378220raggingಹಿಮಾಚಲ ಪ್ರದೇಶ ರ್ರ್ಯ್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ/news/2009/03/10/medical-student-demise-ragging-by-seniors-in-hp.htmlಕಾಂಗ್ರಾ (ಹಿಮಾಚಲ ಪ್ರದೇಶ), ಮಾ. 10 : ರ್ರ್ಯ್ಯಾಗಿಂಗ್ ಗೆ ಸಂಬಂಧಿಸಿದಂತೆ ಕಾಲೇಜ್ ಅದರಲ್ಲಿ ವೃತ್ತಪರ ಕಾಲೇಜುಗಳಲ್ಲಿ ಈ ಪಿಡುಗು ಅವ್ಯಾಹತವಾಗಿ ಮುಂದುವರಿದಿದೆ. ರ್ರ್ಯ್ಯಾಗಿಂಗ್ ಹಿನ್ನೆಲೆಯಲ್ಲಿ ಹಿರಿಯ ವಿಧ್ಯಾರ್ಥಿಗಳಿಂದ ತೀವ್ರ ಹೊಡೆತ ತಿಂದಿದ್ದ ಕಿರಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದಿದೆ. ದೆಹಲಿ ಮೂಲದ ಅಮನ್ ಖಚ್ರೋ ಮೃತಪಟ್ಟಿರುವ 35114http://kannada.oneindia.com/img/2009/03/10-aman-kachroo1.jpg378220raggingರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg378220raggingರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg378220raggingರ‌್ಯಾಗಿಂಗ್, ಎಂಸಿಎ ವಿದ್ಯಾರ್ಥಿ ಆತ್ಮಹತ್ಯೆ/news/2009/06/09/ragging-mca-student-commits-suicide-in-warangal.htmlವಾರಂಗಲ್, ಜೂ. 9 : ಹಿರಿಯ ವಿದ್ಯಾರ್ಥಿಗಳು ನಡೆಸುತ್ತಿದ್ದ ರ‌್ಯಾಗಿಂಗ್ ಗೆ ಬೇಸತ್ತ ಎರಡನೇ ವರ್ಷದ ಎಂಸಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ವಾರಂಗಲ್ ಜಿಲ್ಲಾ ಧರ್ಮಾರಾಂನ ಗೀಸೂಕಕೊಂಡ ರೈಲು ಹಳಿಯ ಮೇಲೆ ವಿದ್ಯಾರ್ಥಿಯ ಶವ ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿ ದೇವೇಂದರ್ ಕುಮಾರ್ ಮೃತಪಟ್ಟ ದುರ್ದೈವಿ. ಕರೀನಗರ ಜಿಲ್ಲೆಯ ಚೊಪ್ಪದಂಡಿ 37216http://kannada.oneindia.com/img/2009/06/09-warangal-ap.jpg378220raggingರ‌್ಯಾಗಿಂಗ್ ತಡೆಗೆ ಹೆಲ್ಪ್ ಲೈನ್ 1800 180 5522/news/2009/06/21/upa-launches-anti-ragging-helpline.htmlನವದೆಹಲಿ, ಜೂ.21:ಶಾಲಾ, ಕಾಲೇಜುಗಳಲ್ಲಿ ರ‌್ಯಾಗಿಂಗ್ ನಂತ ಅಮಾನವೀಯ ಕೃತ್ಯ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉಚಿತ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ. ರಾಘವನ್ ಸಮಿತಿ ವರದಿ ಮೇರೆಗೆ ಸುಪ್ರೀಂ ಕೋರ್ಟ್ ಹೆಲ್ಪ್ ಲೈನ್ ಆರಂಭಿಸುವಂತೆ ನಿರ್ದೇಶನ ನೀಡಿತ್ತು. ದೆಹಲಿಯಲ್ಲಿ ಕೇಂದ್ರೀಕೃತವಾದ ಈ ಕಾಲ್ ಸೆಂಟರ್ ಗೆ ರ‌್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಕರೆ ನೀಡಿದ 37481http://kannada.oneindia.com/img/2009/06/21-kapil-sibal1e.jpg379644studentsರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg379644studentsಕಾಗೇರಿಯವರೇ ಏನ್ರೀ ಇದು ಅನ್ಯಾಯ/news/2009/06/04/guilty-sslc-valuators-will-face-the-music-kageri.htmlಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ 37101http://kannada.oneindia.com/img/2009/06/04-vishveswara-hegde-kageri1.jpg379644studentsಬಡವರ ಕೈಹಿಡಿದ ಮಾಸ್ಟರ್ ಬ್ಲಾಸ್ಟರ್ /news/2009/06/04/tendulkar-to-sponsor-education-of-200-children.htmlಮುಂಬೈ, ಜೂ. 4 : ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ 200 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ಭರಿಸಲು ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ನಿರ್ಧರಿಸಿದ್ದಾರೆ. ಈಗಾಗಲೇ 'ಅಪ್ನಾಲಯ' ಎನ್ನುವ ಸರಕಾರೇತರ ಸಂಸ್ಥೆಯಲ್ಲಿ (ಎನ್ ಜಿಓ) 200 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚು ಭರಿಸುವ ಜೊತೆಗೆ ಒಟ್ಟು 400 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮಟ್ಟಿಗೆ ಸಚಿನ್ ಆಶಾಕಿರಣವಾಗಿ 37111http://kannada.oneindia.com/img/2009/06/04-sachin-mumbai-indians1.jpg379644studentsಆಸ್ಟ್ರೇಲಿಯಾ ನಂತರ ಕೆನಡಾದಲ್ಲಿ ಜನಾಂಗೀಯ ಹಲ್ಲೆ/news/2009/06/10/six-indians-suffer-racial-assault-in-canada.htmlವ್ಯಾಂಕೋವರ್, ಜೂ. 10 : ಭಾರತೀಯ ವಿದ್ಯಾರ್ಥಿಗಳ ಮೇಲೆ ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಕೆನಡಾದಲ್ಲಿ ಭಾರತೀಯರ ಮೇಲೆ ಕೆನಡಾ ಪ್ರಜೆಗಳು ಜನಾಂಗೀಯ ನಿಂದನೆ ಹಾಗೂ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ. ಟೆನ್ನಿಸ್ ಆಡುತ್ತಿದ್ದ ಐವರು ಭಾರತೀಯರ ಮೇಲೆ ಕೆನಡಾದ ಪ್ರಜೆಗಳು ಜನಾಂಗೀಯ ನಿಂದನೆ ನಡೆಸಿದ್ದಲ್ಲದೇ, ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ನಾಲ್ಕು ಜನರಿದ್ದ 37255http://kannada.oneindia.com/img/2009/06/10-canada-map-flag2.jpg379644studentsರ‌್ಯಾಗಿಂಗ್ ತಡೆಗೆ ಹೆಲ್ಪ್ ಲೈನ್ 1800 180 5522/news/2009/06/21/upa-launches-anti-ragging-helpline.htmlನವದೆಹಲಿ, ಜೂ.21:ಶಾಲಾ, ಕಾಲೇಜುಗಳಲ್ಲಿ ರ‌್ಯಾಗಿಂಗ್ ನಂತ ಅಮಾನವೀಯ ಕೃತ್ಯ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉಚಿತ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ. ರಾಘವನ್ ಸಮಿತಿ ವರದಿ ಮೇರೆಗೆ ಸುಪ್ರೀಂ ಕೋರ್ಟ್ ಹೆಲ್ಪ್ ಲೈನ್ ಆರಂಭಿಸುವಂತೆ ನಿರ್ದೇಶನ ನೀಡಿತ್ತು. ದೆಹಲಿಯಲ್ಲಿ ಕೇಂದ್ರೀಕೃತವಾದ ಈ ಕಾಲ್ ಸೆಂಟರ್ ಗೆ ರ‌್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಕರೆ ನೀಡಿದ 37481http://kannada.oneindia.com/img/2009/06/21-kapil-sibal1e.jpg99736karnatakaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg99736karnatakaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg99736karnatakaಗೋಕಾಕ್‌ ಕನ್ನಡದ ಪೀಕಾಕ್‌/literature/jnanapeetha/2001/gokak.htmlಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು. *ಸತ್ಯವ್ರತ ಹೊಸಬೆಟ್ಟುವಿನಾಯಕ ಕೃಷ್ಣ ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕರು ಹುಬ್ಬೇರಿಸಿದ್ದುಂಟು. ವೈಎನ್ಕೆಯವರಂತೂ ಜ್ಞಾನವಿರುವುದು ಪೀಠದಲ್ಲಲ್ಲ , but at the other end ಎಂದು ಗೇಲಿ ಮಾಡಿದ್ದೂ ಉಂಟು. ಇದು ತನ್ನನ್ನು ಕುರಿತಾದ ತಮಾಷೆ 7766http://kannada.oneindia.com/img/2009/08/03-vk-gokak4.jpg99736karnatakaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg99736karnatakaಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpgnews"> ರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? | Ragging | Students Ragging | Mrutyunjaya Kalmat | professonal colleges | Karnataka | ರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು ? - Kannada Oneindia

ರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು?

Ragging victim
*ಮೃತ್ಯುಂಜಯ ಕಲ್ಮಠ

ರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ ಇದ್ದಾರೆ. ಇತ್ತೀಚೆಗೆ ಇದರ ಭೀಕರತೆಗೆ ಅಮಾಯಕ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಕರುಳ ಹಿಂಡುವ ಸುದ್ದಿಯೊಂದು ಇತ್ತೀಚೆಗೆ ಹಿಮಾಚಲ ಪ್ರದೇಶದ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದಿದೆ. ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅಮನ್ ಖಚ್ರೋ ಎಂಬಾತನನ್ನು ಹಿರಿಯ ವಿದ್ಯಾರ್ಥಿಗಳು ತೀವ್ರವಾಗಿ ಥಳಿಸಿದ್ದರಿಂದ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಇದು ಲೋಕಸಭೆ ಚುನಾವಣೆ ಮಾದರಿಯಲ್ಲೇ ದೇಶದಾದ್ಯಂತ ಅತ್ಯಂತ ಚರ್ಚಿತವಾಗುತ್ತಿರುವ ವಿಷಯವಾಗಿದೆ.

ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತು ನೂರೆಂಟು ಜಂಜಡಗಳನ್ನು ಬದಿಗೊತ್ತಿ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅಭ್ಯಾಸ ಮಾಡಿ ವೃತ್ತಿಪರ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವುದು ಒಂದು ಸಾಧನೆಯೇ ಸರಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ಸಾಧನೆಯನ್ನು ಅಷ್ಟು ಸರಳ ಸಾಧ್ಯವಲ್ಲ. ಆದರೆ, ಆಸೆ-ಕನಸು ಹೊತ್ತು ಕಾಲೇಜು ಮೆಟ್ಟಿಲು ತುಳಿದರೆ, ಅಲ್ಲಿ ದೆವ್ವದಂತೆ ತಲಬಾಗಿಲನಲ್ಲಿ ನಿಂತಿರುತ್ತಾರೆ ಹಿರಿಯ ವಿದ್ಯಾರ್ಥಿಗಳು. ಅವರು ಹೇಳಿದ ಹಾಗೆ ನಡೆದುಕೊಂಡರೆ ಸರಿ. ಇಲ್ಲದಿದ್ದರೆ, ಕಿರಿಯ ವಿದ್ಯಾರ್ಥಿಯ ಓದು ಅಲ್ಲಿಗೆ ಮುಗಿಯಿತು ಅನ್ನಬೇಕು. ಇಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ರ‌್ಯಾಗಿಂಗ್ ತೀವ್ರತೆಗೆ ಅನೇಕ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥರಾಗಿರುವುದು ಇದೆ.

ಶೋಕಿಗಾಗಿ ನಡೆಯುತ್ತಿದ್ದ ರ್ಯಾಗಿಂಗ್ ಪೀಡೆ, ಇತ್ತಿತ್ತಲಾಗಿ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಅತಿಯಾಯಿತು. ಇದರ ನೋವು ತಾಳಲಾರದ ಕಿರಿಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿವೆ. ಓದನ್ನೇ ಕೈಬಿಟ್ಟ ನೂರೆಂಟು ಪ್ರಕರಣಗಳು ಇವೆ. ಇಷ್ಟಾದರೂ ಕೂಡ ಅವ್ಯಾಹತವಾಗಿ ಮುಂದುವರೆಯತೊಡಗಿವೆ. ಭಾರತದಾದ್ಯಂತ ಇರುವ ವೃತ್ತಿಪರ ಕಾಲೇಜ್ ಗಳಲ್ಲಿ ಇದು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ದೃಢಪಡಿಸುತ್ತವೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇತ್ತೀಚೆಗೆ ಬಿಜಾಪುರದ ಬಿಎಲ್ ಡಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯನ್ನು ಹಿರಿಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನಡೆಸಿ ಮೂರು ದಿನ ಅನ್ನ, ನೀರು ನೀಡದೆ ಕೂಡಿಹಾಕಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, ಹಾಸನದ ನರ್ಸಿಂಗ್ ಕಾಲೇಜಿನಲ್ಲಿ ರ‌್ಯಾಗಿಂಗ್ ಹಾವಳಿ ಹೊರಬಂದಿತ್ತು. ದಕ್ಷಿಣ ಭಾರತದಲ್ಲಿ ಅಂಧ್ರಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ರ‌್ಯಾಗಿಂಗ್ ಮಾಡುತ್ತಾರೆ ಎನ್ನುವುದು ಅಂಕಿ ಅಂಶಗಳು ಹೇಳುತ್ತವೆ. ರ‌್ಯಾಗಿಂಗ್ ಗೆ ಕಾಲೇಜ್ ಗಳ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಕಡಿವಾಣ ಹಾಕುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಆದರೆ, ಅದರಿಂದ ಏನು ಪ್ರಯೋಜನವಾಗಿಲ್ಲ ಎನ್ನುವುದು ಸುದ್ದಿ ಬಿಡಿ.

ರ‌್ಯಾಗಿಂಗ್ ಗೆ ಸಂಬಂಧಿಸಿದಂತೆ ದಕ್ಷಿಣ ಭಾರತ ಮತ್ತು ಉತ್ತರ ಭಾರತಕ್ಕೆ ಹೋಲಿಸಿದರೆ, ಇದು ಉತ್ತರ ಭಾರತದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಭಾರತದಲ್ಲಿ ಇದು ಕಡಿಮೆ ಇದೆ ಎಂದರೂ ಕೂಡ ಕರ್ನಾಟಕ, ಅಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿರುವ ವೃತ್ತಿಪರ ಕಾಲೇಜುಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ತುಂಬಿಕೊಂಡಿದ್ದರಿಂದ ದಕ್ಷಿಣ ಭಾರತದಲ್ಲೂ ಇದರ ವಾತಾವರಣ ಇದೆ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.

ರ‌್ಯಾಗಿಂಗ್ ಗೆ ಪರಿಹಾರ?
ರ‌್ಯಾಗಿಂಗ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಣಿಮಿಸಿವೆ. ಆದರೆ, ಪರಿಣಾಮಕಾರಿಯಾಗಿ ಜಾರಿ ತರಲು ವಿಫಲವಾಗಿವೆ ಎನ್ನಬಹುದು. ಇದರ ಪೈಶಾಚಿಕತೆಗೆ ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ತಪ್ಪಿಸಲು ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ನಾವು ಹಿರಿಯ ವಿದ್ಯಾರ್ಥಿಗಳು ಕಿರಿಯ ನಮಗೆ ಸಲಾಮ್ ಹೊಡೆಯಬೇಕು ಎಂಬ ಮನಸ್ಥಿತಿ ಹೊಂದಿರುವ ವಿದ್ಯಾರ್ಥಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆರೋಪಿಯನ್ನು ಗಲ್ಲಿಗೇರಿಸುವುದು, ಜೀವಾವಧಿ ಶಿಕ್ಷೆ ನೀಡುವುದು ಅಷ್ಟು ಸಮಂಜಸ ಅಲ್ಲ ಎಂದು ಖಂಡಿತವಾಗಿ ಹೇಳಬಹುದು.

ಹಾಗಾದರೆ ಏನು ಮಾಡಬೇಕು. ರ‌್ಯಾಗಿಂಗ್ ನಡೆಸಿ ಬಂಧಿತರಾಗಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಮೂರರಿಂದ ಐದು ವರ್ಷಗಳ ಶಿಕ್ಷೆ. ಇದು ಮೊದಲ ಪ್ರಥಮ ಹಂತದ ಶಿಕ್ಷೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಇಲ್ಲವೆ ಖಾಸಗಿ ಸಂಸ್ಥೆಗಳ ಮೂಲಕ ಆರೋಪಿಗೆ ಕೌನ್ಸಲಿಂಗ್ ನೀಡಬೇಕು. ಇಷ್ಟಾಗಿಯೂ ಅದೇ ವಿದ್ಯಾರ್ಥಿ ಮತ್ತೆ ಇದೇ ಆರೋಪದ ಮೇಲೆ ಕಾನೂನಿನಡಿಯಲ್ಲಿ ಸಿಕ್ಕಿಬಿದ್ದರೆ, ಆತನಿಗೆ ಕ್ಷಮೆ ಅಸಾಧ್ಯ. ಮುಖ್ಯವಾಗಿ ಆತನಿಗೆ ದೇಶದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸಬೇಕು. ಹಾಗೂ ಸರ್ಕಾರಿ ಉದ್ಯೋಗಕ್ಕೆ ಅನರ್ಹಗೊಳಿಸಬೇಕು. ಹಿರಿಯ ವಿದ್ಯಾರ್ಥಿಗಳ ನಾವು ಎಂದು ಬಿಗುವ ದರಿದ್ರರಿಗೆ ಈ ರೀತಿಯಿಂದಲಾದರೂ ಬುದ್ಧಿಬರಬಹುದೇನೂ ?

ಪೂರಕ ಓದಿಗೆ: ಹಿಮಾಚಲ ಪ್ರದೇಶ ರ‌್ಯಾಗಿಂಗ್ ಗೆ ವಿದ್ಯಾರ್ಥಿ ಬಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+