ರಾಜಕಾರಣಕ್ಕೆ ಅಂಟಿಕೊಂಡ ಜಾತ್ಯತೀತತೆಯ ಜಾಡ್ಯ

ಇದು 1950ರಲ್ಲಿ ಡಾ|| ಮುಖರ್ಜಿ ಮಾಡಿದ ಭಾಷಣದ ತುಣುಕು. ಅದಾಗ ಸರ್ಕಾರ ಹಿಂದೂ ಕೋಡ್ ವಿಧೇಯಕವನ್ನು ಮಂಡಿಸಿತ್ತು. ಅದರ ಸಾಧು ಅಸಾಧುಗಳನ್ನು ಚರ್ಚಿಸಲೆಂದೇ ಸದನ ಕರೆಯಲಾಗಿತ್ತು. ಈ ಕಾನೂನನ್ನು ವಿರೋಧಿಸುವವರ ಸಂಖ್ಯೆ ಬಹಳವೇ ಇತ್ತು. ಆದರೂ ನೆಹರು ಸಂಪುಟ ಹಿಂದೂ ಧರ್ಮವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ ಎಂಬ ಭ್ರಮೆಯಿಂದಲೇ ಇದನ್ನು ಸದನದ ಮುಂದೆ ಮಂಡಿಸಿತು. ಪರ ವಿರೋಧದ ಭಾಷಣಗಳು ದಾಖಲಾದವು. ಅಂದು ಮುಖರ್ಜಿಯವರು ಭಾಷಣ ಮಾಡುತ್ತಿದ್ದರೆ ಇಡೀ ಸದನದಲ್ಲಿ ಸೂಜಿ ಬಿದ್ದರೂ ಕೇಳುವಂತ ಮೌನ. ಮುಖರ್ಜಿಯವರ ಮಾತಿನಿಂದ ನೆಹರು ಮತ್ತು ಅವರ ಬಾಲಬಡುಕರಿಗೆ ಚೇಳು ಕುಟುಕಿದ ಅನುಭವ ಆಗಿದ್ದರೆ ಆಶ್ಚರ್ಯವಿಲ್ಲ.
ಈ ಅಲ್ಪಸಂಖ್ಯಾತರನ್ನು ಓಲೈಸುವ ಖಾಯಿಲೆ ಇದೆಯಲ್ಲ ಅದು ಅಂಟಿಕೊಂಡಿದ್ದೇ ನೆಹರು ಕಾಲದಲ್ಲಿ. ಪ್ರತಿ ಹಂತದಲ್ಲೂ ಅಂದಿನ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಮೆಚ್ಚಿಸುವಂತಹ ಕಾರ್ಯವನ್ನೇ ಮಾಡಿತು. ಓಲೈಸುವ ರಾಜಕಾರಣದಲ್ಲಿ ಎಷ್ಟು ಮಗ್ನವಾಯಿತೆಂದರೆ ದೇಶದ ಭದ್ರತೆ, ಸಾರ್ವಭೌಮತೆ ಸವಕಲಾದರೂ ಪರವಾಗಿಲ್ಲ ಮುಸ್ಲಿಂ ಮತ ಬ್ಯಾಂಕ್ ಮಾತ್ರ ಕಾಂಗ್ರೆಸ್‌ಗೆ ಎಂದೆಂದಿಗೂ ಭದ್ರ ಠೇವಣಿಯಾಗಿಯೇ ಇರಬೇಕು ಎಂದು ಆಶಿಸಿತು. ಅದರಂತೆಯೆ ಕಾರ್ಯಕ್ರಮ ರೂಪಿಸಿತು. ನೆಹರು ತಮ್ಮನ್ನು ತಾವು ಜಾತ್ಯತೀತವಾದಿ ಎಂದು ತೋರಿಸಿಕೊಳ್ಳುವ ಚಟಕ್ಕೆ ಬಿದ್ದರು. ಕಾಶ್ಮೀರದ ಸಮಸ್ಯೆ ನೆಹರು ಸರ್ಕಾರಕ್ಕೆ ಸಮಸ್ಯೆಯಾಗಿ ಕಾಣಿಸಲೇ ಇಲ್ಲ. ಕಾಶ್ಮೀರ ಹೋದರೇನಂತೆ ಭಾರತಕ್ಕೆ ತಾನೋಬ್ಬ ಪ್ರಶ್ನಾತೀತ ನಾಯಕನಾಗಿ ಉಳಿದರೆ ಸಾಕು ಎಂಬುದಷ್ಟೇ ನೆಹರೂರ ಮನದಲ್ಲಿದ್ದದ್ದು. ಕಾಶ್ಮೀರಿ ಪಂಡಿತರ ಹತ್ಯೆ, ಅತ್ಯಾಚಾರಗಳು ಗಂಭೀರದ ಸಮಸ್ಯೆಯೇ ಅಲ್ಲ ಎಂಬಂತೆ ನಡೆದುಕೊಂಡ ನಮ್ಮ ಮೊದಲ ಪ್ರಧಾನಿಗಳು, ಈ ವಿಷಯವಾಗಿ ಯಾರಾದರೂ ಪ್ರಸ್ತಾಪಿಸಿದರೆ ಎಲ್ಲೋ ಸಣ್ಣ ಪುಟ್ಟ ಘಟನೆಯಾಗಿರಬಹುದು ಎಂದು ವಿಷಯವನ್ನೇ ತೇಲಿಸಿ ಮಾತು ಮುಗಿಸಿಬಿಡುತ್ತಿದ್ದರು. ಅದರ ಪರಿಣಾಮವಾಗಿಯೇ ಇಂದು ಕೂಡ ಅದು ಸಮಸ್ಯೆಯಾಗಿಯೇ ಉಳಿದಿದೆ.
