ಶ್ವೇತಭವನ ಒತ್ತೆಗೆ ತಾಲಿಬಾನ್ ಗಳ ತಾಲೀಮು

ಪಾಕಿಸ್ತಾನ ತಾಲಿಬಾನ್ ಪಡೆಯ ಮುಖ್ಯಸ್ಥ ಬೈತುಲ್ಲಾ ಮೆಹಸೂದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಲಾಹೋರ್ ನಲ್ಲಿ ನಡೆದ ದಾಳಿಯ ಹೊಣೆ ನಾವು ವಹಿಸಿಕೊಂಡಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ. ಶ್ವೇತಭವನದ ಮೇಲೆ ನಮ್ಮ ಪಡೆಗಳು ಸಧ್ಯದಲ್ಲೇ ದಾಳಿ ನಡೆಸಲಿವೆ. ಈ ಮೂಲಕ ವಿಶ್ವದ ಗಮನ ಸೆಳೆಯುತ್ತೇವೆ. ಇದು 'ಅಲ್ಲಾ' ಮೇಲೆ ಆಣೆ, ಈ ಕೆಲಸ ನಮ್ಮ ಪಡೆಗಳು ಖಂಡಿತಾ ನಡೆಸುತ್ತವೆ ಎಂದು ಎಚ್ಚರಿಸಿದ್ದಾನೆ.
ಕೆಲವು ದಿನಗಳ ಹಿಂದೆ ಅಮೇರಿಕದ ಅಧ್ಯಕ್ಷ ಒಬಾಮ, ಪಾಕ್ ಮತ್ತು ಆಫ್ಘಾನಿಸ್ತಾನದಲ್ಲಿರುವ ಉಗ್ರರ ಮೇಲೆ ದಾಳಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅಮೇರಿಕ ಬೈತುಲ್ಲಾ ಮೆಹಸೂದ್ ಪತ್ತೆ ಹಚ್ಚಿದವರಿಗೆ ಈಗಾಗಲೇ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಅಮೇರಿಕ ಮಿಲಿಟರಿ ಕಾರ್ಯಾಚರಣೆ ನಡೆಸಬಹುದಾದ ಸಾಧ್ಯತೆಗಳ ಬಗ್ಗೆ ಒಬಾಮ ಹೇಳಿಕೆ ನೀಡಿದ ಬೆನ್ನಲ್ಲೇ ತಾಲಿಬಾನ್ ಈ ಬೆದರಿಕೆ ಹಾಕಿದೆ.
(ದಟ್ಸ್ ಕನ್ನಡ ವಾರ್ತೆ)
ಲಾಹೋರ್ ಆಪರೇಷನ್ ಟೆರರ್ ಅಂತ್ಯ












Click it and Unblock the Notifications