ಏ.4ರಂದು ಬಾದಾಮಿ ಹೌಸ್ ನಲ್ಲಿ ತೇಜಸ್ವಿ ಸ್ಮರಣೆ

Posted By:
Subscribe to Oneindia Kannada
KP Poornachandra Tejaswi
ಬೆಂಗಳೂರು, ಏ. 2 : ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸಾಹಿತಿ, ಚಿಂತಕ ತೇಜಸ್ವಿ ಅವರ ನೆನಪಿಗಾಗಿ "ಮೂಡಿಗೆರೆಯ ಮಾಯಾವಿ" ಎಂಬ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಎದುರುಗಡೆ ಇರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಸಭಾಂಗಣದಲ್ಲಿ ಏಪ್ರಿಲ್ 4 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಖ್ಯಾತಿ ಸಾಹಿತಿ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರ ತೇಜಸ್ವಿ ಅವರೊಂದಿಗಿನ ಒಡನಾಟದ ಮೆಲುಕು ಹಾಕಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ವಹಿಸುವರು. ಕೃಪಾಕರ-ಸೇನಾನಿ ಅವರ ಡಾಕ್ಯುಮೆಂಟರಿ 'ಮಾಯಾಲೋಕ 'ಪ್ರದರ್ಶನಗೊಳ್ಳಲಿದೆ. ತೇಜಸ್ವಿ ಇಲ್ಲವಾಗಿ ಏಪ್ರಿಲ್ 5ಕ್ಕೆ ಎರಡು ವರ್ಷ ತುಂಬಲಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