ಬಹುಶಃ ಯಾವುದೇ ದೇಶದ ಬಹುಸಂಖ್ಯಾತರ ವಿಷಯದಲ್ಲಿ ಅಲ್ಲಿಯ ಸರ್ಕಾರ ಈ ರೀತಿ ವರ್ತಿಸುವುದಿಲ್ಲ. ಆದರೆ ಅಂದಿನ ನೆಹರೂ ಸರ್ಕಾರದಿಂದ, ಇಂದಿನ ಮನಮೋಹನ್ ಸಿಂಗ್ ಸರ್ಕಾರದವರೆಗೆ ಎಲ್ಲ ಸರ್ಕಾರಗಳು ವರ್ತಿಸಿದ್ದೇ ಹೀಗೆ. ಯುಪಿಎ ಸರ್ಕಾರ ಅಧಿಕಾರ ಹಿಡಿದ ಮೇಲೆ ಹತ್ತಾರು ಭಯೋತ್ಪಾದಕರ ದುಶ್ಕೃತ್ಯಗಳಾಗಿವೆ. ಬಾಂಬ್ ಸ್ಪೋಟದಲ್ಲಿ ಸತ್ತ ಅಮಾಯಕರ ಸಂಖ್ಯೆ ಲೆಕ್ಕವೇ ಇಲ್ಲ. ಮುಂಬೈ ಮೇಲಾದ ದಾಳಿ ಇನ್ನೂ ಹಸಿಯಾಗಿಯೇ ಇದೆ. ಆದರೆ ಮೊನ್ನೆ ಗ್ರಹ ಮಂತ್ರಿ ಚಿದಂಬರಂ ಇಂತಹ ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟು ದೇಶಕ್ಕೆ ಯಾವುದೇ ಭದ್ರತಾ ಸಮಸ್ಯೆ ಇಲ್ಲ ಎಂದಾಗ ಅಂದು ನೆಹರೂ ಕಾಶ್ಮೀರದ ವಿಷಯದಲ್ಲಾಡಿದ ಮಾತು ಜ್ಞಾಪಕಕ್ಕೆ ಬಂತು. ನೆಹರು ವಂಶದ ಆಜ್ಞೆ ಪಾಲಿಸುವ, ನೆಹರು ಕುಟುಂಬದ ಸೊಸೆ ಎಂಬ ಒಂದೇ ಕಾರಣದಿಂದ ಸೋನಿಯಾಗೆ ಪಕ್ಷದ ಅಗ್ರಸ್ಥಾನ ನೀಡಿ ಸಾಷ್ಟಾಂಗ ಹಾಕುವ ಕಾಂಗ್ರೆಸ್ಸಿಗರಿಂದ ಇನ್ನೆಂತಹ ಜವಾಬ್ದಾರಿಯುತ ಉತ್ತರ ನಿರೀಕ್ಷಿಸಲು ಸಾಧ್ಯ ಅಲ್ಲವೇ?
ಬಿಡಿ, ನೆಹರೂ ಕಾಲದಲ್ಲಿಅಂಟಿಕೊಂಡ ಜಾತ್ಯತೀತತೆ ಎಂಬ ಕಾಯಿಲೆ ಇಂದು ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೂ ಹರಡಿದೆ. ರಾಜಕಾರಣದ ಸಾಂಕ್ರಾಮಿಕ ರೋಗವಾಗಿ ಕಾಡುತ್ತಿದೆ. ಇಂದು ಜಾತ್ಯಾತೀತತೆಯ ಮುಖವಾಡ ಹಾಕಿಕೊಳ್ಳದೆ ರಾಜಕಾರಣಿಯಾಗಲು ಸಾಧ್ಯವೇ ಇಲ್ಲ. ಒಂದಂತೂ ನಿಜ, ಎಲ್ಲಿಯವರೆಗೆ ಬಹುಸಂಖ್ಯಾತರು ಈ ಬಗ್ಗೆ ಎಚ್ಚೆತ್ತು ಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ರೋಗ ಇಡೀ ರಾಜಕೀಯ ವ್ಯವಸ್ಥೆಯನ್ನ ಬಾಧಿಸುತ್ತಲೇ ಇರುತ್ತದೆ. ಹಾಗದರೆ ಇದಕ್ಕೆ ಔಷದವಾದರೂ ಏನು? ಮುಳ್ಳನ್ನು ಮುಳ್ಳಿಂದಲೇ ತೆಗೆಯ ಬೇಕು ಎಂಬಂತೆ ಹಿಂದೂ ಮತ ಬ್ಯಾಂಕ್ ಮಾತ್ರ ಇದಕ್ಕೆ ರಾಮಬಾಣವಾಗಿ ವರ್ತಿಸಬಲ್ಲದು. ಬಹುಸಂಖ್ಯಾತರ ಮತಗಳು ಒಂದು ಸರ್ಕಾರವನ್ನು ಅಧಿಕಾರಕ್ಕೆ ತರಬಲ್ಲವು, ಮತ್ತು ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬಲ್ಲವು ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ, ನಮ್ಮ ರಾಜಕಾರಣಿಗಳು ಅಲ್ಪಸಂಖ್ಯಾತರ ಪಾದ ನೆಕ್ಕುವುದನ್ನು ಬಿಡುತ್ತಾರೆ.
ಭೂತಕನ್ನಡಿ ಹಿಡಿದು ನೋಡಿದರೂ ನಿಜವಾದ ಜಾತ್ಯತೀತ ಮನೋಭಾವ ಯಾವೊಬ್ಬ ರಾಜಕಾರಣಿಯಲ್ಲೂ ಇಲ್ಲ. ಎಲ್ಲ ಪಕ್ಷಗಳೂ ಜಾತಿ, ಮತದ ಆಧಾರದ ಮೇಲೇ ನಾಯಕರನ್ನು ಬೆಳೆಸುತ್ತವೆ, ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುತ್ತವೆ. ಪಕ್ಷ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷವಾಗಿರುತ್ತದೆ. ಒಳಗೊಳಗೆ ಜಾತಿಯ ಲೆಕ್ಕ ಸದಾ ಚಾಲ್ತಿಯಲ್ಲಿರುತ್ತದೆ. ಅಷ್ಟಕ್ಕೂ ಇಫ್ತಾರ್ ಕೂಟಗಳನ್ನು ಏರ್ಪಡಿಸಿ ಮುಸಲ್ಮಾನರ ಟೋಪಿ ಧರಿಸಿ ಪೋಸು ಕೊಡುವವರು, ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದವರು ಮುಸಲ್ಮಾನರಿಗೆ ಮಾಡಿರುವ ಉಪಕಾರವಾದರೂ ಏನು? ಎಲ್ಲ ವೇಷ ಭೂಷಣಗಳು ಕೇವಲ ಓಟಿಗಾಗಿ ಮಾತ್ರ.
ಇಂದು ನಮ್ಮನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಅಭದ್ರತೆ. ನಾಲ್ಕುದಿಕ್ಕುಗಳಿಂದಲೂ ಉಗ್ರರು ಭಾರತವನ್ನು ಪ್ರವೇಶಿಸುತ್ತಿದ್ದಾರೆ, ದುಶ್ಕೃತ್ಯ ಎಸಗುತ್ತಿದ್ದಾರೆ. ಓಲೈಕೆಯ ರಾಜಕಾರಣ ಬಿಟ್ಟು, ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವ, ಕಠಿಣ ಭಯೋತ್ಪಾದಕ ನಿಗ್ರಹ ಕಾಯಿದೆಯನ್ನು ಜಾರಿಗೆ ತರುವ ಸುಭದ್ರ ಸರ್ಕಾರ ನಮಗೆ ಬೇಕಿದೆ. ಅಂತಹದೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 15ನೇ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಯೋಚಿಸಿ ಮತ ಚಲಾಯಿಸಬೇಕಿದೆ.
ಪೂರಕ ಓದಿಗೆ
ನಮ್ಮ ಪಕ್ಷಗಳು ಸೆಕ್ಯುಲರೋ ಸಿಕ್ಯುಲರೋ?
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications