ಬಿಜೆಪಿಯಲ್ಲಿ ಮುಂದುವರೆದ ಭಿನ್ನ ಅರುಣ ರಾಗ

ನವದೆಹಲಿ, ಮಾ. 17 : ರಾಷ್ಟ್ರೀಯ ಬಿಜೆಪಿ ಮೇಲೆ ಬಿದ್ದಿರುವ ಅಸಮಾಧಾನದ ಕಾರ್ಮೋಡ ತಿಳಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಈಶಾನ್ಯ ರಾಜ್ಯಗಳಿಗೆ ಸುಧಾಂಶು ಮಿತ್ತಲ್ ನೇಮಕದಿಂದ ಉಂಟಾಗಿರುವ ಅಸಮಾಧಾನ ಮುಂದುವರೆದಿದ್ದು, ಇಂದು ನವದೆಹಲಿಯಲ್ಲಿ ನಡೆಯುವ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆಗೆ ಅರುಣ್ ಜೈಟ್ಲಿ ಗೈರು ಹಾಜರಾಗುವುದು ನಿಚ್ಚಳವಾಗಿದೆ.

ಸೋಮವಾರ ಸಂಜೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಸಂಧಾನ ನಡೆಸಿ ಬಿಕ್ಕಟು ಶಮನಗೊಳಿಸಲು ಪ್ರಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸುಧಾಂಶು ಮಿತ್ತಲ್ ಅವರಿಗೆ ನೀಡಿರುವ ಪದವಿಯನ್ನು ಮರಳಿ ತೆಗೆದುಕೊಳ್ಳಬೇಕು ಎನ್ನುವ ಪಟ್ಟಿನಿಂದ ಜೈಟ್ಲಿ ಹೊರಬರುತ್ತಿಲ್ಲ. ಈ ಕಾರಣದಿಂದ ಇಂದು ನಡೆಯುವ ಚುನಾವಣಾ ಸಮಿತಿ ಸಭೆಯನ್ನು ಬಹಿಷ್ಕರಿಸುವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜನಾಥ್ ಸಿಂಗ್ ಅಪ್ತರು ಎನ್ನಲಾದ ಸುಧಾಂಶು ಮಿತ್ತಲ್ ಅವರನ್ನು ಈಶಾನ್ಯ ಭಾಗದ ರಾಜ್ಯಗಳ ಉಸ್ತುವಾರಿಯಾಗಿ ನೇಮಿಸಲಾಗಿದೆ. ಆದನ್ನು ವಿರೋಧಿಸಿ ಜೈಟ್ಲಿ ಪಕ್ಷದ ವರಿಷ್ಠರ ವಿರುದ್ದ ಮುನಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಜೈಟ್ಲಿ-ರಾಜನಾಥ್ ವಿರಸ ಅಂತ್ಯಕ್ಕೆ ಅರ್ಎಸ್ಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+