ಒರಿಸ್ಸಾ, ಇಂದು ನವೀನ್ ಪಟ್ನಾಯಕ್ ಹಣೆಬರಹ
ಭುವನೇಶ್ವರ,
ಮಾ. 11 : ಒರಿಸ್ಸಾದ ರಾಜಕೀಯ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದ್ದು, ಇಂದು ಮುಖ್ಯಮಂತ್ರಿ ನವೀನ ಪಟ್ನಾಯಕ್ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. 147 ಶಾಸಕರನ್ನು ಹೊಂದಿರುವ ಒರಿಸ್ಸಾ ವಿಧಾನಸಭೆಯಲ್ಲಿ ಸರ್ಕಾರಕ್ಕೆ 74 ಶಾಸಕರ ಸಂಖ್ಯಾಬಲ ಅಗತ್ಯವಿದೆ. ಅಗತ್ಯ ಸಂಖ್ಯಾಬಲ ಪಡೆಯುವಲ್ಲಿ ನವೀನ ಪಟ್ನಾಯಕ್ ವಿಫಲವಾದರೆ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳಲಿದ್ದಾರೆ. id="toptextpromo">ಕಳೆದ
ಮಾರ್ಚ್ 11 ರಂದು ಬಿಜೆಪಿ ಹಾಗೂ ಬಿಜೆಡಿ ಮೈತ್ರಿ ಮುರಿದು ಬಿದ್ದ ನಂತರ ಒರಿಸ್ಸಾದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗೆ ನಡೆಯತೊಡಗಿವೆ. ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಮಾರ್ಚ್ 11 ರಂದು ಸದನದಲ್ಲಿ ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲ ಎಂ ಸಿ ಭಂಡಾರೆ ಅವರು ನವೀನ ಪಟ್ನಾಯಕ್ ಅವರಿಗೆ ಸೂಟನೆ ನೀಡಿದ್ದಾರೆ. ಇದರಿಂದ ಇಂದು ಸದನದಲ್ಲಿ ವಿಶ್ವಾಸ ಮತ ಕಾರ್ಯಕ್ರಮ ನಡೆಯಲಿದೆ. ಬಿಜೆಡಿ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆ ಮಧ್ಯೆ ಕೆಲ ಬಿಜೆಡಿ ಶಾಸಕರು ವಿಪ್ ಉಲ್ಲಂಘಿಸಿ ಸರ್ಕಾರದ ವಿರುದ್ಧ ಮತ ಚಲಾಯಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ವಿಶ್ವಾಸಮತ ಕಾರ್ಯಕ್ರಮದಿಂದ ದೂರು ಉಳಿಯುವ ಸಾಧ್ಯತೆಗಳಿವೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications