ಕಾಂಗ್ರೆಸ್ ಸಂಸದ ಜಿಂದಾಲ್ ಮೇಲೆ ಚಪ್ಪಲಿ ಎಸೆತ

ಕುರುಕ್ಷೇತ್ರ ಲೋಕಸಭೆಗೆ ಉದ್ಯಮಿ ನವೀನ್ ಜಿಂದಾಲ್ ಸ್ಪರ್ಧಿಸಿದ್ದಾರೆ. ಇಂದು ಚುನಾವಣಾ ರ‌್ಯಾಲಿಯಲ್ಲಿ ಅವರು ಭಾಗವಹಿಸಿದ್ದರು. ಕಿಕ್ಕಿರಿದು ತುಂಬಿದ್ದ ಸಭೆಯಿಂದ ರಾಮ್ ಕುಮಾರ್ ಎಂಬ ನಿವೃತ್ತ ಶಿಕ್ಷಕ ಅವರ ಕಡೆಗೆ ಬಲವಾಗಿ ಚಪ್ಪಲಿ ಎಸೆದ. ಆದರೆ ಅದು ಗುರಿತಪ್ಪಿತು. ಕಾಂಗ್ರೆಸ್ ಪಕ್ಷದ ನೀಚ ರಾಜಕೀಯದಿಂದ ಬೇಸತ್ತು ತಾವು ಚಪ್ಪಲಿ ಎಸೆದಿದ್ದಾಗಿ ರಾಮ್ ಕುಮಾರ್ ನಂತರ ತಿಳಿಸಿದ್ದಾರೆ.
ಚಪ್ಪಲಿ ಎಸೆದ ಮರುಕ್ಷಣವೇ ಪೊಲೀಸರು ರಾಮ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡು ರ‌್ಯಾಲಿಯಿಂದ ಆಚೆಗೆ ಕೊಂಡೊಯ್ದರು. ಮದ್ಯದ ಅಮಲಿನಲ್ಲಿ ಅವರು ಚಪ್ಪಲಿ ಎಸೆದಿರುವುದಾಗಿ ಜಿಂದಾಲ್ ತಿಳಿಸಿದರು. ಪಿ.ಚಿದಂಬರಂ ಮೇಲೆ ಶೂ ಎಸೆತದ ಪರಿಣಾಮ ಜಗದೀಶ್ ಟೈಟ್ಲರ್ ತಲೆದಂಡ ತೆರಬೇಕಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜೆನ್ಸೀಸ್)
ಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications