ಕಾಗೋಡು ತಿಮ್ಮಪ್ಪ ವಿರುದ್ಧ ಕೆಂಡ ಕಾರಿದ ಸಿಟಿ ರವಿ

ಭಾರತವು ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರ. ಈ ರಾಷ್ಟ್ರದಲ್ಲಿ ಹಿಂದುತ್ವ ಉಳಿಯಬೇಕು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ತಾಲಿಬಾನ್ ಮತ್ತು ಪಾಕಿಸ್ತಾನಿ ಭೂತ ಹಿಡಿದುಕೊಂಡಿದೆ. ಇಂತಹ ದೇಶದ್ರೋಹಿ ಧೋರಣೆಯುಳ್ಳವರನ್ನು ಮತದಾರ ತಿರಸ್ಕರಿಸಬೇಕು ಎಂದು ರವಿ ಮನವಿ ಮಾಡಿಕೊಂಡರು.
ವರುಣ್ ಗಾಂಧಿ ಹೇಳಿಕೆಯಿಂದ ಪ್ರೇರಿತರಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಹಿಂದೂತ್ವವಾದಿಗಳ ಕೈ ಕಡಿಯಬೇಕು ಎಂದು ಹೇಳಿದ್ದರು. ಕಾಗೋಡು ತಿಮ್ಮಪ್ಪ ಅವರ ಹೇಳಿಕೆಯನ್ನು ವಿರೋಧಿಸಿ ಹಿಂದೂತ್ವ ವಿರೋಧಿಸುವವರ ಕತ್ತು ಕತ್ತರಿಸಬೇಕು ಎಂದು ತಿರುಗೇಟು ನೀಡಿದ್ದರು. ರೇಣುಕಾಚಾರ್ಯ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ಇನ್ನೊಬ್ಬ ಮುಖಂಡ ಕರಿಯಣ್ಣ ಸಂಗಟಿ, ರಾಣುಕಾಚಾರ್ಯ ಅವರ ಕಾಲು ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications