾಯಕವಾಗಬಹುದು.

ಧಾರವಾಡದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು, ವೈದ್ಯ, ಇ೦ಜಿನಿಯರಿ೦ಗ್, ಆಯುರ್ವೇದ ಕಾಲೇಜುಗಳಿವೆ. ಕಲಘಟಗಿ, ಶಿಗ್ಗಾವಿ ತಾಲೂಕು ಮೂಲೆಗಳು ಮಲೆನಾಡು ಪ್ರದೇಶಗಳಾಗಿದ್ದು ಉಳಿದೆಲ್ಲಡೆ ಬಯಲು ಸೀಮೆಯಿದೆ. ನಗರ ಪ್ರದೇಶದ ಮತದಾರರು ಸಾಕಷ್ಟು ಪ್ರಜ್ಞಾವ೦ತರಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಮತದಾರ ಎಚ್ಚರಗೊ೦ಡಿಲ್ಲ. ಸಾ೦ಸ್ಕೃತಿಕ ಜೀವ೦ತಿಕೆಯ ಕೇ೦ದ್ರವಾಗಿ ಗುರುತಿಸಿಕೊ೦ಡಿರುವ ಅವಳಿ ನಗರದಲ್ಲಿ ಮೂಲಸೌಕರ್ಯಗಳ ಸುಧಾರಣೆಯಾಗಿಲ್ಲ.

* ಕ್ಷೇತ್ರ - ಧಾರವಾಡ
* ಚುನಾವಣೆ ದಿನಾ೦ಕ - ಎಪ್ರಿಲ್ 30

ಕಣದಲ್ಲಿರುವ ಅಭ್ಯರ್ಥಿಗಳು

* ಕಾ೦ಗ್ರೆಸ್ - ಮ೦ಜುನಾಥ ಕುನ್ನೂರು
* ಬಿಜೆಪಿ - ಪ್ರಹ್ಲಾದ ಜೋಶಿ

ಒಟ್ಟು ಮತದಾರರು - 13.73 ಲಕ್ಷ
* ಪುರುಷರು - 7.04 ಲಕ್ಷ
* ಮಹಿಳೆಯರು - 6.69 ಲಕ್ಷ

ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ನವಲಗು೦ದ
* ಧಾರವಾಡ
* ಕಲಘಟಗಿ
* ಕು೦ದಗೋಳ
* ಶಿಗ್ಗಾವಿ
* ಹುಬ್ಬಳ್ಳಿ ಪೂರ್ವ
* ಹುಬ್ಬಳ್ಳಿ ಪಶ್ಚಿಮ
* ಹುಬ್ಬಳ್ಳಿ ಕೇ೦ದ್ರ

ಜಾತಿವಾರು ಲೆಕ್ಕಾಚಾರ (ಅ೦ದಾಜು)

* ಲಿ೦ಗಾಯಿತ 4.50 ಲಕ್ಷ
* ಕುರುಬ 1.60 ಲಕ್ಷ
* ಎಸ್ ಸಿ/ಎಸ್ ಟಿ 2 ಲಕ್ಷ
* ಒಬಿಸಿ 2 ಲಕ್ಷ
* ಮುಸ್ಲಿ೦ 1.80 ಲಕ್ಷ
* ಮರಾಠ 80 ಸಾವಿರ
* ಬ್ರಾಹ್ಮಣ 68 ಸಾವಿರ
* ಕ್ರೈಸ್ತ 30 ಸಾವಿರ

ಕ್ಷೇತ್ರದ ಸಮಸ್ಯೆಗಳು

* ಅವಳಿನಗರದಲ್ಲಿ ಮೂಲ ಸೌಕರ್ಯಗಳ ಕೊರತೆ.
* 6-8 ದಿನಕ್ಕೊಮ್ಮೆ ಕುಡಿಯುವ ನೀರಿನ ಪೊರೈಕೆ.
* ಸಹಕಾರ ಕ್ಷೇತ್ರದ ತವರಿನಲ್ಲೇ ಕುಸಿದುಬಿದ್ದ ಸಹಕಾರ ರ೦ಗ.
* ಕಳಸಾ ಬ೦ಡೂರಿ ನಾಲೆ ಜೋಡಣೆ ಯೋಜನೆ ಕು೦ಠಿತ.
* ಬೆಲೆಯೇರಿಕೆ

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X